ಗದಗಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಕಾರು ಅಪಘಾತ: ಸೂಡಿಯ ಮಹಾಗಣಪತಿ ಧರ್ಮದರ್ಶಿ ಗಣಪತಿಭಟ್ಟ ಜೋಶಿ ಸ್ಥಳದಲ್ಲೇ ಸಾವು; ಇಬ್ಬರ ಸ್ಥಿತಿ ಗಂಭೀರ
ಕಾರು ಅಪಘಾತ: ಸೂಡಿಯ ಮಹಾಗಣಪತಿ ಧರ್ಮದರ್ಶಿ ಗಣಪತಿಭಟ್ಟ ಜೋಶಿ ಸ್ಥಳದಲ್ಲೇ ಸಾವು; ಇಬ್ಬರ ಸ್ಥಿತಿ ಗಂಭೀರ
ಗಜೇಂದ್ರಗಡ::
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅಪಘಾತಕ್ಕೀಡಾದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಬಳಿಯ ಹಾಲಿನ ಕೇಂದ್ರದ ಹತ್ತಿರ ನಡೆದಿದೆ.
ಅಪಘಾತದಲ್ಲಿ ಸೂಡಿ ಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ ಗಣಪತಿಭಟ್ಟ ಜೋಶಿ ಸಾವನ್ನಪ್ಪಿದ್ದು, ಮೃತರ ಮಗ ಕಿರಣ ಜೋಶಿ ಹಾಗೂ ಸೊಸೆ ವೈಷ್ಣವಿ ಅವರಿಗೆ ಗಂಭೀರ ಗಾಯಗಳಾಗಿವೆ.
ಮದುವೆ ಕಾರ್ಯ ಮುಗಿಸಿ ಲಿಂಗಸಗೂರಿನಿಂದ ಸೂಡಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಣಪತಿ ಭಟ್ (70) ಎಂಬವರು ಸಾವನ್ನಪ್ಪಿದ್ದಾರೆ.
ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ಕಿರಣ್, ವೈಷ್ಣವಿ ಭಟ್ಗೆ ಗಾಯಗಳಾಗಿವೆ. ಗಾಯಾಳುಗಳನ್ನ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿದ್ರೆ ಮಂಪರಿಯಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗಜೇಂದ್ರಗಡ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.