ಲೇಖನಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಟ್ರೆಂಡಿಂಗ್ ಸುದ್ದಿಗಳುರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು

Janadhwani Kannada special : ಕನ್ನಡ ಕಟ್ಟಾಳು; ಸೌಹಾರ್ದತೆಯ ನಾಯಕ; ಸರ್ವ ಧರ್ಮಗಳ ಪರಿಪಾಲಕನಿಗೆ ಒಲಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ..!

ಡಿಸೆಂಬರ್- 8 ರಂದು ದಹೆಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ

Share News

Janadhwani News Story  ಜನಧ್ವನಿ ಕನ್ನಡ ವಿಶೇಷ : ಕನ್ನಡಕ್ಕಾಗಿ ಕೈ ಎತ್ತು ನೀನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವ ವಾಣಿಯಂತೆ,‌ಸರ್ವೇಜನ ಸುಖಿನೋ‌ ಭವನೋ ಎನ್ನುವ ಗುಣಗಳೊಂದಿಗೆ, ಪರೋಪಕಾರಂ ಇದಂ ಶರೀರಂ ಎನ್ನುವ ನುಡಿಯಂತೆ ನಡೆಯುವ. ಸರ್ವ ಜನಾಂಗದ ಹಿತ ಚಿಂತನೆಯ ಹರಿಕಾರ, ನೇರ ಮಾತಿನ ಮಲ್ಲ, ಮಾತಿಗೆ ನಿಂತರೆ ಎಂತಹ ಚತುರನ್ನು ತನ್ನಂತ ಸೆಳೆಯುವ ಮಾತಿನ ಮಹಾಮಲ್ಲ, ಹೀಗೆ ಹತ್ತು ಹಲವು ಕಲೆಯನ್ನು ಕರಗತ ಮಾಡಿರುವ, ಸಮಾಜ ಸೇವೆಯನ್ನು ಎಲೆ ಮರೆಕಾಯಿಯಂತೆ ಮಾಡಿರುವ ಸಮಾಜ ಸೇವಕರಾದ ಶ್ರೀಯುತ ರಾಜೇಸಾಬ ಅಮೀನಸಾಬ ಸಾಂಗ್ಲೀಕರ ಅವರಿಗೆ ರಾಷ್ಟ್ರೀಯ ದಲಿತ ಅಕಾಡೆಮಿಯಿಂದ ರಾಷ್ಟ್ರೀಯ ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ ಸಂದ ಹಿನ್ನಲೆಯಲ್ಲಿ ತನ್ನಿ ಮಿತ್ಯ ಲೇಖನ.

ರಾಜೂ‌‌ ಸಾಂಗ್ಲೀಕರ್ ಬಾಲ್ಯ‌ಜೀವನ‌ : ಮೊದಲೇ ಕೂಡು ಕುಟುಂಬ ಹೊಟ್ಟೆಗೂ ಬಟ್ಟೆಗೂ ಹೇಳತೀರದ ಕಡುಬಡತನ. ಕಡು ಬಡತನದಲ್ಲಿ ಬೆಂದು, ಕಮಲದಂತೆ ಅರಳಿ ನೊಂದವರಿಗೆ ಆಶ್ರಯದಾತನಾಗಿ, ನಾಯಕನಾಗಿ, ಹೋರಾಟಗಾರನಾಗಿ, ಉದ್ಯಮಿಯಾಗಿ, ಹೀಗೆ ಹತ್ತು ಹಲವು ಮಜಲುಗಳನ್ನು ಕಂಡಿರುವ ಪುರಸಭೆ ಸದಸ್ಯ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಮುಸ್ಲಿಂ ಸಮಾಜದ ಧುರೀಣ, ಉದ್ಯಮಿ ರಾಜು ಸಾಂಗ್ಲೀಕಾರ ಅವರ ಬದುಕು ಬರಹವಿದು.

ತಂದೆ ಅಮೀನಸಾಬ ತಾಯಿ ಮಾಬೂಬಿ ದಂಪತಿಗಳಿಗೆ 8 ಜನ ಮಕ್ಕಳು ಅದರಲ್ಲಿ 6 ನೇ ಮಗನಾಗಿ ರಾಜೇಸಾಬ ಸಂಗ್ಲೀಕಾರ ಜನಿಸುತ್ತಾರೆ‌. ಕೋಟೆನಾಡಿನ ರಾಜವಾಡೆಯ ಅಂಗಳದಲ್ಲಿ ಆಡಿ ಬೆಳೆದ ಹುಡುಗ ರಾಜು, ಸಹಜವಾಗಿಯೇ ಅಲ್ಲಿನ ಸೌಹಾರ್ದತೆಯ ಮಣ್ಣಿನ ಗುಣ ಬಾಲ್ಯದಲ್ಲಿಯೇ ಸೇರಿಕೊಂಡಿತ್ತು.

ಸಾಂಗ್ಲೀಕಾರ ಕುಟುಂಬವೆಂದರೆ ಅವಿಭಕ್ತ ಕುಟುಂಬ, ಒಂದೇ ಕುಟುಂಬದಲ್ಲಿ 80 ಕ್ಕೂ ಹೆಚ್ಚು ಮನೆಯ ಸದಸ್ಯರು ವಾಸಿಸುವ ಜಿಲ್ಲೆಯಲ್ಲಿಯೇ ಬಹು ದೊಡ್ಡ ಕುಟುಂಬವಾಗಿದೆ.

ಹೀಗಿದ್ದಾಗ SSLC ವರೆಗೂ ಅಧ್ಯಯನ ಮಾಡಿ, ಹಿರಿಯ ಅಣ್ಣ ದಾದೇಸಾಬ ಸಾಂಗ್ಲೀಕಾರ ಅವರ ಮಾರ್ಗದರ್ಶನದಲ್ಲಿ ಮನೆಯ ಜವಾಬ್ದಾರಿ ಯನ್ನು ಹೆಗಲಿಗೆ ಹೊತ್ತುಕೊಂಡು ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕುಟುಂಬದ ಜವಾಬ್ದಾರಿ ಎಂಬ ಬಹು ದೊಡ್ಡ ನೇಗಿಲುನ್ನು ಹೊತ್ತು ಮುಂದೆ ಸಾಗುತ್ತಾರೆ.

ಯುವಕರಿಗೆ ಉದ್ಯೋಗಕ್ಕಾಗಿ ಒತ್ತಾಯಿಸಿ ಮೊಟ್ಟ ಮೊದಲ ಬಾರಿಗೆ DYFI ಸಂಘಟನೆಯ ಮೂಲಕ ಚಳುವಳಿಗೆ ಧುಮುಕ್ಕುತ್ತಾರೆ.

ಬಳಿಕ ಕರ್ನಾಟಕ ರಕ್ಷಣಾ ವೇದಿಕೆ, ಕಜವೇ, ಮೂಲಕ ಕನ್ನಡ ನಾಡು ನುಡಿ ಸೇವೆಗೆ ರಾಜ್ಯಾದ್ಯಂತ ಸಂಚರಿಸುತ್ತಾರೆ.
ಕಾಯಕವೇ ಕೈಲಾಸ ಎಂಬಂತೆ ತಮ್ಮ ಕೆಲಸದಲ್ಲಿ ಪ್ರಗತಿ ಹೊಂದಿ ಮುಂದೆ ಸಹೋದರ ಸಹಕಾರದೊಂದಿಗೆ ಅಮರ ಗ್ರೂಪ್ ಸಂಸ್ಥೆ ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಕಿರಾಣಿ ಅಂಗಡಿ, ಪ್ರಿಂಟಿಂಗ್ ಪ್ರೆಸ್, ಆಸ್ಪತ್ರೆ, ಫರ್ನಿಚರ್ಸ್, ಹೀಗೆ ಸಾಲು ಸಾಲು ಉದ್ಯಮಗಳನ್ನು ಕಟ್ಟಿ ಬೆಳೆಸುವಲ್ಲಿ ರಾಜು ಅವರ ಪಾತ್ರ ಮುಖ್ಯವಾಗಿದೆ.

ರಾಜಕೀಯ ಪ್ರವೇಶ: ಸಮಾಜ ಸೇವೆಯನ್ನು ಮಾಡಲು ಕೇವಲ ಸಾಮಾಜಿಕ ರಂಗದಲ್ಲಿದ್ದರೆ ಸಾಲದು, ರಾಜಕೀಯವಾಗಿ ಸಕ್ರೀಯಬಾಗಿ ಭಾಗಿಯಾದಾಗ ಮಾತ್ರ ಮತ್ತಷ್ಟು ಸಮಾಜ ಸೇವೆ ಮಾಡಲು, ನೊಂದವರ ಕಣ್ಣೀರು ಒರೆಸಲು ಸಾಧ್ಯ ಎಂದು ಅರಿತ ಅವರು,
2013 ರ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋಲನ್ನನುಭವಿಸಿ ಸೋತಲ್ಲಿಯೇ ಸಾಧಿಸುವೆ ಎನ್ನುವ ಹಠ ಬಿಡದೇ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವ ಮೂಲಕ 2018 ರ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸುತ್ತಾರೆ.

ಪುರಸಭೆ ಸದಸ್ಯರಾದ ಬಳಿಕ ವಾರ್ಡಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ವಿಶ್ವಾಸ, ಮೆಚ್ಚುಗೆ ಗಳಿಸುತ್ತಾರೆ. ಇಷ್ಟೆಯಲ್ಲದೇ ಇವರ ಕಾರ್ಯಗಳನ್ನು ಗಮನಿಸಿದ ಶಾಸಕರು, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ.

ಇದರೊಂದಿಗೆ ಪಕ್ಷ ಸಂಘಟಿಸುವ ಮೂಲಕ ಮತ್ತಷ್ಟು ಮೆಚ್ಚುಗೆ ಯನ್ನು ಪಡೆದ ರಾಜು ಅವರನ್ನು ಸರ್ಕಾರ, ಗಜೇಂದ್ರಗಡ ಸಮುದಾಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸುತ್ತದೆ.

ಕರೋನಾ ವಾರಿಯರ್ ಆಗಿ ರಾಜೂ : ಕರೋನಾ ಮಹಾಮಾರಿ ಅಪ್ಪಳಿಸಿದಾಗ ಹೊರ ಬರಲು ಅಂಜುತ್ತಿದ್ದ ಜನರ ನಡುವೆ ರಾಜು ಸಂಗ್ಲೀಕಾರ ಅವರು ಯುವ ಪಡೆಯನ್ನು ಕಟ್ಟಿಕೊಂಡು ಹಳ್ಳಿ ಹಳ್ಳಿಗಳಿಗೆ ನಿರಾಶ್ರಿತರರಿಗೆ ಊಟದ ವ್ಯವಸ್ಥೆ ಕಲ್ಪಿಸಿದರು.

ಇದೀಗ ನಗರದಲ್ಲಿನ ಸೌಹಾರ್ದತೆಯ ಬಸವ ಪುರಾಣ ಕಾರ್ಯಕ್ರಮ ನಡೆಯುತ್ತಿದ್ದು ಬಸವ ಪುರಾಣ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯಕ್ರಮವನ್ನು ಶ್ರೀಗಳ ಸಲಹೆ ಮೇರೆಗೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಾಗಿರುವ ರಾಜು ಸಂಗ್ಲೀಕಾರ ಅವರಿಗೆ ಅನೇಕ ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿ, ಗೌರವವನ್ನು ನೀಡಿ ಸನ್ಮಾನಿಸಿವೆ. ಇದೀಗ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯು ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಇನ್ನಷ್ಟು ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಯಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ.

ಲೇಖನ : ಸೀತಲ ಓಲೇಕಾರ.
ಸಂಪಾದಕರು ಜನಧ್ವನಿ ಕನ್ನಡ ಸುದ್ದಿವಾಹಿನಿ


Share News

Related Articles

Leave a Reply

Your email address will not be published. Required fields are marked *

Back to top button