ನರೇಗಲ್: ವಿದ್ಯುತ್ ನಿಲುಗಡೆ ಸೆ. 4ಕ್ಕೆ
—-
ನರೇಗಲ್:
ಪಟ್ಟಣದ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ(ಕೆ.ವಿ 110/11) ತ್ರೈಮಾಸಿಕ ನಿರ್ವಹಣಾ ಕೆಲಸದ ಸಲುವಾಗಿ ಸೆ. 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30 ಗಂಟೆಯವರೆಗೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ. ಈ ಉಪ ಕೇಂದ್ರಕ್ಕೆ ಸಂಬಂಧಿಸಿದ ಗ್ರಾಮಗಳಾದ ನರೇಗಲ್, ಕೋಡಿಕೊಪ್ಪ, ಮಲ್ಲಾಪುರ, ತೋಟಗಂಟಿ, ಬೂದಿಹಾಳ, ಕೋಚಲಾಪುರ, ದ್ಯಾಂಪುರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಮಾರನಬಸರಿ, ಜಕ್ಕಲಿ, ಕೋಟುಮಚಗಿ, ನಾರಾಯಣಪುರ, ಅಬ್ಬಿಗೇರಿ, ಯರೇಬೆಲೇರಿ, ನಾಗರಾಳ, ಕುರುಡಗಿ, ಡ.ಸ.ಹಡಗಲಿ, ಗುಜಮಾಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹೆಸ್ಕಾಂ ನೊಂದಿಗೆ ಸಹಕರಿಸಬೇಕು ಎಂದು ಹೆಸ್ಕಾಂ ರೋಣ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದರು.