ಅಂತಾರಾಷ್ಟ್ರೀಯಆರೋಗ್ಯ ಇಲಾಖೆಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಲಿಂಗ ಸಮಾನತೆ, ನೈತಿಕ ಮೌಲ್ಯಗಳ ಪ್ರತಿಪಾದನೆಗೆ ಬಸವ ಪುರಾಣ ಅವಶ್ಯ; ಮುಪ್ಪಿನ ಬಸವ ಲಿಂಗ ಮಹಾಸ್ವಾಮಿಗಳು.

Share News

ಲಿಂಗ ಸಮಾನತೆ, ನೈತಿಕ ಮೌಲ್ಯಗಳ ಪ್ರತಿಪಾದನೆಗೆ ಬಸವ ಪುರಾಣ ಅವಶ್ಯ; ಮುಪ್ಪಿನ ಬಸವ ಲಿಂಗ ಮಹಾಸ್ವಾಮಿಗಳು.

ಜಗತ್ತಿನ ಒಳಿತಿಗಾಗಿ ಬಸವ ಪುರಾಣದಂತ ಧಾರ್ಮಿಕ ಕಾರ್ಯಕ್ರಮಗಳ ನಡೆಯಬೇಕಿದೆ : ಹಾಲಕೇರಿ ಶ್ರೀಗಳು ಅಭಿಮತ.

ಗಜೇಂದ್ರಗಡ : ಜನಧ್ವನಿ‌ ಕನ್ನಡ (ನ -04).

ಆಧುನಿಕ ತಂತ್ರಜ್ಞಾನದಿಂದ ಜಗತ್ತು ಸಣ್ಣದಾಗುತ್ತಾ ಇದೆ. ಜಗತ್ತಿನ ಒಳಿತಿಗಾಗಿ ಬಸವ ಪುರಾಣದಂತ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಿದೆ ಜೊತೆಗೆ ದೊಡ್ಡವರಲ್ಲಿ ಸಣ್ಣತನ ಹೆಚ್ಚಾಗುತ್ತಿವೆ. ದೊಡ್ಡವರ ಸಣ್ಣತನ ವಿಚಿತ್ರವಾಗಿದ್ದು ಅವುಗಳಿಗೆ ಬಸವ ಪುರಾಣವೇ ಪರಿಹಾರವಾಗಲಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ಪರಸ್ಪರದಲ್ಲಿ ಪ್ರೀತಿ ವಿಶ್ವಾಸ ಮೂಡಿಸುವ ಸಂಕಲ್ಪದೊಂದಿಗೆ ಬಸವ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಲಕೇರೆ ಮಠದ ಪ್ರಸ್ತುತ ಪೀಠಾಧೀಪತಿಗಳಾದ
ಜಗದ್ಗುರು ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ಪುರ್ತಗೇರಿ ಕ್ರಾಸದಲ್ಲಿನ ಎಸ್.ಎ.ಕಾಲೇಜಿನ ಆವರಣದಲ್ಲಿ‌ ನಡೆದ ಪತ್ರಿಕಾಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು.

ಇದೇ ತಿಂಗಳ ನವಂಬರ್ 25 ರಿಂದ ಡಿಸೆಂಬರ್ 26 ರವರೆಗೆ ನಡೆಯುವ ಬಸವ ಪುರಾಣ ಕಾರ್ಯಕ್ರಮ ಜರುಗಲಿದ್ದು, ರೋಣ ರಸ್ತೆಯಲ್ಲಿನ ಎ.ಪಿ.ಎಂ.ಸಿ ಎದುರಿನ ಬಯಲು ಜಾಗೆಯಲ್ಲಿ ಒಂದು ತಿಂಗಳುಗಳ ಕಾಲ ಬಸವ ಪುರಾಣ ಕಾರ್ಯಕ್ರಮ ಜರುಗಲಿದ್ದು . ಬಸವ ಪುರಾಣಕಾರರಾಗಿ ಅನುಭವಿಗಳಾಗಿರುವ ಇಲಕಲ್ಲಿನ ಅನ್ನದಾನ ಶಾಸ್ತ್ರಿಗಳು ನೆರವೇರಿಸಿಕೊಡಲಿದ್ದಾರೆ. ಕಾರ್ಯಕ್ರಮದ ಉಸ್ತುವಾರಿಯನ್ನು ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ,ವೀರಶೈವ ಲಿಂಗಾಯತ ಸಮಾಜ ಮತ್ತು ಸರ್ವಧರ್ಮದ ಗುರುಹಿರಿಯರು ತೆಗೆದುಕೊಳ್ಳಲಿದ್ದಾರೆ.

ಧರ್ಮ ಜಾಗೃತಿ ಅಂಗವಾಗಿ ಶಿವಯೋಗ ಮಂದಿರದಿಂದ ಮತ್ತು ಗದಗಿನಿಂದ ಬಸವ ಜ್ಯೋತಿ ಸಂಚಾರಗೊಳ್ಳಲಿದೆ. ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪಾದಯಾತ್ರೆ ಬಸವ ತತ್ವಗಳ ಪ್ರಚಾರ, ಬಸವಾದಿ ಶರಣರ ಸಮಕಾಲಿನ ಮಹಾತ್ಮ ಚರಿತ್ರೆಯ ಪ್ರಸರಣಗೊಳ್ಳಲಿದೆ. ಕಾಯಕ ನಿರತ ಸೇವಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರಗುವುದು. ಲಿಂಗ ಸಮಾನತೆ, ನೈತಿಕ ಮೌಲ್ಯಗಳ ಪ್ರತಿಪಾದನೆ ಕಾರ್ಯಕ್ರಮದ ಉದ್ದೇಶ. ಯುವ ಪೀಳಿಗೆಯಲ್ಲಿ ಗುರುಹಿರಿಯರ ಬಗ್ಗೆ ಗೌರವ ಕಾಳಜಿ ನೈತಿಕತೆಗಳನ್ನು ರೂಢಿಸಿಕೊಳ್ಳುವುದಕ್ಕಾಗಿ ಯುವ ಶಿಬಿರಗಳ ಆಯೋಜನೆ ಮಾಡಲಾಗುತ್ತದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಬಸವೇಶ್ವರರ ತತ್ವಾದರ್ಶಗಳನ್ನು ಪ್ರಸ್ತುತಗೊಳ್ಳಲಿವೆ ಎಂದರು.

