ಮರಣದಂಡನೆ ಶಿಕ್ಷೆcrimeಗದಗಜಿಲ್ಲಾ ಸುದ್ದಿರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
Death penalty: ಮರ್ಯಾದೆ ಹತ್ಯೆ: ಲಕ್ಕಲಕಟ್ಟಿ ಗ್ರಾಮದ ನಾಲ್ವರಿಗೆ ಮರಣದಂಡನೆ ಶಿಕ್ಷೆ
ಕೊಲೆ ಆರೋಪ ಸಾಭಿತಾದ ಹಿನ್ನೆಲೆ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.
ಜನಧ್ವನಿ ಸುದ್ದಿ ಗದಗ: ಕೊಲೆ ಆರೋಪ ಸಾಭಿತಾದ ಹಿನ್ನೆಲೆ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.
ಪ್ರೀತಿಸಿ ಮದುವೆಯಾಗಿದ್ದ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರಮೇಶ ಮಾದರ ಮತ್ತು ಗಂಗಮ್ಮ ಮಾದರ ಅವರನ್ನು 2019 ರಲ್ಲಿ ಗಂಗಮ್ಮ ಸಂಬಂದಧಿಕರು ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಕುಟುಂಬಸ್ಥರ ವಿರೋಧ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ ಆಗಿದ್ದಕ್ಕೆ ಗಂಗಮ್ಮ ಸಂಬಂಧಿಕರು ಕೊಲೆ ಮಾಡಿದ್ದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಐಪಿಸಿ ಸೆಕ್ಷನ್ 427, 449, 302, 506(2) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ನ್ಯಾಯಾಲಕ್ಕೆ ಪೊಲೀಸರು ದೋಷಾರೋಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕನಾಗಿರುವ ಪರಶುರಾಮ ರಾಠೋಡ ಮೇಲಿನ ಅಪರಾಧ ಸಾಭಿತಾದ ಹಿನ್ನೆಲೆ ಬುಧವಾರ ಮರಣದಂಡನೆ ವಿಧಿಸಿ ಆದೇಶಿಸಲಾಗಿದೆ.