ಎ.ಪಿ.ಎಲ್ ಲೀಗ್ ಡಾಲಾಯತ್ ಬ್ರದರ್ಸ್ ಚಾಂಪಿಯನ್.
ಗಜೇಂದ್ರಗಡ ::
ಪಟ್ಟಣ ಡಾ. ಎಪಿಜೆ ಅಬ್ದುಲ್ ಕಲಾಂ ಕ್ರಿಕೆಟ್ ಪ್ರಿಮಿಯರ್‌ಲೀಗ್‌ನ ಫೈನಲ್ ಪಂದ್ಯದಲ್ಲಿ ಟಿಪ್ಪು ವಾರಿಯರ್ಸ್ ಹಾಗೂ ಡಾಲಾಯತ್ ಬ್ರದರ್ಸ್ ನಡುವಿನ ಪಂದ್ಯದಲ್ಲಿ ಡಾಲಾಯತ್ ಬ್ರದರ್ಸ್ ತಂಡ 1 ರನ್‌ನಿಂದ ರೋಚಕ ಗೆಲುವು ಸಾಧಿಸಿತು. ಕುಷ್ಟಗಿ ರಸ್ತೆಯ ಮುತ್ತಣ್ಣ ಮೆಣಸಿನಕಾಯಿ ಅವರ ಬಯಲು ಜಾಗೆಯಲ್ಲಿ ಕಳೆದ 21 ದಿನಗಳಿಂದ ನಡೆಯುತ್ತಿದ್ದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡಾಲಾಯತ್ ಬ್ರದರ್ಸ್ ತಂಡ 10 ಒವರ್‌ನಲ್ಲಿ 79 ರನ್ ಕಲೆಹಾಕಿತು. ಫಾರೂಕ ತಟಗಾರ 2 ಒವರ್20 ರನ್ 2 ವಿಕೆಟ್, ಮೈನು 2 ಒವರ್13 ರನ್, ಮೈಬು ಹವಾಲ್ದಾರ್2 ಒವರ್17 ರನ್ 1 ವಿಕೆಟ್, ಸಲೀಂ ಹವಲ್ದಾರ್2
ಒವರ್14 ರನ್ 1 ವಿಕೆಟ್ ಹಾಗೂ ಯಾಸೀನ್ 2 ಒವರ್12 ರನ್ 2 ವಿಕೆಟ್ ಪಡೆದಿದ್ದರಿಂದ ಡಾಲಾಯತ್ ತಂಡವನ್ನು 79 ರನ್‌ಗೆ ಕಟ್ಟಿ ಹಾಕಿದರು.
ಡಾಲಾಯತ್ ಬ್ರದರ್ಸ್ ತಂಡ ನೀಡಿದ್ದ 80 ರನ್‌ನ ಗುರಿ ಬೆನ್ನಟ್ಟಿದ ಟಿಪ್ಪು ವಾರಿಯನ್ಸ್ ತಂಡ 1 ರನ್‌ನಿಂದ ಸೋಲನುಭವಿಸಿತು. ನಜೀರ್ ಸರ್ಕಾವಸ್ 2 ಒವರ್10 ರನ್ 1 ವಿಕೆಟ್, ಸಲೀಂ ಕಡ್ಲಿಮಟ್ಟಿ 2 ಒವರ್16 ರನ್ 2 ವಿಕೆಟ್, ರಜಾಕ್ ಪೊಲೀಸ್ 2 ಒವರ್19 ರನ್ 1 ವಿಕೆಟ್, ಶಾಹೀಲ್ ಮೋಮಿನ್ 2 ಒವರ್13 ರನ್ ನೀಡಿದರು. 2 ಒವರ್16 ರನ್ 3 ವಿಕೆಟ್ ಪಡೆದ ಗಫರ್ ಡಾಲಾಯಾತ್ ಮ್ಯಾನ್ ಆಪ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪೋಟೋ ಶಿರ್ಷಿಕೆ:
ಗಜೇಂದ್ರಗಡ ಡಾ.ಅಬ್ದುಲ್ ಕಲಾಂ ಕ್ರಿಕೆಟ್ ಪ್ರಿಮಿಯರ್‌ಲೀಗ್‌ನ ಫೈನಲ್ ಪಂದ್ಯದಲ್ಲಿ ಡಾಲಾಯತ್ ಬ್ರದರ್ಸ್ ತಂಡ ಗೆಲುವು ಸಾಧಿಸಿತು.