ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಅಜ್ಜ/ಜ್ಜಿಯರ ದಿನಾಚರಣೆ.
ಹಿರಿಯ ಜೀವಿಗಳ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗೋಣ : ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ.
ಜನಧ್ವನಿ ಕನ್ನಡ ನ್ಯೂಸ್ ಗಜೇಂದ್ರಗಡ:
ನಗರ ಸಮೀಪದ ಸೈನಿಕನಗರ ಹತ್ತಿರ ಇರುವ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಅಜ್ಜ/ಜ್ಜಿಯರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಮುದ್ದು ಮಕ್ಕಳೊಂದಿಗೆ ಕೇಕ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.
ಬಳಿಕ ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ ಮಾತನಾಡಿ ನೆಹರು ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ.
ಮಕ್ಕಳ ಮನಸ್ಸು ನಿಷ್ಕಲ್ಮಶವಾದುದು. ಮಕ್ಕಳ ಹೊಳೆಯುವ ಕಣ್ಣುಗಳ ತೀಕ್ಷಣೆಯಿಂದ ದೇಶದ ಭವಿಷ್ಯವನ್ನು ಅಳೆಯಬಹುದು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಹಿರಿಯ ಜೀವಿಗಳ ನಡೆದು ಬಂದ ಹಾದಿಯಲ್ಲಿ ಇಂದಿನ ಯುವ ಪ್ರತಿಭೆಗಳು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು.
ಬಳಿಕ ಶಾಲೆಯ ಪ್ರಾಂಶುಪಾಲರಾದ ನಾಜೀಯಾ ಮುದಗಲ್ ಮಾತನಾಡಿ
ನೆಹರು ಅವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ,ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಬಾಳೋಣ ಎಂದು ಹೇಳಿದರು.
ಬಳಿಕ ಕಿರಣ ನಿಡಗುಂದಿಯವರಿಂದ ಹಿರಿಯ ಜೀವಿಗಳ ಜೊತೆ ಮನರಂಜನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿ ಉತ್ಸುಕತೆಯಿಂದ ಅಜ್ಜ ಅಜ್ಜಿಯರು ಭಾಗಿಯಾಗಿದ್ದು ವಿಶೇಷ.
ಕಾರ್ಯಕ್ರಮದಲ್ಲಿ ಅನುಷಾ ತಳವಾರ, ಹೀನಾಕೌಸರ ಅರಳಿಕಟ್ಟಿ, ಅಮೃತಾ ಬದಿ, ಶಬೀನಾ ಬೆಳ್ಳಟ್ಟಿ, ರವಿ ನಿಡಗುಂದಿ, ಸಾವಿತ್ರಿ ಹಾವೇರಿ, ಪುಪ್ಪಾ ಸೇರಿದಂತೆ ಅನೇಕರು ಇದ್ದರು.