ದ್ವಿಚಕ್ರ ತಪಾಸಣೆ ನಡೆಸಿ ದಂಡ । ರಸ್ತೆ ನಿಯಮ ಕಡ್ಡಾಯ ಪಾಲನೆಗೆ ಎಸ್‌ಪಿ ಎಚ್ಚರಿಕೆ – ಬಿ.ಎಸ್.ನೇಮಗೌಡ.
ದ್ವಿಚಕ್ರ ತಪಾಸಣೆ ನಡೆಸಿ ದಂಡ । ರಸ್ತೆ ನಿಯಮ ಕಡ್ಡಾಯ ಪಾಲನೆಗೆ ಎಸ್‌ಪಿ ಎಚ್ಚರಿಕೆ – ಬಿ.ಎಸ್.ನೇಮಗೌಡ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್ :::
ಗಜೇಂದ್ರಗಡ:
ಗದಗ ಜಿಲ್ಲೆಯಲ್ಲಿಯೇ ಗಜೇಂದ್ರಗಡ ಪಟ್ಟಣವೂ ಅತ್ಯಂತ ವೇಗವಾಗಿ ಬೆಳೆಯುವ ವಾಣಿಜ್ಯ ಪಟ್ಟಣವಾಗಿದೆ. ಇಲ್ಲಿ ದಿನ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ.
ಪಟ್ಟಣದಲ್ಲಿ ಹೆದ್ದಾರಿ ಹಾದು ಹೋಗಿರುವದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇರುತ್ತವೆ. ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಸಂಚಾರ ನಿಯಮಗಳ ಪಾಲನೆ ಕುರಿತು ಅನೇಕ ಕಾರ್ಯಕ್ರಮಗಳು, ಜಾಥಾಗಳು ಕೈಗೊಂಡಿವೆ.
ಅದರಂತೆ ಶುಕ್ರವಾರ ಗಜೇಂದ್ರಗಡ ನಗರದ ಪುರ್ತಗೇರಿ ವೃತ್ತ, ಕುಷ್ಟಗಿ ರಸ್ತೆಯಲ್ಲಿ, ಗದಗ ರಸ್ತೆಯಲ್ಲಿ ಸೇರಿದಂತೆ ವಿವಿಧ ವೃತ್ತಗಳಲ್ಲಿ ಬೈಕ ಸವಾರರುಗಳಿಗೆ ಮುಂಜಾನೆ ಪೋಲಿಸರು ದಂಡಗಳನ್ನು(Fine) ವಿಧಿಸುವ ಮೂಲಕ ಬೈಕ ಸವಾರರಿಗೆ ಜಾಗೃತಿ ಮೂಡಿಸಿದ್ದರು.
ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ
ನರಗುಂದ ವಲಯದ ಡಿ.ವಾಯ್.ಎಸ್.ಪಿ. ಪ್ರಭುಗೌಡ ಡಿ.ಕೆ.ಅವರ ನೇತೃತ್ವದಲ್ಲಿ ಗಜೇಂದ್ರಗಡ ಠಾಣೆಯ ಪಿ.ಎಸ್.ಐ.ಸೋಮನಗೌಡ ಗೌಡರ ಹಾಗೂ ಗಜೇಂದ್ರಗಡ ಠಾಣೆಯ ಪೋಲಿಸ್ ಸಿಬ್ಬಂದಿಗಳು ಬೈಕ ಸವಾರರ ರಿಗೆ ದಂಡಗಳ ರುಚಿ ತೋರಿಸಿ ಬಳಿಕ ಸಂಚಾರ ನಿಯಮ ( Traffic Roles) ಪಾಲನೆಗೆ ಜಾಗೃತಿ ಮೂಡಿಸಲಾಯಿತು.
ಬಳಿಕ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಗಜೇಂದ್ರಗಡ ಠಾಣೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿ
ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನಗಳ ಇನ್ಶೂರೆನ್ಸ್, ದ್ವಿಚಕ್ರ ವಾಹನ( Two Wheeler)
ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು,ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಸೂಸುವ ಎಲ್ಇಡಿ (LED) ದೀಪಗಳನ್ನು ವಾಹನಗಳಿಗೆ ಅಳವಡಿಸಲಾಗುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆ (CMV)ಯಲ್ಲಿ ನಮೂದಿಸಿದ ಮಾನದಂಡದಂತೆ ವಾಹನ ಸವಾರರು ಹೆಡ್ ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಈ ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನಗಳ ಸವಾರರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಇನ್ನೂ ಇದೇ ಸಂದರ್ಭದಲ್ಲಿ ಸು.೮೫ ಕ್ಕೂ ಹೆಚ್ಚು ಬೈಕಗಳನ್ನು ವಶಕ್ಕೆ ಪಡೆದು ತಪಾಸಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ನರಗುಂದ ಡಿ.ವಾಯ್.ಎಸ್.ಪಿ. ಪ್ರಭುಗೌಡ ಡಿ.ಕೆ., ಗಜೇಂದ್ರಗಡ ಪಿ.ಎಸ್.ಐ. ಸೋಮನಗೌಡ ಗೌಡರ ಸೇರಿದಂತೆ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.
ಬಾಕ್ಸ…
ಗದಗ ಜಿಲ್ಲೆಯ ತುಂಬೆಲ್ಲಾ ಸಂಚಾರ ನಿಯಮ ಪಾಲನೆ ಕಟ್ಟುನಿಟ್ಟಾದ ಕಾನೂನು ಪಾಲನೆಗೆ ಆಧ್ಯತೆ ನೀಡಲಾಗುತ್ತಿದೆ.ವಾಹನ ಚಾಲನೆ ಮಾಡುವ ಎಲ್ಲರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಸಂಚಾರ ನಿಯಮ ಪಾಲಿಸದಿದ್ದರೆ ಅಂತಹ ಚಾಲಕರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು.
ಬಿ.ಎಸ್.ನೇಮಗೌಡ. (ಎಸ್.ಪಿ) ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಗದಗ.
ವರದಿ: ಸೀತಲ ಓಲೇಕಾರ.