ಕನಕಗಿರಿಆರೋಗ್ಯ ಇಲಾಖೆಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ವಕೀಲ-ಪತ್ರಕರ್ತ ಮಂಜುನಾಥ ಎಸ್. ರಾಠೋಡ ಗೆ ಒಲಿದು ಬಂದ ಪ್ರತಷ್ಠಿತ “ಕ್ರಾಂತಿಸೂರ್ಯ ಜೈಭೀಮ್ ಸೇನೆ”ಯ ರಾಜ್ಯಾಧ್ಯಕ್ಷ ಸ್ಥಾನ

Share News

ಬರಹ : ಸೀತಲ್ ಓಲೇಕಾರ, ಪತ್ರಕರ್ತರು ಹಾಗೂ ಚೇರಮನ್ನರು, ಬ್ರೆöÊಟ್ ಬಿಗಿನಿಂಗ್ ಸ್ಕೂಲ್

(ಸೌಜನ್ಯಶೀಲ, ಅತ್ಯಂತ ನಿಗರ್ವಿ, ಅಜಾತಶತ್ರು ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭಕ್ಕೆ ಮಾನ್ಯತೆ ತಂದಕೊಟ್ಟಿರುವ ಪತ್ರಕರ್ತ ಮಂಜುನಾಥಗೆ ಮತ್ತೊಂದು ಉನ್ನತ ಹುದ್ದೆ)

 ವಕೀಲ-ಪತ್ರಕರ್ತ ಮಂಜುನಾಥ ಎಸ್. ರಾಠೋಡ ಗೆ ಒಲಿದು ಬಂದ
ಪ್ರತಷ್ಠಿತ “ಕ್ರಾಂತಿಸೂರ್ಯ ಜೈಭೀಮ್ ಸೇನೆ”ಯ ರಾಜ್ಯಾಧ್ಯಕ್ಷ ಸ್ಥಾನ

ಗಜೇಂದ್ರಗಡ;::

” ಸೌಜನ್ಯಶೀಲ, ಅತ್ಯಂತ ನಿಗರ್ವಿ, ಅಜಾತಶತ್ರು ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭಕ್ಕೆ ಮಾನ್ಯತೆ ತಂದ, ವಸ್ತುನಿಷ್ಠ, ಪ್ರಮಾಣಿಕ ವರದಿಗೆ ಹೆಸರಾಗಿರುವ ಗದಗವಾಣಿ ಪತ್ರಿಕೆ ಸಂಪಾದಕ, ವಕೀಲ ಮಂಜುನಾಥ ಎಸ್.ರಾಠೋಡ ಅವರು” ಕ್ರಾಂತಿಸೂರ್ಯ ಜೈಭೀಮ್ ಸೇನೆ(ರಿ) ರಾಜ್ಯಾಧ್ಯಕ್ಷರಾಗಿ ನೇಮಕರಾಗಿದ್ದಾರೆ.

 

ಸೀಮಾತೀತ ಸಾಧಕ ಮಂಜುನಾಥ ಸಾಹಿತ್ಯಿಕ, ಸಾಂಸ್ಕೃತಿಕ, ಸಂಘಟನೆ, ಪತ್ರಿಕಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಈಗ ಕ್ರಾಂತಿಸೂರ್ಯ ಜೈಭೀಮ್ ಸೇನೆ(ರಿ) ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೊಸ ಮನ್ವಂತರದ ದಿಟ್ಟ ಹೆಜ್ಜೆಯತ್ತ ಮುಖ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ೧೫ ವರ್ಷಗಳಿಂದ ಕ್ರಿಯಾಶೀಲರಾಗಿ ತೊಡಗಿಕೊಂಡಿರುವ ಮಂಜುನಾಥ ಅವರು ಕಳೇದ ೧೦ ವರ್ಷ ವಿಜಯವಾಣಿ ಗಜೇಂದ್ರಗಡ ತಾಲೂಕ ವರದಿಗಾರರಾಗಿ, ೨ ವರ್ಷ ಇಂದು ಸಂಜೆ ಪತ್ರಿಕೆ ಜಿಲ್ಲಾ ವರದಿಗಾರರಾಗಿ, ಹಾಗೂ ಕಳೆದ ೩ ವರ್ಷಗಳಿಂದ “ಗದಗವಾಣಿ”ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಮಸ್ಯೆಗಳ ಬಗ್ಗೆ ಕ್ಷಕಿರಣ ಬೀರುವ ಇವರ ಲೇಖನಗಳಿಂದ ಗಜೇಂದ್ರಗಡ ತಾಲೂಕಿನ ಅನೇಕ ಸಮಸ್ಯೆಗಳು ಪರಿಹಾರಗೊಂಡಿದ್ದು, ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭಕ್ಕೆ ಮಾನ್ಯತೆ ತಂದುಕೊಟ್ಟಿದ್ದಾರೆ. ಪತ್ರಿಕೆ ಬರವಣಿಗೆ ಮೂಲಕ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಛಾಟಿ ಬೀಸಿ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ:

