ನಗರ ಅಭಿವೃದ್ಧಿಗೆ 142.76 ಲಕ್ಷ ರೂ ಗೆ ಭೂಮಿಪೂಜೆ.
ನಗರ ಅಭಿವೃದ್ಧಿಗೆ 142.76 ಲಕ್ಷ ರೂ ಗೆ ಭೂಮಿಪೂಜೆ.
ಗಜೇಂದ್ರಗಡ::
ಗಜೇಂದ್ರಗಡ ನಗರದಲ್ಲಿನ ವಾಜಪೇಯಿ ನಗರದ ಸಮುದಾಯದ ಭವನದ ಹತ್ತಿರ 2021-22 ಮತ್ತು 2023-24 ನೇ ಸಾಲಿನ 15 ನೇ ಹಣಕಾಸು ಎಸ್ ಎಫ್ ಸಿ ಯೋಜನೆ ಅಡಿಯಲ್ಲಿ ನೀರು ಸರಬರಾಜು , ರಸ್ತ , ಚರಂಡಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ಜಿ.ಎಸ್.ಪಾಟೀಲ ನೇರವೇರಿಸಿ ಮಾತನಾಡಿದರು.
ನಗರವನ್ನು ಸ್ವಚ್ಛ ಸುಂದರ ಬಹಳ ದಿನಗಳಿಂದ ಅವಶ್ಯಕತೆ ಇರುವ ಕಾರಣದಿಂದ ಪುರಸಭೆ 15 ನೇ ಹಣಕಾಸು ಮತ್ತು ಎಸ್ ಎಫ್ ಸಿ ಅನುದಾನದ ಸುಮರು 142.76 ಲಕ್ಷ ರೂ ಗಳ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ್ದೆನೆ.ಇನ್ನೂ ಒಂದು ಕೋಟಿ ರೂ. ಮಂಜೂರಾತಿ ಹಂತದಲ್ಲಿ ಇದ್ದು ಶೀಘ್ರದಲ್ಲೆ ಮಂಜೂರರಾತಿ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಪುರಸಭೆ ಅಧಿಕಾರಿಗಳು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಕಾಯ್ದುಕೊಳ್ಳಲು ಸೂಚನೆ ನೀಡಿದರು.
ಇನ್ನೂ ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ , ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ , ಪುರಸಭೆ ಸದಸ್ಯರಾದ , ಶಿವರಾಜ ಘೋರ್ಪಡೆ , ರಾಜು ಸಾಂಗ್ಲಿಕರ ವೆಂಕಟೇಶ ಮುದುಗಲ , ಸಿದ್ದಪ್ಪ ಬಂಡಿ, ಪ್ರಶಾಂತ ರಾಠೋಡ, ಯಲ್ಲಪ್ಪ ಬಂಕದ , ಚಂಬಣ್ಣ ಚವಡಿ , ಶ್ರೀಧರ ಬಿದರಳ್ಳಿ , ಬಸವರಾಜ ಹೂಗಾರ , ಮುತ್ತಣ್ಣ ಮ್ಯಾಗೇರಿ , ಬಸವರಾಜ ಚನ್ನಿ , ಹಸನ ತಟಗಾರ, ಪರಶು ಹಾಳಕೇರಿ, ಪ್ರಕಾಶ ಕಲ್ಗುಡಿ, ಸಿದ್ದು ಗೊಂಗಡಶೆಟ್ಟಿಮಠ, ಅಂದಪ್ಪ ರಾಠೋಡ, ಹನಮಂತ ಗೌಡ್ರ, ಪರಸಪ್ಪ ಹಾಳಕೇರಿ, ದಾದು ಹಣಗಿ , ಉಮೇಶ ರಾಠೋಡ, ಕಲ್ಲಪ್ಪ ರಾಮಜಿ, ತಿರುಪತಿ ಕಲ್ಲೊಡ್ಡರ , ಮೂಕಪ್ಪ ಗೂಡುರ, ಮಂಜುಳಾ ರೇವಡಿ, ಶಾರಧಾ ರಾಠೋಡ ಸೇರಿದಂತೆ ಅನೇಕರು ಇದ್ದರು.