ನೂತನ ಜಿಲ್ಲಾಧಿಕಾರಿಯವರಿಗೆ ಪುರಸಭೆ ವತಿಯಿಂದ ಸನ್ಮಾನ.
ಗಜೇಂದ್ರಗಡ:
ಗಜೇಂದ್ರಗಡ ಪುರಸಭೆ ವತಿಯಿಂದ ನೂತನವಾಗಿ ಗದಗ ಜಿಲ್ಲಾಧಿಕಾರಿಯಾದ ಗೋವಿಂದ ರೆಡ್ಡಿ ಅವರಿಗೆ ಪುರಸಭೆ ವತಿಯಿಂದ ಸನ್ಮಾನ ನಡೆಯಿತು.
ಗಜೇಂದ್ರಗಡ ಪುರಸಭೆಯ ಸಭಾ ಭವನದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿದಂತೆ ಸಿಬ್ಬಂದಿಗಳು ಸನ್ಮಾನ ನಡೆಸಿಕೊಟ್ಟರು.
ಬಳಿಕ ಪುರಸಭೆ, ತಾಲೂಕಾ ಆಡಳಿತ ಕಛೇರಿಯಲ್ಲಿನ ವಿವಿಧ ಇಲಾಖೆಯ ಕೊಠಡಿಗಳನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಕಿರಣಕುಮಾರ ಕುಲಕರ್ಣಿ, ಶಿವಕುಮಾರ ಇಲಾಳ, ರಾಘವೇಂದ್ರ ಮಂತಾ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.