ಗದಗ ಜಿಲ್ಲೆ ಕಾಲಕಾಲೇಶ್ವರ ದೇವಸ್ಥಾನದಲ್ಲಿರುವ ಕೃಷಿಕ ದಂಪತಿ ಸೋಮಪ್ಪ ಮತ್ತು ಕಮಲಾಬಾಯಿ ಅವರ ಉದರದಲ್ಲಿ ೧ ಜೂನ್ ೧೯೮೯ ರಂದು ನಾಲ್ಕನೇಯ ಮಗನಾಗಿ ಜನಿಸಿದ ಮಂಜುನಾಥ ಇವರು ಪ್ರಾಥಮಿಕ ಶಿಕ್ಷಣ ಕಾಲಕಾಲೇಶ್ವರ, ಪ್ರೌಢ ಶಿಕ್ಷಣ ಮುಳಗುಂದದ ಮುರಾರ್ಜಿ ಶಾಲೆಯಲ್ಲಿ, ಪದವಿ ಶಿಕ್ಷಣವನ್ನು ಗಜೇಂದ್ರಗಡ ಸರ್ಕಾರಿ ಪ್ರಥಮದರ್ಜೇ ಕಾಲೇಜಿನಲ್ಲಿ, ಎಂ.ಎ ಶಿವಮೊಗ್ಗದ ಕುವೇಂಪು ವಿಶ್ವವಿದ್ಯಾಲಯದಲ್ಲಿ, ಎಲ್‌ಎಲ್‌ಬಿ ಯನ್ನು ಗದಗನ ಮಾನ್ವಿ ಕಾಲೇಜಿನಲ್ಲಿ, ಬಿ.ಇಡಿ ರೋಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ೨೦೧೩ ರ ಮೇ ೩೦ ರಂದು ಬಾಗಲಕೋಟ ಜಿಲ್ಲೆ ಇಲಕಲ್ ಬಳಿಯ ಬಲಕುಂದಿಯ ಬಡಿಗೇರ ಮನೆತನದ “ನೇತ್ರಾವತಿ” ಎಂಬುವರನ್ನು ವಿವಾಹವಾದರು. ಸೂರ್ಯಪ್ರತಾಪಸಿಂಗ್, ಶ್ರೀರಕ್ಷಾ, ಅಥರ್ವಣಿ ಎಂಬ ಮೂವರು ಮಕ್ಕಳು ಇದ್ದಾರೆ.

ಸಾಹಿತ್ಯ-ಪತ್ರಿಕಾ ಸೇವೆ:

ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅವರ ಸಂಪಾದನೆಯಲ್ಲಿ “ಮಾತೃಭೂಮಿ” ರಾಜ್ಯಮಟ್ಟದ ಕವನ ಸಂಕಲನ, ೨೦೧೬ ಮಾ.೨೧ ರಂದು ಗದಗ ತೋಂಟದಾರ್ಯ ಮಠದಲ್ಲಿ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರಿಂದ “ಸುದ್ದಿಸೌರಭ” ಕೃತಿ ಲೋಕಾರ್ಪಣೆಗೊಂಡಿದೆ. ೨೦೧೨ ರಲ್ಲಿ ವಿಜಯವಾಣಿ ಪತ್ರಿಕೆಯ ಮೂಲಕ ಪತ್ರಿಕಾಗರಂಗಕ್ಕೆ ಪಾದಾರ್ಪಣೆ ಮಾಡಿದ ಸೌಜನ್ಯಶೀಲ ಸಂಯಮದ ಮಂಜುನಾಥ ರಾಠೋಡ ಅವರು, ಅತ್ಯಂತ ನಿಗರ್ವಿ, ಅಜಾತಶತ್ರು. ಇವರು ಯಾರ ವಿಷಯದಲ್ಲೂ ಹಗುರವಾಗಿ ಮಾತಾಡಿದ್ದಿಲ್ಲ. ಆಸೆ, ನಿರಾಸೆ, ಅತೃಪ್ತಿ ಇವರನ್ನು ಕಾಡಿದಂತಿಲ್ಲ. ಸಭ್ಯತೆ, ಸರಳತೆಯ ಸಾಕಾರ ಮೂರ್ತಿಯಾಗಿರುವ ಇವರು ಎಲ್ಲ ಮೌಲ್ಯಗಳಿಗೆ ಉದಾಹರಣೆಯಾಗಿದ್ದಾರೆ. ಜನರಿಂದ ದೂರವಾಗಿ ದ್ವೀಪದಂತಿರದೆ ಎಲ್ಲರ ಪ್ರೀತಿಗೆ ಪಾತ್ರರಾಗಿ ಸದಾ ಲವಲವಿಕೆಯ ಬುಗ್ಗೆಯಾಗಿ ಸ್ನೇಹಶೀಲ ವ್ಯಕ್ತಿತ್ವದಿಂದ ಎಲ್ಲರಿಗೂ ಬೇಕಾದವರಾಗಿ ಮಟ್ಟಿ ಎಲ್ಲರ ಹೃದಯ ತಟ್ಟಿದ್ದಾರೆ. ನಿರ್ಭಯದಿಂದ ವರದಿಗಳನ್ನು ಪ್ರಕಟಿಸಿರುವ ಇವರು,”ಮಟ್ಕಾ ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಕೋಟೆನಾಡು, ಅಕ್ರಮ ಕಲ್ಲುಗಣಿಗಾರಿಕೆ: ಜಿಲ್ಲಾಢಳಿತದ ಬ್ರೇಕ್‌ಫೇಲ್.!”, ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ “ಐಪಿಎಲ್” ಬೆಟ್ಟಿಂಗ್, ಕರಗುತ್ತಿದೆ ಕಾಲಕಾಲೇಶ್ವರ ಗುಡ್ಡ, ಆಸ್ಪತ್ರೆಗೆ ಬೇಕಿದೆ ಸೂಕ್ತ ಚಿಕಿತ್ಸೆ, ನಿರಂತರ ಜ್ಯೋತಿ: ನೀರಾವರಿ ರೈತರಿಗೆ ‘ಫಜೀತಿ’, ಬಾಣಂತಿಯರ ಮಡಿಲು ಸೇರದ ‘ಕಿಟ್’, ಗಜೇಂದ್ರಗಡ ಪುರಸಭೆಯಲ್ಲಿ ಕಮಿಷನ್ ಹಾವಳಿ: ಕಳಪೆ ಕಾಮಗಾರಿ ಎಂಬಿತ್ಯಾದಿ ಶಿರ್ಷಿಕೆ ಅಡಿಯಲ್ಲಿ ಪ್ರಕಟಗೊಂಡ ವರದಿಗಳು ಕಿಂಗ್‌ಫಿನ್‌ಗಳ, ಅಧಿಕಾರಿಗಳ,ಜನಪತ್ರಿನಿಧಿಗಳ ವಿರುದ್ಧ ಚಾಟಿ ಬೀಸಿ ಎಚ್ಚರಿಸುವ ಕೆಲಸ ಮಾಡಿದ್ದು, “ಹಲದಿ ರೋಗಕ್ಕೆ ತುತ್ತು: ನೆಲಕಚ್ಚಿದ ಹೆಸರು ಬೆಳೆ, ಕಬ್ಬು ಕಟಾವಿಗೆ ಬಂದವರ ಸಿಹಿ:ಕಹಿ ಗೋಳು, ಮೇವಿನ ಕೊರತೆ: ರೈತನ ಸಂಗಾತಿ ಮಾರಾಟಕ್ಕೆ, ಪಾಲು ನೆಲದಲ್ಲಿ ಮಹಿಳೆಯ ಕ್ಷೀರಕ್ರಾಂತಿ, ರೈತನ ಬದುಕಿಗೆ ವರದಾನ ಚೈನಾ ಆಸ್ಟರ್” ಎಂಬ ವರದಿಗಳು ರೈತಪರ ಧ್ವನಿಯಾಗಿ ಕೆಲಸ ಮಾಡಿವೆ. ಅಲ್ಲದೆ, ಮಾನವೀಯ ಲೇಖನಗಳನ್ನು ಬಿತ್ತರಿಸುವ ಮೂಲಕ ಜನರ ಜೀವನಾಡಿಯಾಗಿ ಕೆಲಸ ಮಾಡಿದ್ದಾರೆ.” ಕೋಟ್ಯಾಧೀಶ ಜಮೀನ್ದಾರ ಈಗ ಅನಾಥ,” ಗುಬ್ಬಚ್ಚಿ ಗುಡಿನಲ್ಲಿ ವೃದ್ಧೆಯ ವಾಸ” ಸೇರಿದಂತೆ ೨೦೧೮ರ ಏಪ್ರೀಲ್ ೨೨ ರಂದು ವಿಜಯವಾಣಿ ಪತ್ರಿಕೆ ಮುಖಪುಟದಲ್ಲಿ” ೧೫ನೇ ವಯಸ್ಸಿಗೆ ಬೆನ್ನೇರಿದ ಕುಟುಂಬ ನಿರ್ವಹಣೆಯ ನೊಗ, ಈ ಮೂರು ಮಕ್ಕಳಿಗೆ ಅಕ್ಕನೇ ಅಮ್ಮ” ಶೀರ್ಷಿಕೆ ಅಡಿಯಲ್ಲಿ ನಾಗರಸಕೊಪ್ಪ ತಾಂಡಾದ ಅನಾಥ ಮಕ್ಕಳ ಕುರಿತು ಲೇಖನ ಪ್ರಕಟಗೊಂಡಿದ್ದು, ವರದಿಗೆ ವ್ಯಾಪಕ ನೆರವಿನ ಮಹಾಪೂರವೇ ಹರಿದು ಬಂದಿದ್ದು, ಅವರ ಖಾತೆಗೆ ೧೫ ಲಕ್ಷ ರೂ ಹಾಗೂ ಚಿತ್ರದುರ್ಗ ಮುರಘರಾಜೇಂದ್ರ ಶ್ರೀಗಳು ಮಕ್ಕಳ ಶಿಕ್ಷಣಕ್ಕೆ ನೀಡಲು ಮುಂದು ಬಂದರೆ, ಧರ್ಮಸ್ಥಳ ವಿರೇಂದ್ರ ಹೆಗಡೆಯವರು ಪ್ರತಿತಿಂಗಳು ಆಕುಟುಂಬ ನಿರ್ವಹಣೆಗೆ ೧ ಸಾವಿರ ಧನ ಸಹಾಯ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಸ್ಪಂಧಿಸಿದ್ದು, ಪ್ರಧಾನಿ ಕಾರ್ಯಾಲಯದಿಂದ ಹಣಕಾಸು ವಿಭಾಗದ ಅಧಿಕಾರಿ ಪರ್ವೇಶಕುಮಾರ ಅವರು ಗದಗ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಮಗ್ರ ಮಾಹಿತಿ ಒದಗಿಸಲು ಸೂಚಿಸಿದ್ದರು. ಇವರ ಲೇಖನ ಮೂಲಕ ತಬ್ಬಲಿಗಳ ಕುಟುಂಬ ಮರುಜೀವ ಪಡೆದದ್ದು, “ಇಂದು ಸಂಜೆ”ಯಲ್ಲಿ ಜಿಲ್ಲಾವರದಿಗಾರರಾಗಿ ಮತ್ತು “ಗದಗವಾಣಿ”ಯ ಸಂಪಾದಕರಾಗಿ ಅನೇಕ ನೆನೆಗುದಿಗೆ ಬಿದ್ದ ಕೆಲಸ ಅಭಿವೃದ್ಧಿ ಆಗಿದ್ದು, ಅಕ್ರಮ-ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು ಈಗ ಇತಿಹಾಸ.

