ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಯ ಸ್ವಾಭಿಮಾನ ಹೆಚ್ಚಿದೆ ; ಕಳಕಪ್ಪ ಬಂಡಿ.
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮೋದಿಜೀ ಆಡಳಿತ ಅವಶ್ಯಕ : ಮಾಜಿ ಸಚಿವ ಕಳಕಪ್ಪ ಬಂಡಿ.
ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಯ ಸ್ವಾಭಿಮಾನ ಹೆಚ್ಚಿದೆ ; ಕಳಕಪ್ಪ ಬಂಡಿ.
ಗಜೇಂದ್ರಗಡ:
ದೇಶದ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡು ಶ್ರಮಿಸುತ್ತಿರುವ ಸಂತ ಮನಸ್ಸಿನ ಶ್ರೇಷ್ಠ ಪ್ರಧಾನಿಗಳಿಗೆ ಉತ್ತಮ ಆಯುರಾರೋಗ್ಯ ಹಾಗೂ ದೇಶಸೇವೆಗೆ ಹೆಚ್ಚಿನ ಶಕ್ತಿಯನ್ನು ದೇವರುಗಳು ದಯಪಾಲಿಸಲಿ ಎಂದು ಮಾಜಿ ಸಚಿವ,ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.
ನಗರದ ಕೊನೆಯ ಗ್ರಾಮ ಮ್ಯಾಕಲಝೇರಿ ಗ್ರಾಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನಿಮಿತ್ತ ಸಸಿನೆಟ್ಟು, ಮಾರುತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಮೋದಿಜಿಯವರ ನಾಯಕತ್ವದಲ್ಲಿ, ನಮ್ಮ ಗುರಿ, ಸೇವೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯು ನಿಜವಾಗುತ್ತಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಎಂಬುದು ಜನರ ಸಂಕಲ್ಪವಾಗಿದೆ. ಅವರ ನಾಯಕತ್ವ ಮತ್ತು ಮಾರ್ಗದರ್ಶನ ಅನೇಕ ಬಿಜೆಪಿ ಕಾರ್ಯಕರ್ತರಿಗೆ ಸದಾ ಸ್ಫೂರ್ತಿಯಾಗಿದೆ ಎಂದರು.
ಬಳಿಕ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ
ದೇಶವು ಭದ್ರತೆಗಾಗಿ ದುಡಿದ, ಹಿಂದುಳಿದವರ ಬದುಕಿನಲ್ಲಿ ಬದಲಾವಣೆ ತಂದು ಅವರನ್ನು ಮುಖ್ಯವಾಹಿನಿಗೆ ತಂದ ನಿರ್ಣಾಯಕ ನಾಯಕನನ್ನು ಮೋದಿ ರೂಪದಲ್ಲಿ ದೇಶ ಪಡೆದಿದೆ. ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಯ ಸ್ವಾಭಿಮಾನ ಹೆಚ್ಚಾಗಿರುವುದರೊಂದಿಗೆ ಭಾರತದ ಬಗೆಗಿನ ಜಾಗತಿಕ ದೃಷ್ಟಿಕೋನವೂ ಬದಲಾಗಿದೆ. ದೇಶದ ಪ್ರತಿಷ್ಠೆಯನ್ನು ಸಮುದ್ರದ ಆಳದಿಂದ ಬಾಹ್ಯಾಕಾಶದ ಎತ್ತರಕ್ಕೆ ಏರಿಸಿದ ಮೋದಿ ಅವರು ವಿಶ್ವದಾದ್ಯಂತ ಶಾಂತಿ, ಸಹಾನುಭೂತಿಗೆ ಸ್ಫೂರ್ತಿಯಾಗಿದ್ದಾರೆಂದು ಹೇಳಿದರು.
ಬಳಿಕ ಸಮೀಪದ ಮ್ಯಾಕಲಝೇರಿ, ಕುಟೋಂಜಿ, ಬೆಣಚಮೆಟ್ಟಿ, ನಾಗರಸಕೊಪ್ಪ ಗ್ರಾಮಗಳಲ್ಲಿ ಸದಸ್ಯತ್ವಾ ಅಭಿಯಾನಕ್ಕೆ ಮಾಜಿ ಸಚಿವ, ಮಾಜಿ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮುದಿಯಪ್ಪ ಕರಡಿ, ಉಮೇಶ ಮಲ್ಲಾಪೂರ,ಕುಮಾರ
ರಾಠೋಡ, ಮಹಾಂತೇಶ ಪೂಜಾರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
********************