ತುಳಜಾಭವಾನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.
ಜಗತ್ತು ಶಾಂತಿಯಿಂದ ಸಾಗಲು ಶ್ರೀಕೃಷ್ಣನ ಸಾರವನ್ನು ಅರಿಯಬೇಕು : ಪಿ.ಎಸ್.ಐ. ಸೋಮನಗೌಡ ಗೌಡರ.
ತುಳಜಾಭವಾನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.
ಗಜೇಂದ್ರಗಡ;
ಇಡೀ ಜಗತ್ತು ಶಾಂತಿ ಸೌಹಾರ್ದದಿಂದ ಇರಲು ನಾವೆಲ್ಲರೂ ಶ್ರೀ ಕೃಷ್ಣನ ಸಾರಿದ ಸಾರವನ್ನು ನಾವೆಲ್ಲ ಅರಿಯಬೇಕಿದೆ ಎಂದು ಪಿ.ಎಸ್.ಐ. ಸೋಮನಗೌಡ ಗೌಡರ ಹೇಳಿದರು.
ನಗರದ ತುಳಜಾ ಭವಾನಿ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಭಾರತದಲ್ಲಿ ಶ್ರೀಕೃಷ್ಣನ ಐತಿಹ್ಯವನ್ನು ನಾವೆಲ್ಲರೂ ಅವನ ಜನ್ಮಾಷ್ಟಮಿಯಂದು ನೆನಯಬೇಕು ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿಬೇಕಿದೆ. ಮಹಾಭಾರತದಲ್ಲಿ ಶ್ರೀಕೃಷ್ಣ ನೀಡಿದ ವಾಣಿಯನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಬಳಿಕ ತಾ.ಪಂ ಮಾಜಿ ಉಪಾಧ್ಯಕ್ಷರಾದ ಶಶಿಧರ ಹೂಗಾರ ಮಾತನಾಡಿ
ಶ್ರೀಕೃಷ್ಣನಿಗೆ ಅಲಂಕಾರ ಅಚ್ಚುಮೆಚ್ಚು ಅದರಂತೆ ಶಾಲೆಯ ಮಕ್ಕಳು ಮುದ್ದು ಅಲಂಕಾರದಲ್ಲಿ ನೋಡುತ್ತಾ ಇದ್ದರೆ ಮನಸೂರಗೊಳ್ಳುತ್ತದೆ. ಶ್ರೀಕೃಷ್ಣ ವೇಷಭೂಷಣ ಮಾತ್ರವಲ್ಲದೆ, ಅವನ ಬುದ್ದಿ ಶಕ್ತಿಯಂತೆ ಮಕ್ಕಳು ಚುರುಕುತನದಿಂದ ಅಭ್ಯಾಸ ಮಾಡಲು ಕಲಿಯಬೇಕು ಎಂದರು.
ಬಳಿಕ ಉಪನ್ಯಾಸಕ ಆರ್.ಕೆ.ಚವ್ಹಾಣ ಮಾತನಾಡಿದರು.
ಮುದ್ದು ಮಕ್ಕಳು ಶ್ರೀ ಕೃಷ್ಣ ರಾಧೆಯರ ವೇಷಭೂಷಣ ನೆರೆದ ಪಾಲಕರ ಮನಸೊರೆಗೊಂಡವು.
ಇನ್ನೂ ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಲಾಲಪ್ಪ ರಾಠೋಡ, ಸರ್ವೋದಯ ಮಹಿಳಾ ಕಾಲೇಜಿನ ಅಧ್ಯಕ್ಷ ಲೋಕಪ್ಪ ರಾಠೋಡ, ಎಸ್.ವಾಯ್ ಮುಧೋಳ, ಮಹಾಂತೇಶ ಪೂಜಾರ,
ವಾಯ್ .ಎಲ್.ನಧಾಫ್,
ಮುಖ್ಯ ಶಿಕ್ಷಕಿ ರೇಖಾ ಮಾನೆ, ಮಂಜುಳಾ ಭಜೇಂತ್ರಿ, ಸಾವಿತ್ರಿ ಹಿರೇಮನಿ, ಸುನಿತಾ ಹವಾಲ್ದಾರ, ವಿದ್ಯಾ ದಾಸರ, ಸರಸ್ವತಿ ರಾಠೋಡ, ವಿಜಯಲಕ್ಷ್ಮಿ ತಾಸೀನ, ಉಮಾ ಯಂಕಚಿ, ಸುಮಗಂಲಾ ಗೊರವರ, ಲಕ್ಷ್ಮಿ ಗಣವಾರಿ, ದಿವ್ಯ ಚವ್ಹಾಣ, ಶಾಂತಾ ರಾಠೋಡ, ರುದ್ರಪ್ಪ ಚವ್ಹಾಣ ಸೇರಿದಂತೆ ಮುದ್ದು ಮಕ್ಕಳು ಇದ್ದರು.