ಕನ್ನಡಿಗರದ್ದು ವಿಶಾಲ ಹೃದಯ : ಸ್ವಾಭಿಮಾನ, ನಿಯತ್ತಿಗೆ ಹೆಸರುವಾಸಿ ನಮ್ಮ ಕರುನಾಡು.
- ಕನ್ನಡಿಗರದ್ದು ವಿಶಾಲ ಹೃದಯ : ಸ್ವಾಭಿಮಾನ, ನಿಯತ್ತಿಗೆ ಹೆಸರುವಾಸಿ ನಮ್ಮ ಕರುನಾಡು.
ಜನಧ್ವನಿ ಕನ್ನಡ ಸುದ್ದಿಮೂಲ :
ಇತ್ತಿಚಿಗೆ ಭಾರತ ಟಿ.೨೦ ವಿಶ್ವಕಪ್ ಮುಡಿಗೆರಿಸಿದ ಮೇಲೆ ಇಡೀ ದೇಶಾದ್ಯಂತ ಸಂಭ್ರಮವನ್ನು ಹೇಳತ್ತಿರದ್ದು. ಕನ್ನಡಿಗ ಆಟಗಾರ ಇಲ್ಲವಾದರೂ ಕರುನಾಡಿನಲ್ಲಂತೂ ಮುಗಿಲು ಮುಟ್ಟಿತ್ತು. ಅದಕ್ಕೆ ಕಾರಣ ನಮ್ಮ ಕ್ರಿಕೆಟ್ ಜಗತ್ತಿನ ದಿ ವಾಲ್ (The wall).
ಪ್ರತಿಯೊಂದು ಗೆಲುವಿನ ಹಿಂದೆ ಗುರುವಿನ ಗುರುತ್ವ ಕಾಣುತ್ತೇವೆ. ಅಂತಹ ಗುರುವಿನ ಸ್ಥಾನದಲ್ಲಿ ನಿಂತು ಈ ಬಾರಿ ಟಿ.20 ವಲ್ಡ್ ಕಪ್ ಗೆಲ್ಲುವಂತೆ ಮಾಡಿದ್ದು ಇದೇ ದಿ.ವಾಲ್ ( The Wall) ಅವರೇ ಕನ್ನಡಿಗ ರಾಹುಲ ದ್ರಾವಿಡ.
ಅದರಲ್ಲಿ ಏನು ವಿಶೇಷ ಅಂತಿರಾ..
ಭಾರತ ಕಪ್ ಗೆದ್ದ ಬಳಿಕ 5 ಕೋಟಿಯ ಪ್ರೈಜ್ ಮನಿ (Prize Money) ನೀಡಿತ್ತು. ಆದರೆ ಅದನ್ನು ಕನ್ನಡಿಗ ವಿಶಾಲ ಹೃದಯವಂತ ತಿರಸ್ಕರಿಸಿದರು. ಅದಕ್ಕೆ ಬದಲಾಗಿ ಎಲ್ಲಾ ಕೋಚ್ ಗಳಿಗೆ ನೀಡುತ್ತಿದ್ದ 2.5 ಕೋಟಿಯನ್ನಷ್ಟೇ ತೆಗೆದುಕೊಂಡ ಭಾರತದ ಜನತೆಯ ಮನ ಗೆದ್ದಿದ್ದಾರೆ.
ಒಂದಡೆ ಭಾರತ ಟಿ.20 ವಿಶ್ವ ಕಪ್ ಗೆದ್ದ ಖುಷಿ ಇನ್ನೊಂದಡೆ ಅದರ ಸಾರಥಿ ರಾಹುಲ್ ದ್ರಾವಿಡ್ ಅವರ ಸರಳತೆ ಇದಕ್ಕೆ ಅನಿಸುತ್ತೆ ಭಾರತ ವಿಶ್ವಕಪ್ ಗೆದ್ದಿದ್ದು…
ಒಟ್ಟಿನಲ್ಲಿ ಅದು ಏನೇ ಇರಲಿ ಕರಿನಾಡಿನ ಕಲಿಗಳು ಯಾವುದೇ ಹೆಚ್ಚಿನ ಹಣದ ಆಮಿಷಗಳಿಗೆ ಒಳಗಾಗದೆ. ತಮ್ಮಗೆ ನೀಡಿರುವ ಸಂಭಾವನೆಯನ್ನು ಪಡೆದಿದ್ದು ಇಡೀ ಕ್ರಿಕೇಟ್ ಜಗತ್ತಿನಲ್ಲಿಯೇ ಇತಿಹಾಸ ಬರೆದಂತಾಗಿದೆ.