ಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿ

ದೇಶದ ಹಿತಕ್ಕೆ ಬಿಜೆಪಿ ಪಕ್ಷ ಸೂಕ್ತ ಸ್ವಯಂ ಪ್ರೇರಣೆಯಿಂದ ಸದಸ್ಯತ್ವ ಪಡೆಯಿರಿ: ಮಾಜಿ ಸಚಿವ ಕಳಕಪ್ಪ ಬಂಡಿ.

Share News

ಬಿಜೆಪಿ ಸದಸ್ಯತ್ವ ಅಭಿಯಾನ
ದೇಶದ ಹಿತಕ್ಕೆ ಬಿಜೆಪಿ ಪಕ್ಷ ಸೂಕ್ತ ಸ್ವಯಂ ಪ್ರೇರಣೆಯಿಂದ ಸದಸ್ಯತ್ವ ಪಡೆಯಿರಿ: ಮಾಜಿ ಸಚಿವ ಕಳಕಪ್ಪ ಬಂಡಿ.

ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್ 

ಗಜೇAದ್ರಗಡ:

ಬಲಿಷ್ಠವಾದ ಆರ್ಥಿಕತೆಯ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಸಚಿವರಾದ ಕಳಕಪ್ಪ ಬಂಡಿ ತಿಳಿಸಿದರು.


ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕೊಪ್ಪ, ರಾಮಾಪುರ, ಚಿಲಝರಿ, ವೀರಾಪುರ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ಘಟಕದ ವತಿಯಿಂದ ಸೋಮವಾರ ನಡೆಸಿದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಷ್ಟದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಸದಸತ್ವ ಅಭಿಮಾನ ದೇಶದಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು,ದೇಶದ ಪ್ರತಿಯೊಬ್ಬ ನಾಗರಿಕರೂ ಬಿಜೆಪಿಯ ಸದಸ್ಯರಾಗಿ ದೇಶದ ಅಭಿವೃದ್ದಿಗೆ ಕೈಜೋಡಿಸಬೇಕು. ದೇಶದ ಹಿತಕ್ಕೆ ಯಾವ ಪಕ್ಷ ಸೂಕ್ತ ಎಂಬುದನ್ನು ಅರಿತು ಜನರು ಸ್ವಯಂ ಪ್ರೇರಣೆಯಿಂದ ಸದಸ್ಯತ್ವ ಹೊಂದಲು ಸಲಹೆ ನೀಡಿದರು.

ಬಳಿಕ ರೋಣ ಮಂಡಳದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ ಪಕ್ಷದ ಸದಸ್ಯತ್ವ ಪಡೆದವರಿಗೆ ಪಕ್ಷವೂ ಸೂಕ್ತ ಸ್ಥಾನಮಾನ ಮತ್ತು ಪ್ರಾತಿನಿಧ್ಯ ಕಲ್ಪಿಸುತ್ತದೆ. ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಕಾರ್ಯಕರ್ತರಿಗೆ ಪಕ್ಷವೂ ಪರಿಗಣನೆಗೆ ತೆಗೆದುಕೊಳ್ಳುದರಿಂದ ಕಾರ್ಯಕರ್ತರು ಹೆಚ್ಚೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಉಮೇಶ ಮಲ್ಲಾಪುರ, ಬಾಲಾಜಿರಾವ್ ಬೊಸ್ಲೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪವಾಡೆಪ್ಪ ಗುಡದೂರ,ಪರಸಪ್ಪ ಪೂಜಾರ, ನಿಂಗಪ್ಪ ಹಡಪದ,ಮೈಲ್ಲಾರಪ್ಪ ಮಂಗಳೂರು,ಬಸುವರಾಜ ಮಾದರ,ಪರಶು ಗುಡದೂರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು


Share News

Related Articles

Leave a Reply

Your email address will not be published. Required fields are marked *

Back to top button