ಪತ್ರಿಕಾಗೋಷ್ಠಿಯ ಆರಂಭದಲ್ಲಿ ಗಜೇಂದ್ರಗಡ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಮಾತನಾಡಿ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ ಮಹಿಳೆಯರನ್ನು ಗೌರವಧಾರಗಳಿಂದ ಕಂಡಂತ ಶ್ರೇಷ್ಠ ಮಠ. ವಿಶೇಷವಾಗಿ ಮಠದಲ್ಲಿರುವ ಬೆಳ್ಳಿಯ ರಥೋತ್ಸವವನ್ನು ಮಹಿಳೆಯರಿಂದಲೇ ನೆರವೇರಿಸುವ ಪರಂಪರೆಗೆ ನಾಂದಿ ಹಾಡಿದವರು ಅನ್ನದಾನೇಶ್ವರ ಮಹಾಸ್ವಾಮಿಗಳು. ಬಸವ ಪುರಾಣ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಮೂಲಕ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಹಿಳಾ ಸಬಲೀಕರಣ ಮತ್ತು ಗೌರವದಿಂದ ಕಾಣುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಬಸವ ಪ್ರವಚನ ಕಾರ್ಯಕ್ರಮಕ್ಕೆ ಪ್ರತಿನಿತ್ಯ 5,000 ಕ್ಕಿಂತ ಹೆಚ್ಚು ಜನ ಸೇರುವ ಸಂಭವವಿದೆ ಅಲ್ಲದೇ ಪ್ರವಚನಕ್ಕೆ ಸೇರುವ ಎಲ್ಲ ಭಕ್ತಾದಿಗಳಿಗೆ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ಜರುಗಲಿದೆ ಎಂದರು.

ಪ್ರವಚನಕಾರರಾದ ಅನ್ನದಾನ ಶಾಸ್ತ್ರಿಗಳು ಮಾತನಾಡಿ. ಗುರುಪರಂಪರಿಗೆ ಹೆಸರುವಾಸಿಯಾಗಿರುವ ಶ್ರೀ ಅನ್ನದಾನೇಶ್ವರ ಮಠ ಗಜೇಂದ್ರಗಡ ನಗರದಲ್ಲಿ ಬಸವ ಮಹಾಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾವಿರಾರು ರೈತ ಮಹಿಳೆಯರಿಗೆ ಉಡಿ ತುಂಬ ಕಾರ್ಯಕ್ರಮ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಶ್ರೀ ಮಠ. ಬಸವ ಮಹಾಪುರಾಣ ಕಾರ್ಯಕ್ರಮದ ಮೂಲಕ ಬಸವಣ್ಣನವರು ಲಿಂಗಾಯಿತರಿಗೆ ಮಾತ್ರ ಸೀಮಿತವಲ್ಲ ಅಖಂಡ ಮಾನವ ಕುಲಕೋಟಿಗೆ ಸಲ್ಲತಕ್ಕಂಥವರು ಎಂಬ ಸಂದೇಶ ಸಾರುವ ಉದ್ದೇಶವನ್ನು ಹೊಂದಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಮಠಾಧೀಶರು ಭಾಗವಹಿಸಲಿದ್ದು. 5,000 ಮಹಿಳೆಯರ ಮಸ್ತಕದ ಮೇಲೆ ಅಣ್ಣಬಸವಣ್ಣನವರ ಷಟಸ್ಥಲ ವಚನಧಾರೆಗಳ ಪುಸ್ತಕವನ್ನು ಹೊತ್ತುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ವಚನೋೋತ್ಸವ ಕಾರ್ಯಕ್ರಮ ಜರುಗಲಿದೆ. ನಗರ ಮತ್ತು ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಿ ಎಂದರು.

ಇನ್ನೂ ಪತ್ರಿಕಾಗೋಷ್ಠಿಯಲ್ಲಿ
ಅಮರೇಶ ಗಾಣಗೇರ, ಟಿ. ಎಸ್. ರಾಜೂರ, ,ಡಾ. ಬಿ. ವಿ. ಕಂಬಳ್ಯಾಳ,ಶಿವಯ್ಯ ಚಕ್ಕಡಿಮಠ, ಅಪ್ಪು ಮತ್ತಿಕಟ್ಟಿ,ವಸಂತರಾವ್ ಗಾರಗಿ, ಗೋಪಿನಾಥ ರಾಯಬಾಗಿ,ರವಿ ಹಲಗಿ,ಬಸವರಾಜ ಶೀಲವಂತರ, ಬಸಯ್ಯ ಹಿರೇಮಠ, ಕೆ. ಎಫ್. ತೋಟದ, ಗಂಜೀಗೌಡ್ರ, ಬಿಜಕಲ್, ಸಾಲಿಮಠ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button