ಸುಗಮ ಸಂಚಾರಕ್ಕೆ ಪೋಲಿಸ್ ಇಲಾಖೆಯ ಜೊತೆ ಕೈ ಜೋಡಿಸಿ : ಶಾಸಕ ಜಿ.ಎಸ್.ಪಾಟೀಲ
ಸುಗಮ ಸಂಚಾರಕ್ಕೆ ಪೋಲಿಸ್ ಇಲಾಖೆಯ ಜೊತೆ ಕೈ ಜೋಡಿಸಿ : ಶಾಸಕ ಜಿ.ಎಸ್.ಪಾಟೀಲ.
ಗಜೇಂದ್ರಗಡ:
ಕೋಟೆನಾಡು ಗಜೇಂದ್ರಗಡ ನಗರವೂ ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಶರವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಸಾರ್ವಜನಿಕರು ಸುಗಮ ಸಂಚಾರಕ್ಕೆ ಪೋಲಿಸ್ ಇಲಾಖೆಯ ಜೊತೆ ಕೈ ಜೋಡಿಸಬೇಕಾಗಿದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಗಜೇಂದ್ರಗಡ ಪೋಲಿಸ್ ಚೌಕಿ, ಟ್ರಾಫಿಕ್ ಸಿಗ್ನಲ್, ಸಿ.ಸಿ.ಕ್ಯಾಮರಾ ಉದ್ಘಾಟಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ನಗರದಲ್ಲಿನ ಜನ
ಸಂಖ್ಯೆ ಹೆಚ್ಚಿತ್ತಿದ್ದು, ಅಪರಾಧವನ್ನು ತಡೆಗಟ್ಟುವ ಉದ್ದೇಶದಿಂದ ಸಿ.ಸಿ.ಟಿ ವ್ಹಿ ಹಾಕಲಾಗಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು, ಸಂಚಾರ ನಿಯಮವನ್ನು ಕಡ್ಡಾಯವಾಗಿ ನಾವೆಲ್ಲಾ ಪಾಲನೆ ಮಾಡಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ಪೋಟೋ ಪೋಲಿಸ್ ಠಾಣೆಯಲ್ಲಿ ಕಾಣಿಸಿಕೊಳ್ಳುತ್ತದೆ ಅದಕ್ಕಾಗಿ ಇಲಾಖೆಯ ನಿಯಮ ಪಾಲನೆ ಮಾಡಬೇಕು ಎಂದರು.
ಬಳಿಕ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಇಲ್ಲವಾದಲ್ಲಿ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ. ಈಗಾಗಲೇ ನಗರದಲ್ಲಿ ೧೯ ಕ್ಯಾಮರಾಗಳು ಆ್ಯಕ್ಟಿವ್ ಅಗಿವೆ. ಥರ್ಡ್ ಐ ಮೂಲಕ ಈಗಾಗಲೇ ಸಂಚಾರ ನಿಯಮ ಉಲ್ಲಂಘಿಸುವವರಿಗೆ ನೋಟಿಸ್ ನೀಡಿದ್ದೇವೆ. ಹೀಗಾಗಿ ಶಾಸಕರ ಅನುಧಾನದಿಂದ, ತಾಲೂಕಾ ಇಲಾಖೆ, ಪುರಸಭೆ ಇಲಾಖೆ ವಿವಿಧ ಇಲಾಖೆಯ ಸಹಯೋಗದಲ್ಲಿ ಉದ್ಘಾಟಿಸಿದ ಶಾಸಕರಿಗೆ ಇಲಾಖೆಯಿಂದ
ಅಭಿನಂದನೆಗಳು ಸಲ್ಲಿಸುತ್ತೇವೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಕೂಲಕರ ಯೋಜನೆಗಳನ್ನು ಜಾರಿಗೆ ತರಲು ಇದ್ದೇವೆ ಎಂದರು.
ಇನ್ನೂ ರೇವಣಸಿದ್ದೇಶ್ವರ ನಗರದಲ್ಲಿನ ಪೋಲಿಸ್ ಠಾಣೆಯಲ್ಲಿ ೧೯ ಕ್ಯಾಮರಾಗಳ ಮಾನಿಟರಿಂಗ್ ಸಿಸ್ಟಮ್ ಅನ್ನು ಗದಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಉದ್ಘಾಟಿಸಿದರು.
ಇನ್ನೂ ಇದೇ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಪ್ರಭುಗೌಡ ಡಿ.ಕೆ, ಸಿ.ಪಿ.ಐ. ಎಸ್.ಎಸ್.ಬೀಳಗಿ, ಪಿ.ಎಸ್.ಐ. ಸೋಮನಗೌಡ ಗೌಡರ, ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮಂಜುಳಾ ರೇವಡಿ, ಶಾರದಾ ರಾಠೋಡ,
ಸಿದ್ದಣ್ಣ ಬಂಡಿ, ಚಂಬಣ್ಣ ಚವಡಿ, ಶಿವರಾಜ ಘೋರ್ಪಡೆ, ವಿಪಕ್ಷ ನಾಯಕ ಮುರ್ತುಜಾ ಡಾಲಾಯತ,
ಶ್ರೀಕಾಂತ ಅವಧೂತ, ರಾಜೂ ಸಾಂಗ್ಲೀಕರ, ಎ.ಡಿ.ಕೋಲಕಾರ,ವೆಂಕಟೇಶ ಮುದಗಲ್, ಶ್ರೀಧರ ಬಿದರಳ್ಳಿ, ಶರಣು ಪೂಜಾರ, ದಾದು ಹಣಗಿ, ಉಮೇಶ ರಾಠೋಡ, ಅಂದಪ್ಪ ರಾಠೋಡ,
ತಳಸಿನಾಥ ಮಾಳೋತ್ತರ ಸೇರಿದಂತೆ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಇದ್ದರು.