ಕುಷ್ಟಗಿಕುಕನೂರುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ವಿತರಣೆ.

Share News

ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ವಿತರಣೆ.
ಗಜೇಂದ್ರಗಡ:

ಗಜೇAದ್ರಗಡ ನಗರದ ಅಂಜುಮನ್ ಶಾದಿಮಹಲದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಡಾ.ಎ.ಪಿ.ಜಿ.ಅಬ್ದುಲಕಲಾಂ ಕ್ರಿಕೆಟ್ ಪ್ರೀಮಿಯರ್ ಲೀಗ್ ಇವರ ವತಿಯಿಂದ ಇಸ್ಲಾಂ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಇನ್ನೂ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನಿ ಹಜರತ ಸಯ್ಯದ ನಿಜಾಮಿದ್ದಿನಷಾ ಆಶ್ರಫಿ ಮಕಾನದಾರ ಟೆಕ್ಕದ ಬಾವನವರು ಹಾಗೂ ಖ್ಯಾತ ಕವಿಗಳು ಸಂಚಾಲಕರಾದ ಶ್ರೀ ಅಮೀರ ಬನ್ನೂರಿ ವಹಿಸಿ ಪ್ರವಾದಿ ಮೊಹಮ್ಮದ ಪೈಗಂಬರರು ತಮ್ಮ ಸವಾಲು, ಸಂಕಷ್ಟಗಳಿAದಲೇ ಮೇಲೆದ್ದು ಲೋಕಕಲ್ಯಾಣದ ಚಿಂತನೆ ಮಾಡಿದವರು. ಅಂದಿನ ಸಮಾಜದಲ್ಲಿದ್ದ ಧಾರ್ಮಿಕ ಅಜ್ಞಾನ, ಸಾಮಾಜಿಕ ಅಸಮಾನತೆ, ವ್ಯಕ್ತಿಗತ ಮೌಢ್ಯ ಇತ್ಯಾದಿ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾದರು. ಅವರ ತತ್ವಸಿದ್ಧಾಂತಗಳನ್ನು ಅವರೆಂದೂ ಬರೆದಿಡಲಿಲ್ಲ. ಅವು ಜಾನಪದ ಸಾಹಿತ್ಯದಂತೆ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ತಲುಪಿ `ಖುರಾನ್’ ಧರ್ಮಗ್ರಂಥದ ರೂಪ ಪಡೆದವು. ಪ್ರವಾದಿಗಳು ಖುರಾನ್ ಗ್ರಂಥದಲ್ಲಿರುವ ಉಪದೇಶಾಮೃತ ತಾವೇ ನೀಡಿದವು ಎನ್ನುವ ಅಹಂಕಾರ ಬೆಳೆಸಿಕೊಂಡವರಲ್ಲ. ಅಲ್ಲಾಹನ ಸಂದೇಶವನ್ನು ನಾನು ತಿಳಿಸುತ್ತೇನೆ ಎನ್ನುವ ವಿನಯವಂತಿಕೆ ತೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಇಸ್ಲಾಂ ಕಮೀಟಿಯ ಚೇರ್ಮನ್ ಹಸನಸಾಬ ತಟಗಾರ ವಹಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಯುವಕರು ಸಾಲದ ಸುಳಿಯಲ್ಲಿ, ಬೆಟ್ಟಿಂಗ್, ಬಡ್ಡಿ ವ್ಯವಹಾರಗಳನ್ನು ಬಿಟ್ಟು ಕಷ್ಟಪಟ್ಟು ದುಡಿದು ಜೀವನ ಸಾಗಿಸಬೇಕು ಅಂದಾಗ ಮಾತ್ರ ಸಮಾಜಕ್ಕೆ ಒಂದು ಗೌರವ ನೀಡಿದಂತಾಗುತ್ತದೆ ಎಂದರು.


ಕಾರ್ಯಕ್ರಮದ ಉದ್ಘಾಟಕರಾಗಿ ಡಾ.ಐ.ಜಿ. ಮ್ಯಾಗೇರಿ ಅಧೀಕ್ಷಕರು ಕೇಂದ್ರ ಕಾರಾಗೃಹ ವಿಜಯಪುರ, ರಫೀಕ ತೋರಗಲ್ ವಕೀಲರು, ಅಧ್ಯಕ್ಷರು ಅಬ್ದುಲಕಲಾಂ ಟ್ರಸ್ಟ್, ಮುರ್ತುಜಾ ಡಾಲಾಯತ ಪುರಸಭೆ ಸದಸ್ಯರು, ಯೂತ್ ಐಕಾನ , ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನೂ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ರೋಣ ಸಿ.ಪಿ.ಐ ಎಸ್.ಎಸ್. ಬೀಳಗಿ, ರಾಜೂ ಸಾಂಗ್ಲಿಕರ ಮಾತನಾಡಿ ಕ್ರೀಡೆಗೆ ಎಷ್ಟು ಪ್ರೋತ್ಸಾಹ ನೀಡುತ್ತೇವೆಯೋ ಅಷ್ಟೇ ಸಮಾಜದಲ್ಲಿನ ಮಕ್ಕಳ ಓದಿಗೂ ನೀಡಬೇಕು ಹಾಗೂ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಮುಂದಿನ ದಿನಗಳಲ್ಲಿ ಇದೇ ಶಾದಿ ಮಹಲದಲ್ಲಿ ಪೂರ್ವ ತಯಾರಿಗಳ ತರಬೇತಿಗಳನ್ನು ನೀಡಬೇಕು ಎಂದರು.

