crimeಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಬಾಗಲಕೋಟೆರಾಜ್ಯ ಸುದ್ದಿರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು

‘ಬಂಡಿ’ ವಡ್ಡರ್ ಮೇಲೆ ಲೋಕಾಯುಕ್ತ ರೇಡ್ ಕೋಟಿಗಟ್ಟಲೆ ಹಣ ಬೆಳ್ಳಿ,ಚಿನ್ನ ಪತ್ತೆ..!

ಬಂಡಿವಡ್ಡರ್ ಗೆ ಸಂಬಂಧಿಸಿದಂತೆ ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು ಐದು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಈ ವೇಳೆ, ಲೋಕಾಯುಕ್ತರಿಗೆ 2 ಮನೆ, 1 ನಿವೇಶನ, 1 ಜೆಸಿಬಿ, 1 ಕಾರ್, 1 ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್ ಪತ್ತೆಯಾಗಿವೆ.

Share News

ಗದಗ: ಅಕ್ರಮ‌ ಆಸ್ತಿ ಗಳಿಸಿರುವ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಹುಚ್ಚೇಶ ಬಂಡಿವಡ್ಡರ ನಿವಾಸಗಳ ಮೇಲೆ ಮೇಲೆ ಇಂದು ಬೆಳಿಗ್ಗೆ (ಬುಧವಾರ 08-01-2025) ದಾಳಿ ನಡೆಸಿದ ಲೋಕಾಯಕ್ತರಿಗೆ 1.50 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬಂಡಿವಡ್ಡರ್ ಗೆ ಸಂಬಂಧಿಸಿದಂತೆ ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಒಟ್ಟು ಐದು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಈ ವೇಳೆ, ಲೋಕಾಯುಕ್ತರಿಗೆ 2 ಮನೆ, 1 ನಿವೇಶನ, 1 ಜೆಸಿಬಿ, 1 ಕಾರ್, 1 ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್ ಪತ್ತೆಯಾಗಿವೆ.

ಇದಷ್ಟೇ ಅಲ್ಲದೇ, ಗಜೇಂದ್ರಗಡ ಪಟ್ಟಣದಲ್ಲಿ, 22 ಲಕ್ಷ ಮೌಲ್ಯದ ಶಾಪಿಂಗ್ ಕಾಂಪ್ಲೆಕ್ಸ್, 17 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಸೇರಿದಂತೆ ಬ್ಯಾಂಕಿನಲ್ಲಿ 22 ಲಕ್ಷ ನಗದು ಸೇರಿ, ಒಟ್ಟು 1.50 ಕೋಟಿ ಅಕ್ರಮ‌ ಆಸ್ತಿ ಪತ್ತೆಯಾಗಿದ್ದು, ಹಲವು ದಾಖಲೆಗಳು ಸಿಕ್ಕಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ನಗರಸಭೆ ಇಂಜಿನಿಯರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದ ಬೆನ್ನಲ್ಲೇ ಇದೀಗ ನಗರಸಬೆ ಇನ್ನುಳಿದ ಅಧಿಕಾರಿಗಳಿಗೂ ನಡುಕು ಶುರುವಾಗಿದೆ. ದಾಳಿ ಮಾಹಿತಿಯಿಂದ ಬುಧವಾರ ನಗರಸಭೆ ಬಿಕೋ ಎನ್ನುತ್ತಿತ್ತು.ಹಲವು ಅಧಿಕಾರಿಗಳು ಕಚೇರಿಯತ್ತ ಮುಖ ಮಾಡಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು.

ಇನ್ನು ಮುಖ್ಯವಾಗಿ ಬಂಡಿವಡ್ಡರ್ ಅವರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಮೂಲತಃ ಪಿಯುಸಿ ಸಮಾನವಾಗಿರುವ ಜೆಓಡಿಸಿ ಶೈಕ್ಷಣಿಕ ಅರ್ಹತೆಯನ್ನ ಪಡೆದಿದ್ದಾರೆ. ಆದರೆ ನಗರಸಭೆ ಇಂಜಿನೀಯರ್ ಹುದ್ದೆ ಅಲಂಕರಿಸಿರುವದು ಯಾವ ಆಧಾರದ ಮೇಲೆ? ಅನ್ನೋ ಸರಿ ತಪ್ಪು ಚರ್ಚೆಗಳು ಕೇಳಿಬಂದಿವೆ. ಒಟ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.

ಲೋಕಾಯುಕ್ತ ಎಸ್ಪಿ ಹನುಮಂತರಾಯ್, ಡಿವೈಎಸ್ಪಿ ವಿಜಯ್ ಬಿರಾದಾರ್, ಪಿಎಸ್ಐ ಎಸ್.ಎಸ್.ತೇಲಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ದಾಳಿಯಲ್ಲಿ‌ ಭಾಗವಹಿಸಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button