ಅನ್ನದಾನ ಮಹಾಶಿವಯೋಗಿಗಳ ಪುಣ್ಯಸ್ಮರಣೆ : ಅದ್ದೂರಿಯಾಗಿ ನಡೆದ ಅನ್ನದಾನ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ.
ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್:
ಗಜೇಂದ್ರಗಡ:
ಗಜೇಂದ್ರಗಡ ನಗರದ ಕುಂಬಾರ ಓಣಿಯಲ್ಲಿನ ಅನ್ನದಾನೇಶ್ವರ ಶಾಖಾ ಮಠದಲ್ಲಿ ಅನ್ನದಾನ ಮಹಾಶಿವಯೋಗಿಗಳ ಪುಣ್ಯಸ್ಮರಣೆ ಹಾಗೂ ಪೂಜ್ಯರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯು ಪೂಜ್ಯರ ಮಠದಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಭಜರಂಗದಳ ವೃತ್ತ, ಅಗಸಿ ಹತ್ತಿರ, ಹಿರೇಬಜಾರ, ರಂಗಮಂದಿರ, ಕೊಳ್ಳಿಯವರ ವೃತ್ತದಿಂದ ಮರಳಿ ಪೂಜ್ಯರ ಮಠದವರೆಗೆ ಪೂಜ್ಯ ಅನ್ನದಾನ
ಮಹಾಶಿವಯೋಗಿಗಳ ಭಾವಚಿತ್ರ
ಮೆರವಣಿಗೆಯನ್ನು ಮಾಡಲಾಯಿತು.
ಮೆರವಣಿಗೆಯಲ್ಲಿ ಹಾಲಕೇರಿಯ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು
ಆಗಮಸಿ ಭಕ್ತರನ್ನು ಹರಸಿದರು
ಇಂತಹ ಕಾರ್ಯಕ್ರಮಗಳಿಗೆ
ವೀರಶೈವ ಲಿಂಗಾಯತ ಸಮಾಜದವರು ಮೆರವಣಿಗೆಯಲ್ಲಿ ಸಾಥ್ ನೀಡಿದ್ದರು. ಗಜೇಂದ್ರಗಡ ಅನ್ನದಾನೇಶ್ವರ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಭಾಗಿಯಾಗಿದ್ದು ವಿಶೇಷವಾಗಿತ್ತು.
ಬಳಿಕ ಹಾಲಕೇರಿಯ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಆರ್ಶಿವಚನ ನೀಡುತ್ತಾ ಪೂಜ್ಯರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಕ್ರಾಂತಿಯುಂಟು ಮಾಡಿದರು ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಚಿಂತನೆ ನೀಡಿದ ಮಹಾನ ಚೇತನ ರಾಗಿದ್ದಾರೆ. ಶಿಕ್ಷಣದ ಕ್ರಾಂತಿಯನ್ನುಂಟು ಮಾಡುವ ಮೂಲಕ ಈ ಭಾಗದ ಶಿಕ್ಷಣದ ಸಂತ, ಧಾರ್ಮಿಕ ಸಂತ, ವಿಧ್ಯಾಧಾನ ಸಂತ ಹೀಗೆ ನಾನಾ ಹೆಸರುಗಳಿಂದ ಜನಮಾನಸದಲ್ಲಿ ಅಚ್ಚಲಿಯಂದತೆ ಉಳಿದ ಹಾಲಕೇರಿಯ ಲಿಂಗೈಕ್ಯ ಪೂಜ್ಯ ಅನ್ನದಾನ ಮಹಾಶಿವಯೋಗಿಗಳ ೪೭ ನೇ ಪುಣ್ಯ ಸ್ಮರಣೆ ಮಾಡಿದ್ದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಸಿದ್ದಣ್ಣ ಬಂಡಿ, ಟಿ..ಎಸ್.ರಾಜೂರ ಪ್ರಭು ಚವಡಿ, ಅಪ್ಪು ಮತ್ತಕಟ್ಟಿ, ಬಸವರಾಜ ರೇವಡಿ,ಎ.ಪಿ. ಗಾಣಗೇರ, ಮಹಾದೇವಪ್ಪ ಪವಾರ, ಮಹಾದೇವಪ್ಪ ಮಡಿವಾಳ, ಪ್ರಭು ಹಿರೇಮಠ, ಬಸವರಾಜ ಕೊಟಗಿ, ಶಿವಯ್ಯ ಚಕಡಿಮಠ, ವೀರಯ್ಯ ಕಲ್ಮಂಗಿಮಠ ಸೇರಿದಂತೆ ಅನೇಕರು ಇದ್ದರು.