ಸ್ವಾಸ್ಥ ಸಮಾಜದ ಕಡೆ ಯುವಕರು ಗಮನ ಹರಿಸಬೇಕು : ಅಜಿತ ಭಾಗಮಾರ.
ಸ್ವಾಸ್ಥ ಸಮಾಜದ ಕಡೆ ಯುವಕರು ಗಮನ ಹರಿಸಬೇಕು : ಅಜಿತ ಭಾಗಮಾರ.
ಶ್ರೀ ಕಾಲಕಾಲೇಶ್ವರ ಬೇಕರಿ ಅಸೋಸಿಯೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಲಹೆ.
ಗಜೇಂದ್ರಗಡ::
ನಗರದ ಮೈಸೂರು ಮಠದಲ್ಲಿ ಶ್ರೀ ಕಾಲಕಾಲೇಶ್ವರ ಬೇಕರಿ ಅಸೋಸಿಯನ್ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಗಣ್ಯ ವ್ಯಾಪಾರಸ್ಥರಾದ ಅಜಿತಕುಮಾರ ಭಾಗಮಾರ ಉದ್ಘಾಟಿಸಿ ಮಾತನಾಡಿದರು
ಮಾನವನ ಬದುಕಿನಲ್ಲಿ ಜಂಜಾಟಗಳನ್ನು ತೊಡೆದು ನಿತ್ಯದ ಕಾಯಕದಲ್ಲಿ ಲವಲವಿಕೆಯಿಂದ ತೊಡಗಿಸಿಕೊಳ್ಳುವುದರ ಮೂಲಕ ಆರೋಗ್ಯವನ್ನು ಸಮತೋಲನ ಕಾಪಾಡಿಕೊಳ್ಳಬಹುದು ಇದರಿಂದ ಸ್ವಾಸ್ಥ ಸಮಾಜದ ಕಡೆ ಯುವಕರು ಗಮನ ಹರಿಸಬೇಕು.
ಕಾಲಕಾಲೇಶ್ವರ ಬೇಕರಿ ಅಸೋಸಿಯೇಷನ್ ಅವರು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಇಂತಹ ಅಸೋಸಿಯೇಷನ್ಗಳ ಕಾರ್ಯಗಳು ಬೇರಾವ ಅಸೋಸಿಯೇಷನ್ ಅವರು ಮಾಡಿಲ್ಲ ಇಂತಹ ಮಹಾನ್ ಕಾರ್ಯಕ್ಕೆ ಮುಂದಾಗಿದ್ದು ನಿಜಕ್ಕೂ ಸಮಾಜಮುಖಿಯಾಗಿರುವುದಕ್ಕೆ ಸಾಕ್ಷಿಯಾದಂತಾಗಿದೆ ಎಂದರು.
ಬಳಿಕ ದಿವ್ಯ ಸಾನಿದ್ಯ ವಹಿಸಿದ ಹಜರತ ಸೈಯದ್ ನಿಜಾಮುದ್ದೀನ್ ಶಾ ಟೇಕೆದ್ದ ಬಾವಾನವರು ಮಾತನಾಡಿ ಆಧುನಿಕ ದಿನಗಳಲ್ಲಿ ಬಿಪಿ, ಶುಗರ್ ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸರ್ವೇಸಾಮಾನ್ಯವಾಗಿವೆ ಇವು ಶ್ರೀಮಂತರ ಕಾಯಿಲೆಗಳಾಗಿದ್ದು ಬಡ ಜನರು ಆರ್ಥಿಕವಾಗಿ ಬರಿಸಲು ಅಸಾಧ್ಯವಾಗಿದೆ ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೆ ಒಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಅದಕ್ಕೆ ಮಾಡಿರುವ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಇಂತಹ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿನಿತ್ಯ ನಾವು ಸಮಾಜದಲ್ಲಿ ಸಾರ್ವಜನಿಕರ ಒಡನಾಟದಲ್ಲಿ ಇರುತ್ತೇವೆ ಪ್ರಸ್ತುತವಾಗಿ ಪರಿಶುದ್ಧ ಗಾಳಿ ಆಹಾರ ಸದ್ಬಳಕೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಅಂದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಮ್ಮ ಕಾರ್ಯಕಾಲೇಶ್ವರ ಬೇಕರಿ ಅಸೋಸಿಯೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಇದರಿಂದ ಸಾರ್ವಜನಿಕರ ಹೊರನಾಟಕ್ಕೆ ಸಾಕ್ಷಿಯಾಗಿದ್ದೇವೆ ದೇಹದ ಅನೇಕ ರೋಗಗಳಿಗೆ ಕಾರಣವಾಗಿದೆ ಅದರಿಂದ ನಾವೆಲ್ಲರೂ ದೂರವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿದ್ದಲಿಂಗೇಶ್ವರ ಆಸ್ಪತ್ರೆಯ ವೈದ್ಯರಾದ ಡಾ.ಸುವರ್ಣಾ ಕನಕೇರಿ, ಡಾ. ನವೀನ ನಂದೆಪ್ಪಗೌಡರ, ಡಾ.ಶಕೀಲ ಅಹ್ಮದ ದಂದರಗಿ ಹಾಗೂ ಬಿ.ಎಮ್.ಜೆ.ಕಾಲೇಜಿನ ಪೈನಲ್ ವರ್ಷದ ವಿಧ್ಯಾರ್ಥಿಗಳು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಮೋಹನ ಕನಕೇರಿ, ಎಸ್.ವಾಯ್. ಮುಧೋಳ, ಲೋಕೇಶ್ ರಾಠೋಡ, ಅರ್ಜುನ ನಿರಲಗಿ, ರಾಮಸಿಂಗ್ ಠಾಕೂರ, ಪರಶುರಾಮ ಕುಂಬಳೇಕರ, ಬಸಯ್ಯ ಬಿಕ್ಷಾವತಿಮಠ, ಮಹಿಪಾಲಸಿಂಗ ಶೇಖಾವತ, ಮಹಾಂತೇಶ ಕಲಾಲ, ರಾಜೇಶ ಜಾಧವ, ಉಮಯ್ಯ ಹಿರೇಮಠ, ಅಲಿ ಸಾಗರ ಸೇರಿದಂತೆ ಅನೇಕರು ಇದ್ದರು.