ರೋಗರುಜಿನಿಗಳ ಆಹ್ವಾನ ಕೇಂದ್ರ ಬಿಂದು ಬಾಯಿ ಡಾ ಎಸ್ ಬಿ ಲಕ್ಕೋಳ.
ವರದಿ : ಪ್ರಕಾಶ
ರೋಣ :
ಉತ್ತಮ ಆರೋಗ್ಯಕ್ಕಾಗಿ ಬಾಯಿಯ ಸ್ವಚ್ಛತೆ ಬಹು ಮುಖ್ಯ ಪ್ರತಿಯೊಂದು ರೋಗ ರುಜನಿಗಳ ಆಹ್ವಾನ ಕೇಂದ್ರ ಬಿಂದು ಬಾಯಿ. ಅದರ ಸ್ವಚ್ಛತೆ ಬಗ್ಗೆ ಪ್ರತಿ ದಿನ ಎರಡರಿಂದ ಮೂರು ಸಾರಿ ಹಲ್ಲು ಉಜ್ಜುವುದು ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು ಪ್ರತಿಯೊಂದು ರೋಗ ರುಜಿನಿಗಳ ಆಹ್ವಾನ ಕೇಂದ್ರ ಬಿಂದು ಬಾಯಿ ಎಂದು ಡಾ :ಎಸ್ ಬಿ ಲಕ್ಕೋಳ ಹೇಳಿದರು.
ಪಟ್ಟಣದ ಕೃಪಾ ದಂತ ಚಿಕಿತ್ಸಾಲಯದಲ್ಲಿ ಭಾನುವಾರ ನಡೆದ ಉಚಿತ ದಂತಾ ಚಿಕಿತ್ಸಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ಉತ್ತಮ ಹಲ್ಲಿನ ಆರೋಗ್ಯವು ಇಡೀ ದೇಹದ ಆರೋಗ್ಯದ ಪ್ರಮುಖ ಭಾಗವಾದ ಬಾಯಿಯು ಮಹತ್ವದ ಪಾತ್ರ ವಹಿಸುವುದು ಅದರಲ್ಲಿಯೂ ಹಲ್ಲುಗಳು ಪ್ರತಿಯೊಂದು ಜೀವಿಯ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬಿರುತ್ತವೆ. ಆರೋಗ್ಯಕರ ಬಾಯಿಯನ್ನು ಹೊಂದಲು ದಂತ ಆರೈಕೆ ಆತೀ ಪ್ರಾಮುಖ್ಯತೆ ಹೊಂದುತ್ತದೆ ಎಂದರು.
ಪ್ರತಿಯೊಬ್ಬರೂ ಸದೃಢ ಆರೋಗ್ಯಕರ ಜೀವನ ಸಾಗಿಸಲು ಪ್ರಮುಖವಾಗಿ ಹಲ್ಲುಗಳಿಗೆ ವಿಶೇಷ ಕಾಳಜಿ ವಹಿಸಬೇಕು ಎಂದರು. ಉತ್ತಮ ಹಲ್ಲಿನ ಆರೋಗ್ಯಕ್ಕ ಪ್ರತಿಯೊಬ್ಬರೂ ಈ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು, ಪ್ರತಿದಿನ ಎರಡು ಬಾರೀ ಹಳ್ಳುಗಳನ್ನು ಉಜ್ಜಬೇಕು. ನಾಲಿಗೆಯ ನೈರ್ಮಲ್ಯಗಳನ್ನು ನೋಡಿಕೊಳ್ಳಬೇಕು.
ಫ್ಲೋರೇಡ್ ಟ್ಯೂತ ಪೇಸ್ಟ್ ಬಳಕೆ ಮಾಡುವುದು ಸೂಕ್ತ ಎಂದರು ಅಲ್ಲದೇ ವರ್ಷಕ್ಕೆ ಎರಡು ಸಾರಿಯಾದರೂ ದಂತ ತಜ್ಞರ ಭೇಟಿ ಮಾಡಿಕೊಂಡು ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದರು.
