ಮಕ್ಕಳು ಸದೃಡರಾಗಲು ಕ್ರೀಡೆ ಅವಶ್ಯಕ : ಆರ್.ಜಿ.ಮ್ಯಾಕಲ್.
ಮಕ್ಕಳು ಸದೃಡರಾಗಲು ಕ್ರೀಡೆ ಅವಶ್ಯಕ : ಆರ್.ಜಿ.ಮ್ಯಾಕಲ್.
ಗಜೇಂದ್ರಗಡ :
ಶೈಕ್ಷಣಿಕ ಜೀವನದಲ್ಲಿನ ಮಕ್ಕಳು ಸದೃಢ ಆರೋಗ್ಯ ವೃದ್ದಿಸಲು ಕ್ರೀಡೆ ಅತ್ಯವಶ್ಯಕ ಎಂದು ದಕ್ಷಿಣ ವಲಯದ ಸಿ.ಆರ್.ಪಿ. ಆರ್.ಜಿ.ಮ್ಯಾಕಲ್ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ವಲಯದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿ ಮಾತನಾಡಿದರು.
ಮಕ್ಕಳು ಕೇವಲ ಬೌದ್ಧಿಕ ಬೆಳವಣಿಗೆ ಒತ್ತನ್ನು ನೀಡದೆ. ಶಾರೀರಿಕ ಬೆಳವಣಿಗೆ ಕೂಡಾ ಒತ್ತನ್ನು ನೀಡಬೇಕು.ಅದಕ್ಕೆ ಶಾಲಾ ಕಾಲೇಜುಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೂಲಕ ದೈಹಿಕ ಮತ್ತು ಮಾನಸಿಕ ವೃದ್ದಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಮಕ್ಕಳು ಕ್ರೀಡೆಯ ಬಗ್ಗೆಯೂ ಜ್ಞಾನ ಹೊಂದಬೇಕು ಎಂದರು.
ಬಳಿಕ ಎಸ್.ಕೆ.ಸರಗಣಾಚಾರಿ ಮಾತನಾಡಿ ಸದೃಢ ದೇಹದಲ್ಲಿ ಸದೃಢ ಆರೋಗ್ಯ ಎನ್ನುವಂತೆ ಮಕ್ಕಳು ಆರೋಗ್ಯಯುತರಾಗಲು ಕ್ರೀಡೆಗಳು ಸಹಾಯಕವಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ವೆಂಕಟೇಶ ಮುದಗಲ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು, ಕ್ರೀಡಾಜ್ಯೋತಿಯನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷ ಶ್ರಿನಿವಾಸ ಶಿಪ್ರಿ ಸ್ವೀಕರಿಸಿದರು.
ಇದೇ ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎ.ಫಣಿಭಂದ,
ಉತ್ತರ ವಲಯದ ಸಿ.ಆರ್.ಪಿ. ಕಾಲೇಶ ವನ್ನಾಲ, ಶ್ರೀಮತಿ ಎ.ವಾಯ್.ಗಜಾಕೋಶ,
ಶ್ರೀಮತಿ ಎಸ್.ಆರ್.ಅಂಗಡಿ, ಶ್ರೀ ಬಿ.ಎಸ್.ಅಣ್ಣಿಗೇರಿ,
ಶ್ರೀ ಆರ್.ಕೆ.ಕವಡಿಮಟ್ಟಿ,ತುಳಜಾರಾಮ್.ಮಾಳೋತ್ತರ,
ತಿಮ್ಮಣ್ಣ.ಮಾಳಗಿಮನಿ,ಶ್ರೀಮತಿ ಭೀಮವ್ವ.ಅರಳಿಗಿಡದ, ಪ್ರಕಾಶ ರಾಠೋಡ ಸೇರಿದಂತೆ ಅನೇಕರು
ಉಪಸ್ಥಿತರಿದ್ದರು.