ವಿಶ್ವಕಪ್ ಗೆದ್ದ ಕೆಲವೇ ಕ್ಷಣದಲ್ಲಿ ಖುಷಿ ಕೂಡಾ ಕರಗಿತು : ಭಾವನಾತ್ಮಕ ಕಣ್ಣಿರಿಟ್ಟ ಕೊಹ್ಲಿ.
ವಿಶ್ವಕಪ್ ಗೆದ್ದ ಕೆಲವೇ ಕ್ಷಣದಲ್ಲಿ ಖುಷಿ ಕೂಡಾ ಕರಗಿತು : ಭಾವನಾತ್ಮಕ ಕಣ್ಣಿರಿಟ್ಟ ಕೊಹ್ಲಿ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್
ಬ್ರಿಡ್ಜ್‌ಟೌನ್ ::
ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆದ 2024ರ ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಫೈನಲ್‌ನಲ್ಲಿ ಗೆದ್ದು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ.
ಆದರೆ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೆರಿಸಿದ ಕ್ರಿಕೆಟ್ ಜಗತ್ತಿನಲ್ಲಿಯೇ ಕಿಂಗ್ ಕೊಹ್ಲಿ ಖ್ಯಾತಿ ಪಡೆದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ..!
T20 ವಿಶ್ವ ಕಪ್ 2024 ರ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ವಿರಾಟ್ ಕೊಹ್ಲಿ T20I ಕ್ರಿಕೆಟ್‌ನಿಂದ ನಿವೃತ್ತರಾದರು
ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ವಿರಾಟ್ ಕೊಹ್ಲಿ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ನಾನು ಈ ಗಳಿಗೆಗಾಗಿಯೇ ಕಷ್ಟಪಟ್ಟು ಇಷ್ಟು ದಿನಗಳ ಕಾಲ ಶ್ರಮ ಪಟ್ಟಿದೆ. ಆದರೆ ಅದು ಇಂದು ಈಡೇರುವ ಮೂಲಕ ನನ್ನ ಆಸೆಯನ್ನು ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಭವಿಷ್ಯದ ಭಾರತವನ್ನು ಯುವ ಪತ್ರಿಭೆಗಳು ಇದೇ ರೀತಿಯಲ್ಲಿ ಉನ್ನತ ಸ್ಥಾನಗಳಲ್ಲಿ ಕರೆದುಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಕೊನೆಗೆ ನಿವೃತ್ತಿ ಘೋಷಿಸಿದರು.