ಸಮಸ್ಯೆಗಳ ನಿವಾರಣೆಗೆ ಅಧ್ಯತೆ ಕೊಡಿ ಇಲ್ಲಾ ರಾಜೀನಾಮೆ ನೀಡಿ: ಲೋಕಾಯುಕ್ತ ಡಿ.ವೈ.ಎಸ್.ಪಿ. ವಿಜಯ ಬಿರಾದಾರ.
ಗಜೇಂದ್ರಗಡ ಪುರಸಭೆ ಸಭಾ ಭವನದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭ.
ಜನಧ್ವನಿ ಕನ್ನಡ ನ್ಯೂಸ್..
ಗಜೇಂದ್ರಗಡ ::
ಜನಸಾಮಾನ್ಯರ ಕುಂದು, ಕೊರತೆ, ಸಮಸ್ಯೆಗಳ ನಿವಾರಣೆಗೆ ಎಲ್ಲ ಇಲಾಖೆ ಅಧಿಕಾರಿಗಳು ಪ್ರಧಾನ್ಯತೆ ಕೊಡಬೇಕು. ಸರಕಾರದ ನಾನಾ ಯೋಜನೆಗಳು ಸೇರಿದಂತೆ ಧೈಯೋ ದ್ದೇಶ ಗಳು ಸಫಲವಾಗಲು ಅಧಿಕಾರಿಗಳ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಹೇಳಿದರು.
ಸ್ಥಳೀಯ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಲೋಕಾಯುಕ್ತರಿಂದ ಆಯೋಜಿಸಿದ ಗಜೇಂದ್ರಗಡ ತಾಲೂಕು ಸಾರ್ವಜನಿಕ ಕುಂದಕೊರತೆ ಮತ್ತು ಅಹವಾಲು ಸ್ವಿಕಾರ ಕರ‍್ಯಕ್ರ ಮದಲ್ಲಿ ಅವರು ಮಾತನಾಡಿದರು.
ಸರಕಾರಿ ಅಧಿಕಾರಿಗಳು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕೆಲಸ ಮಾಡುವ ಜತೆಗೆ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು. ಸಾರ್ವಜನಿಕರು ಬಯ ಸಿದ ಕೆಲಸ ಮಾಡಲು ಮುಂದಾಗಿ. ಎಷ್ಟು ದಿನಗಳಲ್ಲಿ ಆಗುತ್ತದೆ ಅಥವ ಅವರ ಕೆಲಸ ಮಾಡಲು ಏನು ತೊಂದರೆಯಿದೆ ಎನ್ನುವುದನ್ನು ಅವರಿಗೆ ಅರ್ಥವಾಗುವ ರೀತಿ ತಿಳಿ ಹೇಳ ಬೇಕು ಹಾಗೂ ಲಿಖಿತವಾಗಿ ಅವರಿಗೆ ಉತ್ತರ ನೀಡಿದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುತ್ತದೆ ಎಂದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಡಿಸಿಕೊಳ್ಳಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮಾಡದೆ ವಿಳಂಬ ಅಥವ ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಹಾಗೂ ಸರಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆಸಿ ಹಣ ದುರುಪಯೋಗ ಅಥವಾ ಲಂಚದ ಬೇಡಿ ಕೆಯನ್ನಿಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ, ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ನೇರವಾಗಿ ಅಥವ ಅಂಚೆ ಮೂಲಕ ದೂರು ಸಲ್ಲಿಸಬಹುದು ಎಂದರು.
ಸರಕಾರಿ ಅಧಿಕಾರಿಗಳು ಸೇವಾವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳಿಂದ ಮಾತ್ರ ಜನರಿಗೆ ನೆನಪಿನಲ್ಲಿ ಉಳಿಯುತ್ತಾರೆ. ಜನರ ಹಾಗೂ ಸಕಾರದ ಸೇವಕರಾಗಿರುವ ನಾವುಗಳು ನಮ್ಮ ಅಧಿಕಾರಾವಧಿಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಯಾವುದೇ ವ್ಯಕ್ತಿ ಸರಕಾರಿ ಕಚೇರಿಗೆ ಬಂದಾಗ ಕುಳಿತುಕೊಳ್ಳಲು ಹೇಳಿ ಒಂದೆರಡು ನಿಮಿಷ ಅವರ ಸಮಸ್ಯೆಯ ಬಗ್ಗೆ ಆಲಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಸಾರ್ವಜನಿಕರಿAದ ಒಟ್ಟು ೧೭ ಅರ್ಜಿಗಳು ಸ್ವಿಕೃತವಾದವು. ೯ ಅರ್ಜಿಗಳ ಸಮಸ್ಯೆ ಬಗೆ ಹರಿಸಲು ತಾಲೂಕಿನ ನಾನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ೭ ಅರ್ಜಿಗಳ ಪ್ರಕರಣ ಧಾಕಲಿಸಲಾಯಿತು. ಕಂದಾಯ, ಪುರಸಭೆ, ಶಿಕ್ಷಣ, ಇನ್ನಿತರ ಇಲಾಖೆಗಳ ಇಲಾಖೆ ಕುರಿತು ಸಾರ್ವಜನಿರ ಅಹವಾಲಿ ಆಲಿಸಿದರು. ಸಿಪಿಐ ರವಿ ಪುರಷೋತ್ತಮ, ಇನಸ್ಪೇಕ್ಟರ್ ಎಸ್.ಎಸ್. ತೇಲಿ, ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ತಾಪಂ.ಇಓ ಬಸವರಾಜ ಬಡಿಗೇರ ಜತೆ ನರೇಗಲ್ ಪುರಸಭೆ ಮುಖ್ಯಾಧಿಕಾರಿ, ಆರೋಗ್ಯ, ಶಿಕ್ಷಣ ಜತೆಗೆ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು