ಮಕ್ಕಳಲ್ಲಿನ ಸೂಪ್ತ ಪ್ರತಿಭೆಯ ಅನಾವರಣವೇ ಪ್ರತಿಭಾ ಕಾರಂಜಿ; ಮುರ್ತುಜಾ ಡಾಲಾಯತ
ಮಕ್ಕಳಲ್ಲಿನ ಸೂಪ್ತ ಪ್ರತಿಭೆಯ ಅನಾವರಣವೇ ಪ್ರತಿಭಾ ಕಾರಂಜಿ; ಮುರ್ತುಜಾ ಡಾಲಾಯತ.
ಗಜೇಂದ್ರಗಡ:
ನಗರದ ಕೆ.ಜಿ.ಎಮ್.ಎಸ್. ಶಾಲೆಯಲ್ಲಿ ಸನ್ ೨೦೨೪-೨೫ ನೇ ಸಾಲಿನ ಪ್ರತಿಭಾ ಕಾರಂಜಿಗಳ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ ಉದ್ಘಾಟಿಸಿ ಮಾತನಾಡಿ
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅಭಿವ್ಯಕ್ತ ಪಡಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ.ಪಠ್ಯದ ಜೊತೆಗೆ ಪಠ್ಯೇತ್ತರ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕು. ಜನಪದ ಕಲೆಗಳು ಆಧುನಿಕ ಭರಾಟೆಯ ನಡುವೆಯೂ ಇಂದಿಗೂ ಜೀವಂತಿಕೆ ಪಡೆದುಕೊಂಡಿವೆ ಮಕ್ಕಳು ಜನಪದ ಕಲೆ ಕಲಿತು ಪ್ರದರ್ಶಿಸುವ ಆಸಕ್ತಿ ಬೆಳಿಸಿಕೊಳ್ಳಬೇಕು ಎಂದರು
ಪ್ರಾಸ್ತಾವಿಕವಾಗಿ ಉತ್ತರ ವಲಯದ ಸಿ.ಆರ್.ಪಿ. ಆದ ಕಾಲೇಶ ವನ್ನಾಲ ಮಾತನಾಡಿದರು.
ಇಲಾಖೆಯು ಹೊಸತನವನ್ನು ತರುತ್ತಾ ಇದೆ. ಅದರಲ್ಲಿ ಪ್ರತಿಭಾ ಕಾರಂಜಿಯೂ ಕೂಡಾ ಒಂದಾಗಿದೆ. ಇದರಿಂದ ಮಕ್ಕಳ್ಳಲ್ಲಿನ ಹೊಸ ಹೊಸ ಜ್ಞಾನ, ಪ್ರತಿಭೆಯುನ್ನು ಹೊರ ತರಲು ಸಾಧ್ಯವಾಗುತ್ತದೆ ಎಂದರು.
ಬಳಿಕ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಬಸವರಾಜ ಹಿರೇಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ
ಎಸ್.ಡಿ.ಎಮ್.ಸಿ.ಅಧ್ಯಕ್ಷ.
ಮನೋಹರ ಕಾಟವಾ
ಪುರಸಭೆ ಸದಸ್ಯ ಉದ್ಘಾಟನೆ ಮುರ್ತುಜಾ ಡಾಲಾಯತ
ಮುಖ್ಯ ಅಥಿತಿ ಶ್ರೀಧರ ಯಂಕಚಿ, ರಾಘವೇಂದ್ರ ಮ್ಯಾಕಲ್, ಕಾಲೇಶ ವನ್ನಾಲ, ಬಿ.ಎಮ್.ಹಿರೇಮಠ, ಬಿ.ಸಿ.ಅಂಗಡಿ, ಎಸ್.ಬಿ.ನಾಯಕ, ಬಿ.ಎಸ್.ಅಣ್ಣಿಗೇರಿ,ಟಿ.ಎಸ್.ಚಳಮರದ, ಎಸ್.ಆರ್.ಅಂಗಡಿ, ಸುಧಾ ಜಾಡರ, ಗೀತಾ ಸೂಡಿ, ಕಳಕಪ್ಪ ರಾಠೋಡ, ಗೀತಾ ಚೋಳಿನ್, ಸುಮಾ ಲಕ್ಕುಂಡಿ, ಸರಸ್ವತಿ ಬುಟ್ಟಾನವರ, ಎಸ್.ಟಿ.ಪೂಜಾರ, ಶ್ರೀನಿವಾಸ ನೀಲೂರ , ಕೆ.ಎಮ್.ಡೊಳ್ಳಿನ ಸೇರಿದಂತೆ ಅನೇಕರು ಇದ್ದರು.