ದಿ.ಡಾ.ವಿಷ್ಣುವರ್ಧನ ಜನ್ಮದಿನ ಆಚರಣೆ ಹಾಗೂ ಸರ್ಕಲ್ ಉದ್ಘಾಟನೆ
ಗಜೇಂದ್ರಗಡ
ಸಾಹಸಸಿಂಹ, ಅಭಿನವ ಭಾರ್ಗವ, ಕನ್ನಡದ ಕಣ್ಮಣಿ ಡಾ ವಿಷ್ಣುವರ್ಧನ್ ಅವರ 74ನೇ ಜಯಂತಿಯ ಅಂಗವಾಗಿ ಗಜೇಂದ್ರಗಡ ಬಳಗದಿಂದ ವಿಷ್ಣು ವರ್ಧನ ಜಯಂತಿ ಹಾಗೂ ಕುಷ್ಟಗಿ ರಸ್ತೆಯಲ್ಲಿ ನೂತನ ಸರ್ಕಲ್ ಬುಧವಾರ ಉದ್ಘಾಟನೆಯನ್ನು ಮಾಡಲಾಯಿತು.
ಬಳಿಕ ಪುರಸಭೆ ಸದಸ್ಯ ಮುದಿಯಪ್ಪ ಮುದೋಳ ಮಾತನಾಡಿ
ಸಾಹಸಸಿಂಹ ವಿಷ್ಣುವರ್ಧನ್ ಅವರ ಆದರ್ಶ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ದೈಹಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಕೂಡ ವಿಷ್ಣುವರ್ಧನ್ ಅವರ ಆದರ್ಶಗಳ ಮುಖಾಂತರ ಹಾಗೂ ಅವರು ನಟಿಸಿದ ಚಲನಚಿತ್ರಗಳ ಮುಖಾಂತರ ಅವರು ಎಂದೆಂದಿಗೂ ಅಜರಾಮರವಾಗಿದ್ದಾರೆ ಇಂತಹ ಅಪ್ರತಿಮ ನಟ ಮತ್ತೆ ಕರುನಾಡಲ್ಲಿ ಹುಟ್ಟಿ ಬರಬೇಕೆಂದು ಭಗವಂತನಲ್ಲಿ ಪ್ರಾರ್ಥಿ ಸುತ್ತಾ ವಿಷ್ಣು ದಾದಾ ಅವರ ಜಯಂತಿಯ ಅಂದು ಅವರಿಗೆ ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದರು.
ಬಳಿಕ ಕನಕಪ್ಪ ಕಲ್ಲವಡ್ಡರ, ಅಂದಪ್ಪ ರಾಠೋಡ ಮಾತನಾಡಿದರು .
ಇದೇ ಸಂದರ್ಭದಲ್ಲಿ
ತಿರುಪತಿ ಕಲ್ಲವಡ್ಡರ, ದುರಗಪ್ಪ ಮುಧೋಳ, ಷಣ್ಮುಖಪ್ಪ ಚಿಲಝೇರಿ, ಮುದಿಯಪ್ಪ ಕೊಡಗಾನೂರ, ಗುರು ಕಲ್ಲವಡ್ಡರ , ಫಕೀರಪ್ಪ ನಿಡಗುಂದಿ, ಮುತ್ತು ಉಳ್ಳಾಗಡ್ಡಿ, ಬಸವರಾಜ ನಿಡಗುಂದಿ ಸೇರಿದಂತೆ ಅನೇಕರು.