 

ಎಸ್.ಎಂ ಭೂಮರಡ್ಡಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವಾಗಲೇ, ದಿನಗಳಲ್ಲಿ “ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ” ಎಂಬ ಸಂಘಟನೆಯನ್ನು ಹುಟ್ಟು ಹಾಕಿ, ಸಂಸ್ಥಾಪಕ ಅಧ್ಯಕ್ಷರಾಗಿಯೂ ಕೆಲ ವರುಷ ಕನ್ನಡ ನಾಡು-ನುಡಿ ಸೇವೆಗೈದಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ, ರಸಪ್ರಶ್ನೆ ಕಾರ್ಯಕ್ರಮ, ರಂಗೋಲಿ, ಚಿತ್ರಕಲೆ ಸ್ಪರ್ಧೇ, ವಿವಿಧ ಕ್ರೀಡಾ ಸ್ಪರ್ಧೇ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿದ್ದಾರೆ. ಉತ್ತಮ ಛಾಯಾಗ್ರಹಕರೂ ಆಗಿರುವ ಮಂಜುನಾಥ ರಾಠೋಡ ಅವರು, ಗಜೇಂದ್ರಗಡ-ರೋಣ ತಾಲೂಕು ಶಿಲ್ಪಕಲಾ ದೇಗುಲಗಳು ಬೃಹತ್ ಕೃತಿಗೆ ಹಾಗೂ ಪ್ರವಾಸೋಧ್ಯಮ ಇಲಾಖೆಯಿಂದ ಹೊರಬರುತ್ತಿರುವ ಗದಗ ಜಿಲ್ಲಾ ಪ್ರವಾಸೋಧ್ಯಮ ಕೃತಿಗೆ ಇವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳನ್ನು ನೀಡಿದ್ದಾರೆ. ಜಿ ಕನ್ನಡ ವಾಹಿನಿಯ “ಗಂಗಾ”ಧಾರಾವಾಹಿಯಲ್ಲಿಯೂ ಚಿಕ್ಕ ಪಾತ್ರಗಳನ್ನು ಮಾಡಿರುವ ಇವರು, ಇವರ ಪ್ರಾಣ ಸ್ನೇಹಿತ ಸಂಪತ ಆಕಳವಾಡಿಯವರೊಂದಿಗೆ ಕೂಡಿ “ಅಥರ್ವ” ನವೋದಯ ಕೋಚಿಂಗ್ ಸೆಂಟರ್ ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಉತ್ತಮ ನಿರೂಪಕ ಮತ್ತು ಭಾಷಣಕಾರರೂ ಹೌದು. ಉತ್ತಮ ನಡೆತೆ, ಬ್ರಷ್ಟಾಚಾರ ರಹಿತ ಸಾತ್ವಿಕ ಬದುಕು, ಬರವಣಿಗೆ, ನಟನೆ, ದಿಗ್ದರ್ಶನದ ಮೂಲಕ ಸಾಕಷ್ಟು ಹೆಸರು ಗಳಿಸಿದವರು.

ಪತ್ರಿಕೋದ್ಯಮ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಪತ್ರಕರ್ತ ಮಂಜುನಾಥ ಎಸ್. ರಾಠೋಡ ಅವರಿಗೆ ೨೦೧೫ ರಲ್ಲಿ ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನ ವತಿಯಿಂದ ಮಾನವೀಯ ಲೇಖನಕ್ಕೆ “ಜಿಲ್ಲಾ ಉತ್ತಮ ಪತ್ರಕರ್ತ” ಪ್ರಶಸ್ತಿ, ಕಸಾಸಾಂಅ ಸಂಘಟನೆಯಿAದ “ಕಾಯಕ ಸಮ್ಮಾನ” ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು, ಮಠ-ಮಾನ್ಯಗಳು ಸನ್ಮಾನಿಸಿ ಗೌರವಿಸಿವೆ. ಹಾಗೂ ದೆಹಲಿಯಲ್ಲಿ ೨೦೧೮ ರಂದು “ಡಾ.ಬಿ.ಆರ್ ಅಂಬೇಡ್ಕರ ನ್ಯಾಷನಲ್ ಫಿಲೋಸೆಪ್ “ಪ್ರಶಸ್ತಿ ಬಂದಿರುವುದು ಶ್ಲಾಘನೀಯ.

