ಅಂಬೇಡ್ಕರವರಿಗೆ ಅವಮಾನ- ಅಮಿತ್ ಶಾ ರಾಜೀನಾಮೆಗೆ ಅಂದಪ್ಪ ರಾಠೋಡ್ ಆಗ್ರಹ
ಅಂಬೇಡ್ಕರವರಿಗೆ ಅವಮಾನ- ಅಮಿತ್ ಶಾ ರಾಜೀನಾಮೆಗೆ ಅಂದಪ್ಪ ರಾಠೋಡ್ ಆಗ್ರಹ.
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ :
ಭಾರತ ದೇಶದ ಪ್ರತಿ ಪ್ರಜೆಗೂ ಶ್ರೇಷ್ಠವಾದ ಗ್ರಂಥ ಸಂವಿಧಾನ ಎಂದರೆ ತಪ್ಪಾಗಲಾರದು. ಅದನ್ನು ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರರವರಿಗೆ ಸಂಸತ್ತಿನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಹಗುರವಾಗಿ ಮಾತನಾಡುವ ಮೂಲಕ ಅವಮಾನಿಸಿದ್ದಾರೆ. ಈ ಕೂಡಲೇ ಶಾ ರವರು ದೇಶದ ಜನತೆಯಲ್ಲಿ ಕ್ಷಮೆ ಕೋರಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ದಲಿತ ಸಂಘಟನೆ ಮುಖಂಡರಾದ ಅಂದಪ್ಪ ರಾಠೋಡ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದೇಶದಲ್ಲಿ ಎಲ್ಲ ಜನಾಂಗದ ನಾಗರಿಕರು ಪರಸ್ಪರ ಸ್ನೇಹದಿಂದ ಬಾಳ್ವೆ ನಡೆಸಲು ನಮ್ಮ ಸಂವಿಧಾನ ಅಡಿಪಾಯವಿದ್ದಂತೆ ಅದನ್ನು ಪ್ರತಿ ನಾಗರೀಕ ಒಪ್ಪಿಕೊಳ್ಳುತ್ತಾನೆ.ನಮ್ಮ ಸಂವಿಧಾನ ಒಬ್ಬ ಸಾಮಾನ್ಯ ಮನುಷ್ಯ ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಯಾವದೇ ಇನ್ನಿತರ ಉನ್ನತ ಹುದ್ದೆಯನ್ನು ಪಡೆಯಲು ದಾರಿದೀಪವಾಗಿದೆ. ಆದ್ದರಿಂದ ಅಂಬೇಡ್ಕರರವರ ಬಗ್ಗೆ ಅವಹೇಳನಕಾರಿ ಮತ್ತು ಹಗುರವಾಗಿ ಮಾತನಾಡುವದನ್ನು ನಾವೂ ಸಹಿಸಿಕೊಳ್ಳುವದಿಲ್ಲ ಎಂಬ ಎಚ್ಚರಿಕೆಯನ್ನು ಅಂದಪ್ಪ ರಾಠೋಡ್ ತಿಳಿಸಿದ್ದಾರೆ.