ಇಂದಿರಾ ಕ್ಯಾಂಟೀನ ಸದುಪಯೋಗವಾಗಲಿ : ಶಾಸಕ ಜಿ.ಎಸ್.ಪಾಟೀಲ.
ಗಜೇಂದ್ರಗಡ:
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕ್ಯಾಂಟೀನ್ ಒಂದಾಗಿದ್ದು, ಸಮಾಜದ ಎಲ್ಲ ವರ್ಗದ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಅಂದಾಜು ಸು.೮೭ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್‌ಗೆ ಸೋಮವಾರ ನೆರವೇರಿಸಿ ಮಾತನಾಡಿ.
ಪ್ರಸ್ತುತ ದಿನಗಳಲ್ಲಿ ದುಬಾರಿ ಜಗತ್ತು.ಇದನ್ನು ಅರಿತ ನಮ್ಮ ಸರ್ಕಾರವೂ ಬಡವರ,ನೊಂದವರ,ವಿದ್ಯಾರ್ಥಿಗಳ,ಬೀದಿಬದಿ ವ್ಯಾಫರಿಗಳ,ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಜನತೆಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರವೂ ನಮ್ಮ ಅಧಿನಾಯಕಿಯಾದ ಇಂದಿರಾ ಗಾಂದಿ ಅವರ ಹೆಸರಿನಲ್ಲಿ ಈ ಯೋಜನೆ ಜಾರಿ ಮಾಡಿದೆ.ಇದರ ಸದುಪಯೋಗ ಜನತೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್, ದ್ರಾಕ್ಷಾಯಿಣಿ ಚೋಳಿನ, ರಫೀಕ್ ತೋರಗಲ್, ಉಮೇಶ ರಾಠೋಡ, ವೆಂಕಟೇಶ ಮುದಗಲ್, ಮುದಿಯಪ್ಪ ಮುಧೋಳ, ಮುಖಂಡರಾದ ಸಿದ್ದಪ್ಪ ಬಂಡಿ, ಅಶೋಕ ಬಾಗಮಾರ, ಶ್ರೀಧರ ಬಿದರಳ್ಳಿ,ಆರ್.ಎಮ್.ರಾಯಬಾಗಿ,ಕನಕಪ್ಪ ಕಲ್ಲವಡ್ಡರ, ದುರಗಪ್ಪ ಮುಧೋಳ, ಅರಿಹಂತ ಬಾಗಮಾರ ಶರಣಪ್ಪ ಚಳಗೇರಿ, ಸಿದ್ದಪ್ಪ ಚೋಳಿನ,ಅಂದಪ್ಪ ರಾಠೋಡ,ದಾದು ತಾಳಿಕೋಟಿ,ಸಿದ್ದು ಗೊಂಗಡಶೆಟ್ಟಿಮಠ, ಸೇರಿ ಇತರರು ಇದ್ದರು.