ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ
ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ
—
ನರೇಗಲ್:
ಪಟ್ಟಣ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಯ ಚುನಾವಣೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲ ಪಡೆದು ಸ್ಪರ್ಧೆ ಮಾಡಿದ 15ನೇ ವಾರ್ಡಿನ ಬಿಜೆಪಿ ಸದಸ್ಯ ಫಕೀರಪ್ಪ ಮಳ್ಳಿ ಅಧ್ಯಕ್ಷರಾಗಿ ಹಾಗೂ 17ನೇ ವಾರ್ಡಿನ ಬಿಜೆಪಿ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಫಕೀರಪ್ಪ ಮಳ್ಳಿ, ಕುಮಾರಸ್ವಾಮಿ ಕೋರಧಾನ್ಯಮಠ ಚುನಾವಣೆಯಂದು ಬೆಳಿಗ್ಗೆ 10:40ಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರ ಕಾರಿನಲ್ಲಿ ಪಟ್ಟಣ ಪಂಚಾಯತಿಗೆ ದೌಡಾಯಿಸಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಪಕ್ಷದ ಪರವಾಗಿ 3ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನ ಭೂಮನಗೌಡ್ರ ಅಧ್ಯಕ್ಷ ಸ್ಥಾನಕ್ಕೆ, 8ನೇ ವಾರ್ಡಿನ ಸದಸ್ಯೆ ವಿಶಾಲಾಕ್ಷಿ ಹೊಸಮನಿ ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. 11 ಮತಗಳನ್ನು ಪಡೆದ ಫಕೀರಪ್ಪ ಮಳ್ಳಿ, ಕುಮಾರಸ್ವಾಮಿ ಕೋರಧಾನ್ಯಮಠ ಅವರು ವಿಜಯದಮಾಲೆ ಧರಿಸಿದರು. ಫಲಿತಾಂಶ ಹೊರಬಿಳುತ್ತಿದ್ದಂತೆ ಬೆಂಬಲಿತರು, ಕಾಂಗ್ರೆಸ್ ಕಾರ್ಯಕರ್ತರು, ಸಂಬಂಧಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಬಣ್ಣ ಹಚ್ಚಿ ಸಂಭ್ರಮಿಸಿದರು.
ಚುನಾವಣಾ ಅಧಿಕಾರಿಯಾಗಿ ಗಜೇಂದ್ರಗಡ ತಹಶೀಲ್ದಾರ ಕಿರಣಕುಮಾರ ಜಿ. ಕುಲಕರ್ಣಿ ಕಾರ್ಯನಿರ್ವಹಿಸಿದರು, ಶಿರಸ್ತೆದಾರ ಪಿ. ಬಿ. ಶಿಂಗ್ರಿ, ಪ.ಪಂ. ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಬಿ. ಎಚ್. ಗುಡಿಮುಂದಿನವರ ಇದ್ದರು.