ಸಹಶಿಕ್ಷಕರಿಗೆ ಸಿಗುವ ಸಕಲ ಸೌಲಭ್ಯ ದೈಹಿಕ ಶಿಕ್ಷಕರಿಗೆ ಸಿಗಲಿ : ಎಸ್.ಟಿ.ಪೂಜಾರ.
ಸಹಶಿಕ್ಷಕರಿಗೆ ಸಿಗುವ ಸಕಲ ಸೌಲಭ್ಯ ದೈಹಿಕ ಶಿಕ್ಷಕರಿಗೆ ಸಿಗಲಿ : ಎಸ್.ಟಿ.ಪೂಜಾರ.
ದೈಹಿಕ ಶಿಕ್ಷಣವನ್ನು ಬೋರ್ಡ ಪರೀಕ್ಷೆಯಲ್ಲಿ ಪರಿಗಣಿಸಿ ಪರೀಕ್ಷೆ ನಡೆಸಲು ಮುಂದಾಗಬೇಕು : ಆರ್.ಎಸ್.ಇಟಗಿ
ಗಜೇಂದ್ರಗಡ:
ಶೈಕ್ಷಣಿಕವಾಗಿ ಮಕ್ಕಳು ಪ್ರಗತಿ ಸಾಧಿಸಲು ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳು ಕೂಡಾ ಅತಿ ಮುಖ್ಯವಾಗಿದೆ. ದೈಹಿಕ ಶಿಕ್ಷಕರಿಗೆ ಸರ್ಕಾರವೂ ಮಲತಾಯಿ ದೋರಣೆ ನಿಲ್ಲಿಸಿ ಸಹ ಶಿಕ್ಷಕ/ಕಿಯರಿಗೆ ಸಿಗುವ ಸಕಲ ಸೌಲಭ್ಯಗಳು ದೈಹಿಕ ಶಿಕ್ಷಕ ಶಿಕ್ಷಕಿಯರಿಗೆ ಸಿಗುವಂತಾಗಬೇಕು ಎಂದು ದೈಹಿಕ ಶಿಕ್ಷಕ ಎಸ್.ಟಿ.ಪೂಜಾರ ಹೇಳಿದರು.
ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಪ್ಪು ಬಟ್ಟೆ ಕಟ್ಟಿ ಭಾಗಿಯಾಗಿ ಮಾತನಾಡಿದರು.
ದೈಹಿಕ ಶಿಕ್ಷಕರು ಕೇವಲ ವ್ಯಾಯಾಮ, ಯೋಗ, ಆಟಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅವರಲ್ಲಿನ ಸೂಪ್ತ ಪ್ರತಿಭೆ ಹೊರಬೇಕಾದರೆ ಸರ್ಕಾರವೂ ಸಿ.ಆಂಡ್ ಆರ್ ನಿಯಮ ಜಾರಿ ಮಾಡಿದರೆ ಸರ್ವರನ್ನೂ ಸಮಾಜ ದೃಷ್ಟಿಯಿಂದ ನೋಡಿದಂತಾಗುತ್ತದೆ. ಮತ್ತು ದೈಹಿಕ ಶಿಕ್ಷಕರು ಬಡ್ತಿ ಹೊಂದಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕೇವಲ ದೈಹಿಕ ಶಿಕ್ಷಣಕ್ಕೆ ಮಾತ್ರ ಸೀಮಿತರಾಗುತ್ತಾರೆ ಎಂದರು.
ಬಳಿಕ ಆರ್.ಎಸ್.ಇಟಗಿ, ಎಸ್.ಕೆ. ಮಠದ ಮಾತನಾಡಿ ಸರ್ಕಾರವು ಪಠ್ಯದ ವಿಷಯಗಳ ಜೊತೆಗೆ ಪಠ್ಯೇತರ ವಿಷಯವಾದ ದೈಹಿಕ ಶಿಕ್ಷಣ ವಿಷಯವನ್ನು ಬೋರ್ಡ್ ಪರೀಕ್ಷೆಯಲ್ಲಿ ಸೇರಿಬೇಕು ಹಾಗೂ ಸಹ ಶಿಕ್ಷಕ ಶಿಕ್ಷಕಿಯರಿಗೆ ಹೇಗೆ ಬಡ್ತಿಗೆ ಅವಕಾಶ ಇದೆಯೋ ಅದೇ ರೀತಿ ದೈಹಿಕ ಶಿಕ್ಷಕ ಶಿಕ್ಷಕಿಯರು ನೀಡಬೇಕು. ಒಬ್ಬ ದೈಹಿಕ ಶಿಕ್ಷಕ ಪ್ರಾರಂಭದ ಜೀವನ ಹಾಗೂ ನಿವೃತ್ತಿ ಜೀವನ ಅದೇ ದೈಹಿಕ ಶಿಕ್ಷಣದಿಂದಲೇ ಆಗಿರುತ್ತದೆ. ಆದರೆ ಸಹ ಶಿಕ್ಷಕರು ಹಾಗಲ್ಲ ಅವರು ಇಲಾಖೆಯ ಬೇರೆ ಬೇರೆ ಹುದ್ದೆಗಳನ್ನು ಹೊಂದಿ ನಿವೃತ್ತಿಯಾಗುತ್ತಿರವುದು ಕಾಣುತ್ತಿದ್ದೇವೆ. ಅದಕ್ಕಾಗಿ ಇಲಾಖೆ ನಮ್ಮಗೂ ಕೂಡಾ ಸಕಲ ಸೌಲಭ್ಯ ಕಲ್ಪಿಸಬೇಕಿದೆ ಎಂದರು.
ಇನ್ನೂ ದಕ್ಷಿಣ ವಲಯದ ಕ್ರೀಡಾಕೂಟದಲ್ಲಿ ಭಾಗದ ಎಲ್ಲಾ ದೈಹಿಕ ಶಿಕ್ಷಕ ಶಿಕ್ಷಕಿಯರು ಕಪ್ಪು ಬಟ್ಟೆ ಕಟ್ಟಿ ಕ್ರೀಡಾಕೂಟಗಳನ್ನು ನಡೆಸಿ ತಮ್ಮ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಎಚ್.ಆರ್.ನಿಡಗುಂದಿ, ಮುಕುಂದ ಭಗವತಿ, ಎಸ್.ಎಸ್.ಸೊಟಬಸಪ್ಪನವರ, ಫಾತೀಮಾಬೇಗಂ, ಬಸವರಾಜ ಹೊಸಗೌಡ್ರ, ಬಸವರಾಜ ಉಣಚಗೇರಿ, ಸುಜಾತಾ ದಿವಾಣದ, ಮಲ್ಲಪ್ಪ ಮಾಟರಂಗಿ, ಬಸವರಾಜ ಗುಳಗುಳಿ ಸೇರಿದಂತೆ ಅನೇಕರು ಇದ್ದರು.