ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ಶಿಸ್ತಿನ ಪಾಠ ಮಾಡಿ ಉತ್ತಮ ಪ್ರಜೆಯನ್ನಾಗಿಸಿ : ಮಕ್ತುಂಸಾಬ ಮುಧೋಳ( ಸಾಗರ)
ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ಶಿಸ್ತಿನ ಪಾಠ ಮಾಡಿ ಉತ್ತಮ ಪ್ರಜೆಯನ್ನಾಗಿಸಿ : ಮಕ್ತುಂಸಾಬ ಮುಧೋಳ( ಸಾಗರ)
ಗದಗ :
ಗದಗ ನಗರದಲ್ಲಿ 100 ವರ್ಷ ಪೂರೈಸಿದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂಬರ ೦೨ ರಲ್ಲಿ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಎಂ ವೈ ಮುಧೋಳರವರು ಶಾಲೆಯ ಎಲ್ಲಾ ಮಕ್ಕಳಿಗೆ ಅನುಕೂಲವಾಗುವಂತೆ ಅಳಿಲು ಸೇವೆಯ ರೂಪದಲ್ಲಿ ಬೆಲ್ಟ್ ಹಾಗೂ ಟೈ ನೀಡುವ ಮೂಲಕ ಮಕ್ಕಳ ಭವಿಷ್ಯದ ಕನಸಿಗೆ ಶಿಸ್ತಿನ ಪಾಲನೆ ಮಾಡಿದರು.
ಬಳಿಕ ಜೆಡಿಎಸ್ ಗದಗ ಜಿಲ್ಲಾ ಅಧ್ಯಕ್ಷರಾದ ಮಕ್ತುಂಸಾಬ ಮುಧೋಳ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಹೆಚ್ಚಿನ ಬಡತನ ಹೊಂದಿರುವ ಮಕ್ಕಳು ಇರುವುದರಿಂದ ಅವರಿಗೆ ಅನುಕೂಲವಾಗಲೆಂದು ಒಂದು ಸಣ್ಣ ಅಳಿಲು ಸೇವೆ ರೂಪದಲ್ಲಿ ನೀಡಿದ್ದೇನೆ ಹಾಗೂ ಮುಂದೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಮಕ್ಕಳಿಗೆ ಬಹುಮಾನವನ್ನು ವಿತರಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಈರಣ್ಣ ಬಾಳಿಕಾಯಿ, ಹಾಜಿಅಲಿ ಎಚ್ ಕೊಪ್ಪಳ, ತಿಪ್ಪಣ್ಣ ಹುಡ್ಡೆದ. ಬಾದಷಾ ಭಾಗವಾನ ರವಿ ಮೋಹಿತೆ, ಶಾಲೆಯ ಎಲ್ಲಾ ಗುರುಗಳು ಗುರುಮಾತೆಯರು ಹಾಗೂ ಶಾಲೆಯ ಮುದ್ದು ಮಕ್ಕಳು ಇದ್ದರು.