ಉಪಯುಕ್ತ ಮಾಹಿತಿಗಳುಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಕನಕಗಿರಿಕಳ್ಳತ‌ನಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಚುನಾವಣಾ ಬಾಂಡ್‌ ಅಕ್ರಮಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಪರೀಕ್ಷೆಬಿಗ್ ಬಾಸ್ಬಿಸಿನೆಸ್ ಕನೆಕ್ಟ್ಬೆಳಗಾವಿರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಕ್ಫ್ವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ವಿರೋಧ ಪಕ್ಷದ ಕಛೇರಿಗಾಗಿ ಮುಖ್ಯಾಧಿಕಾರಿಗಳ ಕಛೇರಿ ಎದುರು ಕುಳಿತ ಬಿಜೆಪಿ ಸದಸ್ಯರು

Share News

ವಿರೋಧ ಪಕ್ಷದ ಕಛೇರಿಗಾಗಿ ಮುಖ್ಯಾಧಿಕಾರಿಗಳ ಕಛೇರಿ ಎದುರು ಕುಳಿತ ಬಿಜೆಪಿ ಸದಸ್ಯರು.

ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ:

ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಕಛೇರಿಯ ಮುಂದೆ ಬಿಜೆಪಿಯಿಂದ ಆಯ್ಕೆಯಾದ ಪುರಸಭೆ ಸದಸ್ಯರು ಮುಖ್ಯಾಧಿಕಾರಿಗಳ ಕಛೇರಿ ಎದುರು ಕುಳಿತ ಘಟನೆ ಮಂಗಳವಾರ ನಡೆಯಿತು.

ಈ ಹಿಂದಿನ ಅವಧಿಯಲ್ಲಿ ಗಜೇಂದ್ರಗಡ ಪುರಸಭೆಯ ಆಡಳಿತವೂ ಬಿಜೆಪಿ ಪಕ್ಷ ನಡೆಸಿದ್ದು, ಕಾಲಾಂತರದಲ್ಲಿ ಬಿಜೆಪಿಯ ಕೆಲ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಆಡಳಿತ ನಡೆಸುತ್ತಿದ್ದು ಎಲ್ಲರಿಗೂ ತಿಳಿದ ವಿಷಯ. ಇದೀಗ ಬಿಜೆಪಿಯು ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಅವರಿಗೆ ಸೂಕ್ತವಾದ ವಿರೋಧ ಪಕ್ಷದ ಕಛೇರಿಗಾಗಿ ಮುಖ್ಯಾಧಿಕಾರಿ ಕಚೇರಿ ಮುಂದೆ ಬಿಜೆಪಿಯ ಚುನಾಯಿತ ಸದಸ್ಯರು ಕುಳಿತು ಪ್ರತೇಕ ವಿರೋಧ ಪಕ್ಷದ ಕೊಠಡಿಗಾಗಿ ಮನವಿ ಮಾಡಿದರು.

ಬಳಿಕ ಮಾಧ್ಯಮದೊಂದಿಗೆ ಪುರಸಭೆ ಸದಸ್ಯ ಯಮನೂರಪ್ಪ ತಿರಕೋಜಿ ಮಾತನಾಡಿ ಕಳೆದ ಹಲವಾರು ತಿಂಗಳುಗಳಿಂದ ವಿರೋಧ ಪಕ್ಷ ಕಚೇರಿಗಾಗಿ ಮುಖ್ಯಾಧಿಕಾರಿಯವರಿಗೆ ಹಲವಾರು ಮನವಿ ಮಾಡಲಾಗಿತ್ತು. ಆದರೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸರಿಯಾಗಿ ಸ್ಪಂದಿಸದೆ ಇದ್ದದರಿಂದ ಅವರ ಕಚೇರಿ ಎದುರು ಕುಳಿತುಕೊಳ್ಳುವುದು ಅನಿವಾರ್ಯವಾಗಿತ್ತು ಎಂದರು.

 

ಬಳಿಕ‌ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾಧ್ಯಮದೊಂದಿಗೆ ಮಾತನಾಡಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದೆ. ವಿಷಯ ತಿಳಿದ ನಂತರ ಸ್ವಲ್ಪ ತಡವಾಗಿ ತೆರಳಿದೆ. ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ವಿರೋಧ ಪಕ್ಷ ಕಚೇರಿಯ ಬೇಡಿಕೆಯನ್ನು ಶೀಘ್ರವಾಗಿಯೇ ಅದನ್ನು ನೀಡುತ್ತೇನೆ ಎಂದರು.

 

ಇದೇ ಸಂದರ್ಭದಲ್ಲಿ ಅಶೋಕ ವನ್ನಾಲ, ಕನಕಪ್ಪ‌ ಅರಳಿಗಿಡದ,ರೂಪಲೇಪ್ಪ ರಾಠೋಡ, ವೀರಪ್ಪ ಪಟ್ಟಣಶೆಟ್ಟಿ, ಮೂಕಪ್ಪ ನಿಡಗುಂದಿ, ಉಡಚಪ್ಪ ಚನ್ನಣ್ಣನವರ, ರವಿ ಶಿಂಗ್ರೀ, ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button