ಗದಗಕುಕನೂರುಕುಷ್ಟಗಿಕೊಪ್ಪಳಜಿಲ್ಲಾ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು
ಮೊದಲನೇ ದಿನದ ಶ್ರೀಗಳ ಪಾದಯಾತ್ರೆ ೮ ನೇ ವಾರ್ಡಿಗೆ
ಮೊದಲನೇ ದಿನದ ಶ್ರೀಗಳ ಪಾದಯಾತ್ರೆ ೮ ನೇ ವಾರ್ಡಿಗೆ.
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ:
ಕೋಟೆನಾಡಿನಲ್ಲಿ ಒಂದು ತಿಂಗಳ ಕಾಲ ನಡೆಯುವ ಬಸವ ಪುರಾಣ ನಡೆಯುತ್ತಿದ್ದು ಇಂದು ಅದ್ದೂರಿ, ಭಕ್ತಿಪೂರ್ವಕವಾಗಿ ಚಾಲನೆ ಸಿಕ್ಕಿದೆ.
ಈ ನಿಟ್ಟಿನಲ್ಲಿ ನಗರದಲ್ಲಿನ ಪ್ರತಿ ದಿನವೂ ಹಾಲಕೇರಿಯ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಪ್ರತಿನಿತ್ಯವೂ ಕೂಡಾ ಮುಂಜಾನೆ ಒಂದೊಂದು ಸ್ಥಳಗಳಲ್ಲಿ ( ವಾರ್ಡುಗಳಿಗೆ) ತೆರಳಿ ಅಲ್ಲಿನ ಭಕ್ತರನ್ನುದ್ದಿಸಿ ಆರ್ಶಿವಚನ ನೀಡಲಿದ್ದಾರೆ.
ಮಂಗಳವಾರ ದಿನಾಂಕ 26/11/2024 ರಂದು ಮುಂಜಾನೆ 6 ಗಂಟೆಯಿಂದ 8 ಗಂಟೆಯವರೆಗೆ ನಗರದ 8 ನೇ ವಾರ್ಡ್ ನ ಹಿರೇ ಅಗಸಿಯಿಂದ ಪ್ರಾರಂಭವಾದ ಶ್ರೀಗಳ ಪಾದಯಾತ್ರೆಯು ವಿರೂಪಾಕ್ಷೇಶ್ವರ ದೇವಾಲಯ, ಹಿರೇ ಬಜಾರ, ಚೋಳಿನನವರ ಓಣಿಯಲ್ಲಿ ನಡೆಯಲಿದ್ದು, ಮರಳಿ ವಿರೂಪಾಕ್ಷೇಶ್ಷರ ದೇವಾಲಯದಲ್ಲಿ ಶ್ರೀಗಳ ಕಾರ್ಯಕ್ರಮ ನಡೆಯಲಿದೆ ಎಂದು ಬಸವ ಪುರಾಣ ಸಮಿತಿ ಪ್ರಕಟನೆ ನೀಡಿದೆ.
ವರದಿ: ಸಂ.