ಕಾಲಕಾಲೇಶ್ವರ ಬಳಿಯ ತೋಟವೊಂದರಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳಕ್ಕೆ ಉಪ ಅರಣ್ಯಾಧಿಕಾರಿ, ಪಿಎಸ್ಐ ಭೇಟಿ
ಕಾಲಕಾಲೇಶ್ವರ ಬಳಿಯ ತೋಟವೊಂದರಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳಕ್ಕೆ ಉಪ ಅರಣ್ಯಾಧಿಕಾರಿ, ಪಿಎಸ್ಐ ಭೇಟಿ
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ಸಮೀಪದ ದಕ್ಷಿಣ ಕಾಶಿ ಕಾಲಕಾಲೇಶ್ವರ ಗ್ರಾಮದ ಹೊರವಲಯದ ತೋಟವೊಂದರಲ್ಲಿ ಗುರುವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷ ವಾಗಿದೆ.
ರೈತರು ನೀಡಿದ ಮಾಹಿತಿ ಮೇರೆಗೆ ಶುಕ್ರವಾರ ಪಿಎಸ್ಐ ಸೋಮನಗೌಡ ಗೌಡರ ಮತ್ತು ಅರಣ್ಯ ಇಲಾಖೆಯ ಗಜೇಂದ್ರಗಡ ಉಪ ವಲಯ ಅರಣ್ಯಾಧಿಕಾರಿ ಪ್ರವೀಣ ಸಾಸ್ವಿಹಳ್ಳಿ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ಪ್ರತ್ಯಕ್ಷದಿಂದ ಆತಂಕ ಮನೆ ಮಾಡಿದ್ದು, ಜನರು ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಕಣ್ಣಾರೆ ಕಂಡಿದ್ದೇನೆ:
ಕಾಲಕಾಲೇಶ್ವರ ಗ್ರಾಮದ ಸಮೀಪದ ತೋಟವೊಂದರ ಮಾಲಿಕ ದಾನು ರಾಠೋಡ ಮಾತನಾಡಿ, ಗುರುವಾರ ಸಂಜೆ ಆಕಳುಗಳನ್ನು ಕಟ್ಟಲು ನಮ್ಮ ತೋಟದ ಶೆಡ್ಡಿಗೆ ಬಂದಾಗ “ಧಪ್ಪೇಂದು” ತಗಡಿನ ಮೇಲೆ ಶಬ್ದ ಬಂತು ಹೊರಗಡೆ ಬಂದು ನೋಡಿದರೆ ಚಿರತೆ ಅಲ್ಲಿಂದ ನನ್ನ ಕಣ್ಣೇದುರಿಗೆ ಓಡಿ ಹೋಯಿತು. ಚಿರತೆ ಬೋನು ಹಾಕಿ ಚಿರತೆ ಸೆರೆಹಿಡಿಯಬೇಕು ಎಂದು ಒತ್ತಾಯಿಸಿದರು.
ಅರಣ್ಯಾಧಿಕಾರಿಗಳ ಭೇಟಿ, ಪರಿಶೀಲನೆ..!
ಚಿರತೆ ಕಣ್ಣಾರೆ ಕಂಡಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದರಿಂದ ವಿಚಾರ ಗಂಭೀರತೆ ಪಡೆದುಕೊಂಡಿದೆ. ಸ್ಥಳೀಯರ ಮತ್ತು ಪಿಎಸ್ಐ ಸೋಮನಗೌಡ ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಅಲ್ಲದೆ ಚಿರತೆ ಓಡಾಡಿದೆ ಎನ್ನಲಾದ ಜಾಗೆಗಳಲ್ಲಿ ಹೆಜ್ಜೆ ಗುರುತು ಪತ್ತೆಗಾಗಿ ಗಜೇಂದ್ರಗಡ ಉಪ ವಲಯ ಅರಣ್ಯಾಧಿಕಾರಿ ಪ್ರವೀಣ ಸಾಸ್ವಿಹಳ್ಳಿ ಶೋಧ ನಡೆಸಿದರು.
ಹೆಜ್ಜೆಯ ಗುರುತು ಅಸ್ಪಷ್ಟವಾಗಿ ಗೋಚರಿಸುತ್ತಿದ್ದು ಕಾಡು ಪ್ರಾಣಿಯ ಹೆಜ್ಜೆ ಗುರುತಿನಂತೆ ಕಂಡುಬರುತ್ತಿವೆ. ಐತಿಹಾಸಿಕ ಬಾವಿ ಹಾಗೂ ಕುರುಚಲು ಕಾಡಿನಂತಿರು ಪ್ರದೇಶವನ್ನು ಪರಿಶೀಲನೆ ನಡೆಸಿದ್ಧೇವೆ ಚಿರತೆಯ ಹೆಜ್ಜೆಯ ಗುರುತು ಎನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತಿಲ್ಲ ಎಂದು ಅರಣ್ಯ ಇಲಾಖೆ ಪ್ರವೀಣ್ ಅವರು ಮಾಹಿತಿ ನೀಡಿದ ಅವರು ಇನ್ನು ಅಸ್ಪಷ್ಟವಾಗಿರುವ ಹೆಜ್ಜೆ ಗುರುತುಗಳು ಸಧ್ಯ ಗೊಂದಲ ಸೃಷ್ಟಿಸಿವೆ. ಪತ್ತೆಯಾದ ಹೆಜ್ಜೆಗಳು ಚಿರತೆಯದ್ದಾ? ಅಥವಾ ಬೇರೆ ಕಾಡುಪ್ರಾಣಿಯದ್ದಾ? ಕತ್ತೆ ಕಿರುಬದ್ದಾ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಲಾಗ್ತಿದೆ. ಇತ್ತ ಇದು ಚಿರತೆ ಹೆಜ್ಜೆಯೆ ಎಂದು ದಿಟವಾದಲ್ಲಿ ಸೆರೆಹಿಡಿಯಲು ಅರಣ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ ಹೇಳಿದರು.