ಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚುನಾವಣೆ

Share News

ಕಾಂಗ್ರೆಸ್‌ ಪಕ್ಷಕ್ಕೆ ಯುವಕರೆ ನಿಜವಾದ ಶಕ್ತಿ

ಬೇರು ಮಟ್ಟದಿಂದ ಪಕ್ಷ ಬೆಳೆಸಲು ಯುವಕರು ಆಧಾರ

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚುನಾವಣೆ
—-
ನರೇಗಲ್:‌

ಕಾಂಗ್ರೆಸ್ ಪಕ್ಷ ದೇಶದ ಯುವಕರಿಗೆ ಮೊದಲ ಆದ್ಯತೆ ನೀಡುತ್ತದೆ ಅವರಿಗೆ ಅನೇಕ ರೀತಿಯಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಆದ್ದರಿಂದ ಯುವ ಜನರ ಎಲ್ಲ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ರಾಜ್ಯ ಯುವ ಕಾಂಗ್ರೆಸ್‌ ಚುನಾವಣೆ ಮಹತ್ವದ್ದಾಗಿದೆ ಎಂದು ಅಭ್ಯರ್ಥಿ ಅಕ್ಷಯ ಐ. ಪಾಟೀಲ ಹೇಳಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಆನ್‌ಲೈನ್‌ನಲ್ಲಿ ಆರಂಭವಾಗಿರುವ ಮತದಾನ ಪ್ರಕ್ರಿಯೆಯ ಅಂಗವಾಗಿ ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಆಶ್ರಯ ಕಾಲೋನಿಯಲ್ಲಿ ನಡೆದ ಮತದಾನ ಪ್ರಕ್ರಿಯೇಯಲ್ಲಿ ಮಾತನಾಡಿದರು.

ಆನ್‌ಲೈನ್‌ ಮತದಾನ ಪ್ರಕ್ರಿಯೆ ಭರದಿಂದ ಸಾಗಿದ್ದು, ಪ್ರತಿ ಗ್ರಾಮದಲ್ಲೂ ಉತ್ಸಾಹ ಮತ್ತು ಪೈಪೋಟಿಯಿಂದ ಯುವಕರು ಮತದಾನ ಮಾಡುತ್ತಿರುವುದು ನೋಡಿದರೆ ಸಂತೋಷವಾಗುತ್ತದೆ ಎಂದರು. ಮೊಬೈಲ್‌ ಬಳಕೆ ಮಾಡಿಕೊಂಡು ಮತದಾನ ಮಾಡುವ ಅಗತ್ಯವಿರುವ ಕಾರಣ ಮತದಾರರಿಗೆ ಮಾಹಿತಿ ನೀಡಲು ಪ್ರತಿ ಗ್ರಾಮದಲ್ಲೂ ಪಕ್ಷದ ಯುವಕರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. 18 ರಿಂದ 35 ವರ್ಷದೊಳಗಿನ ಯುವಕರು ಮೊಬೈಲ್‌ ನಲ್ಲಿ ‘ಐವೈಸಿ’ಆ್ಯಪ್‌ ಡೌನ್ಲೋಡ್ ಮಾಡಿಕೊಂಡು ಚುನಾವಣೆ ಆಯೋಗ ನೀಡಿರುವ ಗುರುತಿನ ಚೀಟಿಯನ್ನು ಹೊಂದಿರುವವರು ಮತ ನೀಡಲು ಅವಕಾಶ ಇದೆ. ಪ್ರತಿ ಮತವು ಕೂಡ ನಿರ್ಣಾಯಕ ಪಾತ್ರ ವಹಿಸುವ ಕಾರಣ ಸೆ. 20 ರ ಒಳಗೆ ಉದಾಸೀನ ಮಾಡದೇ ಅಮೂಲ್ಯ ಮತವನ್ನು ತಪ್ಪದೇ ಚಲಾಯಿಸಬೇಕು ಎಂದರು.

 

ಯುವಕರು ದೇಶ ಕಟ್ಟುವ ಮನೋಭಾವ ಬೆಳೆಸಿಕೊಂಡು ರಾಜಕೀಯಕ್ಕೆ ಬರುತ್ತಾರೋ ಆಗ ದೇಶ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ. ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಲು ಯುವ ಶಕ್ತಿ ಮುಂದೆಬರಬೇಕು ಎಂದರು. ಕಾಂಗ್ರೆಸ್‌ ಪಕ್ಷವು ಯುವಕರಿಗೆ ರಾಜಕೀಯದ ಜೊತೆಗೆ ಅವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ, ಸಹಾಯ, ಸ್ವಯಂ ಉದ್ಯೋಗಕ್ಕೆ ಅವಕಾಶ, ನೆರವು ನೀಡಲಾಗುತ್ತದೆ. ಇದರಿಂದ ದೇಶದ ಅಭಿವೃದ್ದಿಗೆ ನಮ್ಮ ಪಕ್ಷ ಯುವ ಶಕ್ತಿಗೆ ಆಧಾರವಾಗಿ ನಿಲ್ಲುತ್ತದೆ ಎಂದರು.
ಈ ವೇಳೆ 3ನೇ ವಾರ್ಡಿನಲ್ಲಿ 20ಕ್ಕೂ ಹೆಚ್ಚು ಯುವಕರು ಐವೈಸಿ ಮೊಬೈಲ್‌ ಆ್ಯಪ್‌ ಮೂಲಕ ಮತದಾನ ಮಾಡಿದರು. ನರೇಗಲ್‌ ಕಾಂಗ್ರೆಸ್‌ ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ಅಕ್ಷಯ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ, ಸಂತೋಷ ಹನಮಸಾಗರ, ಅಲ್ಲಾಬಕ್ಷಿ ನದಾಫ್‌, ಕಳಕನಗೌಡ ಪೊಲೀಸ್‌ಪಾಟೀಲ, ಶೇಖಪ್ಪ ಕೆಂಗಾರ, ಸದ್ದಾಂ ನಶೇಖಾನ್, ಪ್ರಕಾಶ ಪಾದಗಟ್ಟಿ, ಸಮೀರ ಗೌಡರ, ಮಹೇಶ ಧಡೆಸೂರಮಠ, ಸಮೀರ ನದಾಫ್, ಮೌಲಾಸಾಬ್ ನಶೇಖಾನ್ ಇದ್ದರು.


ಪೋಟೋ ಶಿರ್ಷಿಕೆ: 
ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಆಶ್ರಯ ಕಾಲೋನಿಯಲ್ಲಿ ಮೊಬೈಲ್ ಮೂಲಕ ಮತ ಚಲಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಅಕ್ಷಯ ಪಾಟೀಲ ಹಾಗೂ ಮುಖಂಡರ ಜೊತೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು


Share News

Related Articles

Leave a Reply

Your email address will not be published. Required fields are marked *

Back to top button