ಉಡುಪಿಆರೋಗ್ಯ ಇಲಾಖೆಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಸ್ಥಳೀಯ ಸುದ್ದಿಗಳು
ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ
ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ
ಜನಧ್ವನಿ ಕನ್ನಡ ಸುದ್ದಿಮೂಲ:
ಗಜೇಂದ್ರಗಡ:
ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ನೆರವೇರಿತು. ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಸರದಿಯಲ್ಲಿ ನಿಂತು ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದು ದೀಪಗಳನ್ನು ಹಚ್ಚಿ ಭಕ್ತಿಯನ್ನು ಸಮರ್ಪಿಸಿದರು.
ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು.
ಕಾರ್ತಿಕೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಹಾಗೂ ವಿವಿಧ ಜಿಲ್ಲೆಗಳಿಂದ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
ಈ ಸಂದರ್ಭದಲ್ಲಿ ರಾಚಯ್ಯ ಬಾಳಿಕಾಯಿಮಠ,ಮಾಂತಯ್ಯ ಕಪ್ಲಿಮಠ, ಬಾಲಚಂದ್ರ ವಾಲ್ಮೀಕಿ, ರಮೇಶ ರಾಮಜಿ,
ಪ್ರಭುಲಿಂಗಯ್ಯ ಹಿರೇಮಠ,ಯಮನೂರಸಾಬ ಕಳ್ಳಿಗುಡಿ,
ಬಸುರಾಜ ಯಡ್ರಾವಿ, ವೀರಯ್ಯ ಪೂಜಾರ, ಶಿವಾನಂದ ಹುಯಿಲಗೋಳ,ಗುರಯ್ಯ ಪೂಜಾರ,ಚನ್ನವೀರಯ್ಯ ಪೂಜಾರ,ಹೊನ್ನಕೇರಪ್ಪ ಹೂಗಾರ, ಸಂಗಪ್ಪ ಸೊಲಬಗೌಡ್ರ ಗ್ರಾಮಸ್ಥರು ಊರಿನ ಯುವಕರು ಉಪಸ್ಥಿತರಿದ್ದರು