ಸ್ಥಳೀಯ ಸುದ್ದಿಗಳುಗದಗಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ
ಚನ್ನಿ ಕುಟುಂಬದಿಂದ ಹಾಲಕೇರಿ ಶ್ರೀಗಳಿಗೆ ಭವ್ಯ ಸ್ವಾಗತ
ಸೋಮವಾರ ಪೂಜ್ಯ ಶ್ರೀಗಳ ಆಗಮನಕ್ಕೆ ಚನ್ನಿ ಕುಟುಂಬದಿಂದ ಭವ್ಯವಾದ ಸ್ವಾಗತ
Janadhwani News Gajendrgada : ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ; ಈಗಾಗಲೇ ಮಾಸಾಂತ್ಯದ ವರೆಗೆ ನಡೆಯುವ ಬಸವ ಪುರಾಣ ಜನಮನಸೊರೆಗೊಂಡಿದೆ. ಈ ಹಿನ್ನಲೆಯಲ್ಲಿ ನಗರವೆಲ್ಲಾ ಭಕ್ತಿಯ ಹೊಳೆಯಲ್ಲಿ ತೆಲುತ್ತಿದೆ.
ಹಾಲಕೇರಿಯ ಶ್ರೀ ಅನ್ನದಾನೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಪ್ರತಿದಿನವೂ ಕೂಡಾ ನಗರದಲ್ಲಿ ಮುಂಜಾನೆ ಒಂದೊಂದು ವಾರ್ಡಗಳಿಗೆ ತೆರಳಿ ಸದ್ಭಾವನಾ ಪಾದಯಾತ್ರೆ ಮಾಡುತ್ತಿದ್ದಾರೆ.
ಶ್ರೀಗಳಿಗೆ ನಗರದ ಜನರೆಲ್ಲರೂ ಕೂಡಾ ಭವ್ಯ ಸ್ವಾಗತವನ್ನು ಮಾಡಿ ಭಕ್ತಿಯನ್ನು ಮೆರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ಪೂಜ್ಯ ಶ್ರೀಗಳ ಆಗಮನಕ್ಕೆ ಚನ್ನಿ ಕುಟುಂಬದಿಂದ ಭವ್ಯವಾದ ಸ್ವಾಗತ ಮಾಡಿ, ಮನೆಯ ಮುಂದೆ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಗಳ ಪಾದಪೂಜೆ ಮಾಡಲಾಯಿತು.