ಗೌರಿ ಹುಣ್ಣಿಮೆ: ಸಕ್ಕರೆ ಗೊಂಬೆ ವ್ಯಾಪಾರ ಜೋರು
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ:
ಮಹಿಳಾ ಸಮುದಾಯದ ಏಕತೆ ಮತ್ತು ಮಾನವೀಯ ಸಂಬಂಧಗಟ್ಟಿಗೊಳಿಸಿ ಭಾವೈಕ್ಯತೆ ಕೊಂಡಿಯ ಬೆಸುಗೆಯಾದ ಗೌರಿ ಹುಣ್ಣಿಮೆ ಹಬ್ಬ ಆಚರಿಸಲು ಸಕ್ಕರೆ ಗೊಂಬೆಗಳ ವ್ಯಾಪಾರ ರವಿವಾರ ಜೋರಾಗಿತ್ತು.
ಉತ್ತರ ಕರ್ನಾಟಕದ ಹೆಂಗಳೆಯರ ದೊಡ್ಡ ಹಬ್ಬ ಗೌರಿ ಹಬ್ಬ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಹಬ್ಬದ ವಿಶೇಷ ತಂತ್ರಜ್ಞಾನ ಯುಗದ ಭರಾಟೆ ಮಧ್ಯೆಯು ಗೌರಿ ಹುಣ್ಣಿಮೆಯಂತಹ ಸಾಂಪ್ರದಾಯಿಕ ಆಚರಣೆಗಳು ಜನಮಾನಸದಲ್ಲಿ ಉಳಿದಿರುವುದು ಆಚರಣೆಯ ಮಹತ್ವ ಸಾರುತ್ತವೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ರೈತ ಮಹಿಳೆಯರು ಬೆಳಿಗ್ಗೆಯಿಂದ ಹೊಲದಲ್ಲಿ ಕೆಲಸ ನಿರ್ವಹಿಸಿ, ಸಂಜೆ ಗೆಳತಿಯರೊಂದಿಗೆ ಶ್ರದ್ಧಾ ಭಕ್ತಿಯಿಂದ ಶಿವ ಮತ್ತು ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಸಕ್ಕರೆ ಮತ್ತು ಬೆಲ್ಲದ ಅಚ್ಚಿನಿಂದ ತಯಾರಿಸಿದ ವಿವಿಧ ಬಗೆಯ ಆರತಿ ಮೂರ್ತಿಗಳನ್ನು ತಟ್ಟೆಯಲ್ಲಿಟ್ಟುಕೊಂಡು ಹಾಡು ಹಾಡುತ್ತ ಗೌರಿಯನ್ನು ಪ್ರತಿಷ್ಠಾಪಿಸಿದ ಮನೆಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ.
ಸಾಮಾನ್ಯವಾಗಿ ಜನರಲ್ಲಿರುವ ಭಕ್ತಿ, ಭಾವನೆಗಳಲ್ಲಿ ಸ್ಪಂದಿಸುವ ಇಚ್ಛೆಯಿಂದ ಶಿವ, ಪಾರ್ವತಿ, ಒಂಟೆ, ಆನೆ, ರಥ, ಅರ್ಜುನನ ಬಿಲ್ಲು ಸೇರಿದಂತೆ ವಿವಿಧ ರೀತಿಯ ಸಕ್ಕರೆ ಗೊಂಬೆಗಳನ್ನು ನೋಡುವುದು, ಆನಂದ ತರಿಸುತ್ತದೆ. ಸವಿಯುವುದೇ ಆನಂದ ತರಿಸುತ್ತದೆ.