ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ : ಆರ್.ಎಮ್.ರಾಯಬಾಗಿ.
ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ : ಆರ್.ಎಮ್.ರಾಯಬಾಗಿ.
ಡಿಸೆಂಬರ್ ನಲ್ಲಿ
೫೦ ನೇ ವರ್ಷದ ವಾರ್ಷಿಕೋತ್ಸವದ ಅದ್ದೂರಿ ಕಾರ್ಯಕ್ರಮ : ಸೊಸಾಯಟಿ ಅಧ್ಯಕ್ಷ ವಿಶ್ವನಾಥ ಮೇಘರಾಜ.
ಗಜೇಂದ್ರಗಡ :
ನಗರದ ಶ್ರೀ ಜಗದಂಬಾ ಕೋ ಆಪ್ ಕ್ರೆಡಿಟ್ ಸೊಸಾಯಟಿಯಲ್ಲಿ ೫೦ ನೇ ವರ್ಷದ ವಾರ್ಷಿಕ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಸೊಸಾಯಟಿಯ ಮುಖ್ಯ ಕಾರ್ಯ ನಿರ್ವಾಹಕ ಬಿ.ಎ. ಶಿಂಗ್ರಿ ವಾರ್ಷಿಕ ವರದಿ ಮಂಡಿಸಿದರು.
ಬಳಿಕ ಹಿರಿಯ ನ್ಯಾಯವಾದಿ ಆರ್.ಎಮ್.ರಾಯಬಾಗಿ ಮಾತನಾಡಿ ಬ್ಯಾಂಕಿನ ಶ್ರಯೋಭಿವೃದ್ದಿಗೆ ಸಾಲಗಾರರು ಹಾಗೂ ಠೇವಣಿದಾರರು ಅತಿಮುಖ್ಯ. ಸಾಲ ತೆಗೆದುಕೊಂಡ ಗ್ರಾಹಕರು ಸರಿಯಾದ ಸಮಯಕ್ಕೆ ಸಾಲವನ್ನು ಮರು ಪಾವತಿಯನ್ನು ಮಾಡಬೇಕಿದೆ ಅಂದಾಗ ಮಾತ್ರ ಸೊಸಾಯಟಿಯು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸೊಸಾಯಿಟಿಯ ಅದ್ಯಕ್ಷರಾದ ವ್ಹಿ.ಡಿ. ಮೇಘರಾಜ ಮಾತನಾಡಿದರು.
ವಾರ್ಷಿಕ ಸಭೆಯಲ್ಲಿ ಕೆ.ವ್ಹಿ. ಬಾಂಡಗೆ, ಎಸ್.ಎಸ್.ರಾಯಬಾಗಿ, ಎಮ್.ಎ.ನಾವಡೆ, ಜಿ.ಎಸ್.ಪವಾರ, ಆರ್.ಎಸ್.ಜೀರೆ, ಎಸ್.ಸಿ.ಚನ್ನಿ, ಕೆ.ಎಸ್.ಪವಾರ, ಸಿ.ಎನ್.ರಾಯಬಾಗಿ, ಆರ್.ಎ.ಭಾಡಂಗೆ, ವ್ಹಿ.ಎಸ್.ರಾಯಬಾಗಿ, ನ್ಯಾಯವಾದಿ ಆರ್.ಎಮ್. ರಾಯಬಾಗಿ ಸೇರಿದಂತೆ ಅನೇಕರು ಇದ್ದರು.