ನಂತರ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ ೮೫ ಕ್ಕಿಂತ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.

ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಕ್ರಿಕೇಟ್ ಪ್ರೀಮಿಯರ್ ಲೀಗ್ ವತಿಯಿಂದ ನಡೆದ ಕ್ರಿಕೆಟ್ ಟೋರ್ನಾವೆಂಟದಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಬಾರಿ ಡಾಲಾಯತ ಬ್ರದರ್ಸ್ ತಂಡ ಚಾಪಿಯನ್ ಆಗಿ ಹೊರಹೊಮ್ಮಿದರೆ, ರನ್ನರ್ ಅಪ್ ಆಗಿ ಟಿಪ್ಪು ಸುಲ್ತಾನ ವಾರಿಯರ್ಸ , ತೃತೀಯ ಸ್ಥಾನವನ್ನು ಬಿ.ಎಸ್. ಬ್ಲಾಸ್ಟರ ಹಾಗೂ ಚತುರ್ಥ ಸ್ಥಾನವನ್ನು ಸಾಗರ ವಾರಿಯರ್ಸ್ ಪಡೆದು ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಎ.ಕೆ.ಒಂಟಿ, ಬಿ.ಎನ್.ಜಾಲಿಹಾಳ, ದಾದೇಸಾಬ ಹಣಗಿ, ಎಸ್.ಎಮ್.ಸೈಯ್ಯದ,ಡಿ.ಜಿ.ಮೋಮಿನ,ಸುಭಾನ ಸಂತು,ಮದರಸಾಬ ಡಾಲಾಯತ,ಪಿ.ಎನ್.ದೊಡ್ಡಮನಿ,ಎಮ್,ಡಿ,ದೊಡ್ಡಮನಿ,ರೀಯಾಜ್ ಒಂಟಿ,ಫಕ್ರುಸಾಬ ಕಾತರಕಿ,ರೀಯಾಜ ಎಲಿಗಾರ,ಮೆಹಬೂಬ ಚಾಮಲಾಪೂರ,ಶೌಕತಲಿ ಅರಳಿಕಟ್ಟಿ,ಶಾಮೀದ ಮಾಲ್ದಾರ,ಗುಲಾಂ ಹುನಗುಂದ,ಜಾಫರ ದಿಂಡವಾಡ,ರಫೀಕ ಜವಳಗೇರಿ,ನಾಸೀರಅಲಿ ಸುರಪುರ,ಅಲ್ತಾಫ್ ರೋಣದ,ಮುರ್ತುಜಾಸಾಬ ಚೋರಗಸ್ತಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎ.ಡಿ.ಕೋಲಕಾರ,ಎಮ್.ಬಿ.ಕಂದಗಲ್ಲ,ಎಮ್,ಎಚ್,ಕೋಲಕಾರ,ಎಸ್.ಎಮ್.ಆರಗಿದ್ದಿ,ಬಾಷೇಸಾಬ ಕರ್ನಾಚಿ, ಎ.ಕೆ.ಬಾಗಮಾನ,ಹಾಸೀಂಅಲಿ ಹಿರೇಹಾಳ,ಫಯಾಜ್ ತೋಟದ,ಅಶ್ರಫಅಲಿ ಗೋಡೆಕಾರ,ಮುರ್ತುಜಾ ಆರಗಿದ್ದಿ,ರಫೀಕ ಬಾಗಲಕೋಟಿ,ಸದ್ದಾಂ ಮನಿಯಾರ,ದಾವಲಸಾಬ ಮುಜಾವರ,ದಾವಲಸಾಬ ತಾಳಿಕೋಟಿ,ಬಾಷಾ ಮುದಗಲ್,ಇಮ್ರಾನ ಅತ್ತಾರ ಸೇರಿದಂತೆ ಅನೇಕರು ಇದ್ದರು.
****************


Share News

Related Articles

Leave a Reply

Your email address will not be published. Required fields are marked *

Back to top button