ಕೆ.ಎಸ್.ಪವಾರ ನಿಧನ ಹಿನ್ನೆಲೆ;ವಿದ್ಯಾರ್ಥಿಗಳಿಂದ ಮೌನಾಚರಣೆ..!
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸುರೇಂದ್ರಸಾ ರಾಯಬಾಗಿ ಹಾಗೂ ಶಾಲಾ ಆಡಳಿತಾಧಿಕಾರಿಗಳಾದ ಗೋವಿಂದ ದಂಡಿನ ಮಾತನಾಡಿ ಅಧ್ಯಕ್ಷರು ನಮ್ಮ ಶಾಲೆಯ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಶೈಕ್ಷಣಿಕ ಚಿಂತನೆಯು ಅಗಾಧವಾದದ್ದು, ಶಾಲೆಯ ಯಾವುದೇ ಕಾರ್ಯಕ್ಕೆ ಸ್ಪಂದಿಸುವ ಮೂಲಕ ಅವರು ನೀಡಿದ ಮಾರ್ಗದರ್ಶನ ನಮ್ಮಗೆಲ್ಲ ಸ್ಪೂರ್ತಿ ಎಂದರು.
ಜನಧ್ವನಿ ಸುದ್ದಿ ಗಜೇಂದ್ರಗಡ: ನಗರದ ಶ್ರೀ ಜಗದಂಬಾ ವಿದ್ಯಾವರ್ಧಕ ಸಂಘ, ಶ್ರೀ ವಿ. ಟಿ. ರಾಯಬಾಗಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಕೆ. ಎಸ್. ಪವಾರ ಅವರು ಮಂಗಳವಾರದಂದು ಹೃದಯಾಘಾತದಿಂದ ನಿಧನರಾಗಿದ್ದರು, ಈ ಹಿನ್ನಲೆಯಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೌನಾಚಾರಣೆಯನ್ನು ಮಾಡುವುದರ ಮುಖಾಂತರ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸುರೇಂದ್ರಸಾ ರಾಯಬಾಗಿ ಹಾಗೂ ಶಾಲಾ ಆಡಳಿತಾಧಿಕಾರಿಗಳಾದ ಗೋವಿಂದ ದಂಡಿನ ಮಾತನಾಡಿ ಅಧ್ಯಕ್ಷರು ನಮ್ಮ ಶಾಲೆಯ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಶೈಕ್ಷಣಿಕ ಚಿಂತನೆಯು ಅಗಾಧವಾದದ್ದು, ಶಾಲೆಯ ಯಾವುದೇ ಕಾರ್ಯಕ್ಕೆ ಸ್ಪಂದಿಸುವ ಮೂಲಕ ಅವರು ನೀಡಿದ ಮಾರ್ಗದರ್ಶನ ನಮ್ಮಗೆಲ್ಲ ಸ್ಪೂರ್ತಿ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರಾದ ಅಂಬಾಸಾ ರಾಯಬಾಗಿ, ಭಾಸ್ಕರ ರಾಯಬಾಗಿ, ಗುರುನಾಥಾಸಾ ರಾಯಬಾಗಿ, ಸಿದ್ರಾಮಸಾ ರಾಯಬಾಗಿ, ಗಣಪತಸಾ ರಂಗ್ರೇಜಿ, ರಾಘವೇಂದ್ರ ಕೆ., ಮಾರುತಿ ನದ್ಯಾಳ, ಶಿವರಾಜ ಛಲವಾದಿ, ಸುಮಾ ಯಡವಳ್ಳಿ, ಸೇರಿದಂತೆ ಅನೇಕರು ಇದ್ದರು.