ಅಂತಾರಾಷ್ಟ್ರೀಯಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗ

ಗಜೇಂದ್ರಗಡ ನಗರದಲ್ಲಿ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ.

Share News

ಗಜೇಂದ್ರಗಡ ನಗರದಲ್ಲಿ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ.

ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ‌ ಜಿ.ಎಸ್.ಪಾಟೀಲರಿಂದ‌ ತಾಯಿ ಭುವನೇಶ್ವರಿಗೆ ಪೂಜೆ.

ಹೂ ಮಾಲೆ ಹಾಗೂ ಪುಷ್ಪಗಳ ಅರ್ಪಣೆಯಿಂದ ಅದ್ದೂರಿ ರಥ ಯಾತ್ರೆಗೆ ಚಾಲನೆ.

ನಗರದ ಟಿ.ಟಿ.ಡಿ.ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆ ರೋಣ ರಸ್ತೆಯ ಮಾರ್ಗವಾಗಿ ಮೆರವಣಿಗೆ.

ರೋಣ ರಸ್ತೆಯಿಂದ ರಾಜೂರು, ಸೂಡಿ,‌ರೋಣ ಮಾರ್ಗವಾಗಿ ತೆರಳಿದ ಕನ್ನಡ ರಥಯಾತ್ರೆ.

ಜನಧ್ವನಿ ಕನ್ನಡ ನ್ಯೂಸ್:

ಗಜೇಂದ್ರಗಡ;

ನಗರದ ಟಿ.ಟಿ.ಡಿ.ಕಲ್ಯಾಣ ಮಂಟಪದ ಹತ್ತಿರ ಆಗಮಿಸಿದ್ದ ಕನ್ನಡ ರಥ ಯಾತ್ರೆಗೆ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ಪುಷ್ಪ ಅರ್ಪಣೆ ಮಾಡುವ ಮೂಲಕ ನಗರದಲ್ಲಿ ರಥ ಯಾತ್ರೆಗೆ ಚಾಲನೆಯನ್ನು ರವಿವಾರ ನೀಡಿದರು.

 

ಬಳಿಕ‌ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನವೂ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಅದರ ನಿಮಿತ್ತ ರಾಜ್ಯಾದ್ಯಂತ ಭುವನೇಶ್ವರಿ ತಾಯಿಯ ಹೊತ್ತ ಮೆರವಣಿಗೆಯ ರಥವೂ ಪ್ರವಾಸ ಕೈಗೊಂಡ ಹಿನ್ನಲೆಯಲ್ಲಿ ನಮ್ಮ ಕ್ಷೇತ್ರಕ್ಕೆ ಆಗಮಿಸಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಅದನ್ನು ಅದನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕೋಟೆನಾಡು ಗಜೇಂದ್ರಗಡದಲ್ಲಿ ಜಿಲ್ಲಾ ಕನ್ನಡ‌ ಸಾಹಿತ್ಯ ಸಮ್ಮೇಳನವನ್ನು ಶೀಘ್ರದಲ್ಲೇ ಮಾಡುವ ಯೋಜನೆ ಇದೆ ಎಂದರು.

 

ಇದೇ ಸಂದರ್ಭದಲ್ಲಿ ಜಗದ್ಗುರು ವಿಜಯಮಹಾಂತ ಮಹಾಸ್ವಾಮಿಗಳು, ಹಜರತ ಸೈಯದ್ ನಿಜಾಮುದ್ದಿನ ಷಾ‌ ಆರ್ಶಫಿ ಮಕಾನಾದಾರ,ಗಜೇಂದ್ರಗಡ ತಾಲೂಕಾ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ, ತಾಲೂಕಾ ಪಂಚಾಯತಿ ಮುಖ್ಯ ಕಾರ್ಯ ನಿರ್ಮಾಹಕ ಅಧಿಕಾರಿ ಬಸವರಾಜ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಜಿಲ್ಲಾ‌ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾ ಕಸಾಪ ಅಧ್ಯಕ್ಷ ಅಮರೇಶ ಗಾಣಗೇರ, ಕರವೇ ಮುಖಂಡ ಎಚ್.ಎಸ್.ಸೊಂಪೂರ, ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಶಿವರಾಜ ಘೋರ್ಪಡೆ, ರಾಜೂ ಸಾಂಗ್ಲೀಕರ, ಚಂಬಣ್ಣ ಚವಡಿ, ಶ್ರೀಧರ ಬಿದರಳ್ಳಿ, ಶ್ರೀಕಾಂತ ಅವದೂತ,ರವಿ ಗಡೇದವರ,ಬಸವರಾಜ ರೇವಡಿ, ಮಂಜುಳಾ ರೇವಡಿ, ವಿ.ಬಿ.ಸೊಮ್ಮನಕಟ್ಟಿಮಠ, ಯಲ್ಲಪ್ಪ ಬಂಕದ ಎ.ಕೆ.ಒಂಟಿ, ವಿ.ಎ.ಹಾದಿಮನಿ, ರಾಘವೇಂದ್ರ ಮ್ಯಾಕಲ್, ಕಾಲೇಶ ವನ್ನಾಲ, ಶ್ರೀನಿವಾಸ ನೀಲೂರ, ಶರಣು ಪೂಜಾರ, ಬಸವರಾಜ ಚನ್ನಿ, ಸಿದ್ದು ಗೊಂಗಡಶೆಟ್ಟಿಮಠ, ಸಂತೋಷ ಚಿತ್ರಗಾರ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button