ರಾಜ್ಯ ಸುದ್ದಿಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಟ್ರೆಂಡಿಂಗ್ ಸುದ್ದಿಗಳುರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು

ಬಾಲ್ಯವಿವಾಹ, ಪೊಕ್ಸೋ, ಆರ್.ಟಿ.ಇ ಕಾಯ್ದೆ ಕುರಿತು ಅರಿವು ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಜಿ.ಬಿ. ಗುಡಿಮನಿ ವಹಿಸಿದರು. ಮಂಜುನಾಥ ಅಸೂಟಿ ಅವರು ಬಾಲ್ಯ ವಿವಾಹ ನಿಷೇಧ , ಫೋಕ್ಸೋ ಕಾಯ್ದೆ ಕುರಿತು ಹಾಗೂ ಶ್ರೀಧರ ಅವರು ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು.

Share News

Janadhwani News Gajendrgada ಗಜೇಂದ್ರಗಡ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗದಗ ಇವರ ಸಹಯೋಗದಲ್ಲಿ ಬುಧವಾರ “ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ” “ಬಾಲ್ಯವಿವಾಹ, ಪೊಕ್ಸೋ, ಆರ್.ಟಿ.ಇ ಕಾಯ್ದೆ ಕುರಿತು” ಅರಿವು ಕಾರ್ಯಕ್ರಮವನ್ನು ಎಸ್. ಎಮ್ ಭೂಮರಡ್ಡಿ ಪದವಿ ಪೂರ್ವ ಕಾಲೇಜ ಗಜೇಂದ್ರಗಡದಲ್ಲಿ ಹಮ್ಮಿಕ್ಕೊಳ್ಳಲಾಯಿತು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಜಿ.ಬಿ. ಗುಡಿಮನಿ ವಹಿಸಿದರು. ಮಂಜುನಾಥ ಅಸೂಟಿ ಅವರು ಬಾಲ್ಯ ವಿವಾಹ ನಿಷೇಧ , ಫೋಕ್ಸೋ ಕಾಯ್ದೆ ಕುರಿತು ಹಾಗೂ ಶ್ರೀಧರ ಅವರು ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್. ಬಿ. ಮಸನಾಯಕ್, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಶ್ರೀಮತಿ ರಫೀಕಾ ಹಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಬಿ.ಎಂ.ಜೂಚನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಎ.ಎಸ್.ವಡ್ಡರ್ ಸರ್ವರನ್ನು ಸ್ವಾಗತಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button