ಕರ್ನಾಟಕ ದಲಿತ ಚಳುವಳಿಗಳ 50 ವರ್ಷಗಳ ಸಂಭ್ರಮೋತ್ಸವದ ಯಶಸ್ಸಿಗೆ ಒಗ್ಗಟ್ಟಿನಿಂದ ಶ್ರಮಿಸೋಣ:ಪ್ರಕಾಶ ಹೊಸಳ್ಳಿ
ಕರ್ನಾಟಕ ದಲಿತ ಚಳುವಳಿಗಳ 50 ವರ್ಷಗಳ ಸಂಭ್ರಮೋತ್ಸವದ ಯಶಸ್ಸಿಗೆ ಒಗ್ಗಟ್ಟಿನಿಂದ ಶ್ರಮಿಸೋಣ:ಪ್ರಕಾಶ ಹೊಸಳ್ಳಿ
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ರೋಣ :
ನಮ್ಮ ಸಮುದಾಯದ ಸುಧಾರಣೆಗೆ ಶ್ರಮಿಸಿದ ಕರ್ನಾಟಕ ದಲಿತ ಚಳುವಳಿಗಳ 50 ವರ್ಷಗಳ ಸಂಭ್ರಮೋತ್ಸವದ ಯಶಸ್ಸಿಗೆ ನಾವು ನೀವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಗದಗ ವಿಭಾಗಿಯ ಸಮಿತಿ ಸಂಚಾಲಕ ಪ್ರಕಾಶ ಹೊಸಳ್ಳಿ ಹೇಳಿದರು.
ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿದ ಜುಲೈ 10 ರಂದು ಪ್ರೋ ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ಕರ್ನಾಟಕ ದಲಿತ ಚಳುವಳಿಗಳ 50 ವರ್ಷಗಳ ಸಂಭ್ರಮೋತ್ಸವ ನಿಮಿತ್ತವಾಗಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ದಲಿತ ಮುಖಂಡರು ಸೋಮು ನಾಗರಾಜ ಮಾತನಾಡಿ ಜುಲೈ 10 ರಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು
ಇನ್ನೊರ್ವ ಹಿರಿಯ ದಲಿತ ಮುಖಂಡ ಮೌನೇಶ ಹಾದಿಮನಿ ಮಾತನಾಡಿ ಹೋರಾಟದ ಮೂಲಕ ನಮ್ನ ಜನಾಂಗದ ಸಮಸ್ಯೆಗಳನ್ನು ಕುರಿತು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ.ಸಮಾಜದ ಒಳಿತಿಗಾಗಿ ಸಮಾಜದ ಮುಖಂಡರು ಒಗ್ಗಟ್ಟಿನಿಂದ
ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಚಂದ್ರು ಹಂಚಿನಾಳ,ಹನುಮಂತ ದ್ವಾಸಲ,ಭೀಮಪ್ಪ ಮಾದರ,ಪ್ರಕಾಶ ಜಿಗಳೂರು,
ಮುತ್ತಪ್ಪ ಜೋಗಣ್ಣವರ,ಮುತ್ತಪ್ಪ ಪೂಜಾರ,ಯಲ್ಲಪ್ಪ ಹಿರೇಮನಿ,ಪುಂಡಲೀಕ ಮಾದರ,ಮಂಜು ಕಾತರಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.