ರಾಜ್ಯ ಸುದ್ದಿ
ಶ್ರೀ ಸಿದ್ದಶ್ರೀ ಉತ್ಸವ – ಶ್ರೀ ರವಿ ಬಸ್ರೂರುಗೆ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ಹಾಗೂ ಕಿನ್ನಾಳ ರಾಜೂ ಗೆ ರಾಜ್ಯ ಪ್ರಶಸ್ತಿ…!
ಸಿದ್ದಶ್ರೀ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೆಸಿಎಫ್ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ಶ್ರೀ ರವಿ ಬಸ್ರೂರುನೀಡಲಾಗುತ್ತಿದೆ ಎಂದು ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಮಹಾ ಸ್ವಾಮಿಗಳು ಹೇಳಿದರು.
JanadhwaniNewsBagalkot:ಬಾಗಲಕೋಟೆ: ಜಿಲ್ಲೆಯ ಇಲಕಲ್ಲ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದ ನಿರಂತರ ದಾಸೋಹ ಮತ್ತು ಕಲಾ ಪೋಷಕರ ಮಠದ ಶ್ರೀ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ- ಶ್ರೀಸಿದ್ಧಶ್ರೀ ರಾಷ್ಟ್ರೀಯ ಉತ್ಸವ-2025. ಜನೇವರಿ 14,15ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.
ಸಿದ್ದಶ್ರೀ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೆಸಿಎಫ್ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ಶ್ರೀ ರವಿ ಬಸ್ರೂರುನೀಡಲಾಗುತ್ತಿದೆ ಎಂದು ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಮಹಾ ಸ್ವಾಮಿಗಳು ಹೇಳಿದರು.
ಸಿದ್ದಶ್ರೀ ರಾಜ್ಯ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ಸಾಹಿತಿ ಶ್ರೀ ಕಿನ್ನಾಳ ರಾಜು ನೀಡಲಾಗುತ್ತಿದೆ ಎಂದರು.
ಇಂದು ಸಿದ್ಧನಕೊಳ್ಳದ ಮಠದದಲ್ಲಿ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಸುದ್ದಿ ಗೋಷ್ಠಿಯಲ್ಲಿ ಎರಡು ದಿನಗಳ ಕಾಲ ನಡೆವ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಗನಗೌಡ ಕುರಡಗಿ, ಸಂಗಮೇಶ ಉದ್ದಾರ,ಡಾ.ಪ್ರಭು ಗಂಜಿಹಾಳ,ಹುಲ್ಲೂಪ್ಪ ಹಳ್ಳೂರ, ಹನುಮಂತ ಬಂಡಿ, ಮಹೇಶ್ ವಡ್ಡರ ಸೇರಿದಂತೆ ಅನೇಕರು ಇದ್ದರು.