ಬೂತ ಮಟ್ಟದಿಂದಲೇ ಪಕ್ಷ ಸಂಘಟಿಸಿ : ಮಾಜಿ ಸಚಿವ ಕಳಕಪ್ಪ ಬಂಡಿ
ರೋಣ ಮಂಡಲ ವತಿಯಿಂದ ಸಂಘಟನಾ ಪರ್ವ ಸಭೆ
JanadhwaniNews Gajenragada : ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ನಗರದ ಬಾಜಪ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ವತಿಯಿಂದ ಸಂಘಟನಾ ಪರ್ವ ಸಭೆಯನ್ನು ಸೋಮವಾರ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ, ಪ್ರತಿ ಬೂತ್ ನಲ್ಲಿ ನೂತನವಾದ ಬೂತ್ ಕಮಿಟಿ ರಚನೆ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಲು ಕರೆ ನೀಡಿದರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧರಾಗಿರಬೇಕು ಎಂದರು.
ಬಳಿಕ ರೋಣ ಮಂಡಳದ ಅಧ್ಯಕ್ಷ ಮುತ್ತಣ್ಣ ಕಡಗದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ,ನಮ್ಮ ಪ್ರತಿಬೂತದಲ್ಲೂ ನಾವೂ ಪಕ್ಷವನ್ನು ಹೊಸ ಹೊಸ ನಾಯಕತ್ವದಲ್ಲಿ ಸಾಗೋಣ. ಹೆಚ್ಚಿನ ಸಂಖ್ಯೆಯಲ್ಲಿ ಬಾಜಪದ ಕಾರ್ಯಗಳನ್ನು ಜನರಿಗೆ ತಿಳಿಸಿ ಬೂತ ಹಂತದಿಂದ ಪಕ್ಷವನ್ನು ಸಂಘಟಿಸೋಣ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಆರ್. ಕೆ ಚೌಹಾನ್, ರೋಣ ಮಂಡಲ ಪ್ರಧಾನ ಕಾರ್ಯದರ್ಶಿಗಳು ಉಮೇಶ್ ಮಲ್ಲಾಪುರ್, ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಚ್ ಕೆ ಹಟ್ಟಿಮನಿ, ಪಕ್ಷದ ಮುಖಂಡರಾದ ಅಶೋಕ ನವಲಗುಂದ, ಬಸನಗೌಡ ಪಾಟೀಲ್, ಶಶಿಧರ್ ಸಂಕನಗೌಡ ಬಾಲಾಜಿ ಬೋಸ್ಲೆ, ರಮೇಶ್ ವಕ್ಕರ ಶರಣಪ್ಪ ಪ್ಯಾಟಿ, ಸಿದ್ದು ಯಾಳವಾಡ, ಬಸವರಾಜ ಗಾಜಿ ಉಪಸ್ಥಿತರಿದ್ದರು.