ಒಟ್ಟಾರೆಯಾಗಿ ಪ್ರತಿಯೊಬ್ಬರೂ ಹಲ್ಲಿನ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸುವುದಕ್ಕೆ ಗಮನ ಹರಸಿಕೊಳ್ಳಬೇಕು ಎಂದರು.
ಬಳಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಖ್ಯಾತ ದಂತ ವೈದ್ಯರಾದ ನವೀನ ಹಿರೇಗೌಡರ ಮಾತನಾಡಿ
ಪ್ರತಿಯೊಬ್ಬರ ಸದೃಢ ಆರೋಗ್ಯವು ಅವರ ಹಲ್ಲಿನ ಆರೋಗ್ಯದ ಮೇಲೆ ನಿಂತಿರುತ್ತದೆ ಎಂದರು. ಉತ್ತಮ ಹಲ್ಲಿನ ಆರೋಗ್ಯಕ್ಕೆ ಹಲ್ಲಿನ ವಸಡುಗಳಲ್ಲಿ ರಕ್ತ ಸ್ರಾವ ಹಲ್ಲುನೋವು ಕಾಣಿಸಿಕೊಂಡರೆ ತಕ್ಷಣವೇ ದಂತ ವೈದ್ಯರನ್ನು ಭೇಟಿಯಾಗಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು ಹಲ್ಲಿನ ಕ್ಷಯ ಅಥವಾ ಜಂಗೈವಿಟಸದಂತಹ ಹಲ್ಲಿನ ಸಮಸ್ಯೆಗಳು ಬರುವ ಸಾಧ್ಯತೆ ಇರುವುದು ಅಂತಹ ಭಯಾನಕ ರೋಗ ರುಜನಿಗಳಿಂದ ದೂರ ವೀರಲು ತಂಬಾಕು, ಗುಟುಕಾಗಳ ಸೇವನೆಯಿಂದ ದೂರ ಇರಬೇಕು ಎಂದರು.
ರೋಣ ತಾಲೂಕಿನ ಜನರ ಸೇವೆಗೆ ನಮ್ಮ ಹಿರಿಯ ವೈದ್ಯರಾದ ಡಾ ಎಸ್ ಬಿ ಲಕ್ಕೋಳ ಅವರು ಬಹಳ ಶ್ರಮಿಸಿದ್ದಾರೆ ಅಲ್ಲದೇ ತಾಲೂಕಿನ ಜನರಿಗೆ ಹಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ತಮ್ಮ ಸುಪುತ್ರರಾದ ಡಾ. ಟಿ ಎಸ್ ಲಕ್ಕೋಳ ಅವರನ್ನು ತಯಾರು ಮಾಡಿ ಪಟ್ಟಣ ಸೇರಿದಂತೆ ತಾಲೂಕಿನ ಸಾರ್ವಜನಿಕರ ಹಲ್ಲಿನ ಸಮಸ್ಯೆಗಾಗಿ ಇಂದು ಉಚಿತ ದಂತ ಚಿಕಿತ್ಸಾ ಶಿಬಿರ ಏರ್ಪಡಿಸಿರುವುದು ನಿಮ್ಮೆಲರ ಸೌಭಾಗ್ಯ ಎಂದರು ಆದ್ದರಿಂದ ತಾವೆಲ್ಲರೂ ಇಂತಹ ವೈದ್ಯರ ಸೇವೆಯ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿರಿ ಎಂದರು.
ಈ ಕಾರ್ಯಕ್ರಮದಲ್ಲಿ ವಿಶೇಷ ವೈದ್ಯರಾದ ಸರಕಾರಿ ವೈದ್ಯರಾದ ಡಾ ಅವಿನಾಶ ಹಾಗೂ ಡಾ ದೀಪ್ತಿ ಅವಿನಾಶ, ಮುಖ್ಯ ಅತಿಥಿಗಳಾಗಿ ಮುತ್ತಣ್ಣ ಸಂಗಳದ ಟಿ ಬಿ ನವಲಗುಂದ, ಬಿ ಎನ್ ಬಳಗನೂರ,ಜೆ ಬಿ ಕಲ್ಲನಗೌಡರ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪ್ರಮೋದ ಚರಂತಿಮಠ ನಿರೂಪಿಸಿ ವಂದಿಸಿದರು
nice test comment