ಒಟ್ಟಾರೆ, ಇಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಪತ್ರಕರ್ತರ, ದಮನೀತರ ಧ್ವನಿಯಾಗಿರುವ ಹೋರಾಟಗಾರರ ಸಂಖ್ಯೆ ವಿರಳವಾಗುತ್ತಿದೆ. ಆದಾಗ್ಯೂ ಮಂಜುನಾಥ ರಾಠೋಡ ಅವರಂತಹ ಕೆಲವರು ನಿಷ್ಠೆಯಿಂದ ಪತ್ರಿಕೋಧ್ಯಮ ನಡೆಸುತ್ತಾ ಬಂದಿದ್ದು, “ಕ್ರಾಂತಿಸೂರ್ಯ ಜೈಭೀಮ್ ಸೇನೆ ಎಂಬ ದಲಿತ ಸಂಘಟನೆಯಲ್ಲೂ ಪ್ರಾಮಾಣಿಕತೆ-ನಿಷ್ಠೆಯಿಂದ ಯಾವುದೇ ಅಧಿಕಾರವರ್ಗ, ರಾಜಕೀಯ ಪಕ್ಷದ ವಿರುದ್ಧದ ಹೋರಾಟ ಇರಲಿ, ಶ್ರೀ ಸಾಮಾನ್ಯನಪರ ಗಟ್ಟಿಧ್ವನಿಯೇ ಇರಲಿ ಎಲ್ಲವನ್ನು ಒಂದೇ ತಕ್ಕಡಿಯಲ್ಲಿಟ್ಟಿ ತೂಗಿ ಸೇವೆ ಸಲ್ಲಿಸುವ ಗುಣ ಮಂಜುನಾಥ ಅವರದು ಎಂದರೆ ಅತಿಶೋಕ್ತಿಯಲ್ಲ. ವೈಚಾರಿತೆಯ ನೆಲೆಗಟ್ಟಿನ್ನು ಮೈಗೂಡಿಸಿಕೊಂಡು ವಸ್ತುನಿಷ್ಠ ವರದಿ, ಪಗತಿಪರ ಚಿಂತನೆಗಳನ್ನು ಮಾಡುತ್ತಾ ಸಾಧ್ಯವಾದಷ್ಟು ಒಳ್ಳೆದನ್ನು ಮಾಡು, ಆಗದಿದ್ದರೆ ಸುಮ್ಮನಿರು ಕೆಟ್ಟದನ್ನು ಮಾತ್ರ ಮಾಡಬೇಡ ಎನ್ನುವ ಧೀಮಂತ ಪತ್ರಕರ್ತ. ಅವರಿಗೆ “ಕ್ರಾಂತಿಸೂರ್ಯ ಜೈ ಭೀಮ್ ಸೇನೆ”ಯ ಸಾರಥ್ಯ ಸಿಕ್ಕಿರುವುದು ನಿಜಕ್ಕೂ ಹೆಮ್ಮೆ.

****ಬಾಕ್ಸ್**

” ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮನುಷ್ಯನಿಗೆ ತೃಪ್ತಿ ಇಲ್ಲವಾಗಿದೆ. ಪ್ರಾಮಾಣಿಕತೆ ಬಗ್ಗೆ ಮಾತನಾಡುವವರನ್ನು ಹುಚ್ಚನಂತೆ ಬಿಂಬಿಸಲಾಗುತ್ತಿದ್ದು, ಮಾನವೀಯತೆ ಮರೆಯಾಗಿದೆ. ಮಾನವೀಯ ಲೇಖನಕ್ಕೆ ಪ್ರಾಧಾನ್ಯತೆ ನೀಡಿ, ನೈಜ ಜನಪರ ಧ್ವನಿಯಾಗಿರುವ, ಬ್ರಷ್ಟಾಚಾರ ರಹಿತ, ನಿಸ್ವಾರ್ಥ ಪತ್ರಕರ್ತ ಮಂಜುನಾಥ ರಾಠೋಡ ಅವರ ಹೆಗಲಿಗೆ “ಕ್ರಾಂತಿಸೂರ್ಯ ಜೈಭೀಮ ಸೇನೆ”ಯಂತಹ ಬಲಾಢ್ಯ ಸಂಘಟನೆ ಬಂದಿರುವುದು ಶ್ಲಾಘನೀಯ. ನಿಜಕ್ಕೂ ಅದಕ್ಕೆ ಅರ್ಹವಾದ ವ್ಯಕ್ತಿ.” – ಎನ್.ಸ್ವಾಮಿ, ಮಾಲಕರು- ಪ್ರಧಾನ ಸಂಪಾಧಕರು, ‘ಪ್ರಜಾವಾಹಿನಿ” ದಿನಪತ್ರಿಕೆ, ಬೆಂಗಳೂರ.
**************************


Share News

Related Articles

Leave a Reply

Your email address will not be published. Required fields are marked *

Back to top button